ರ್ಯಾಂಕಿಂಗ್ ಗಾಗಿ ನಾವು ಆಡಲ್ಲ : ವಿರಾಟ್ ಕೊಹ್ಲಿ

ಈ ಸುದ್ದಿಯನ್ನು ಶೇರ್ ಮಾಡಿ

Virat Kohli

ಪೋರ್ಟ್ ಆಫ್ ಸ್ಪೇನ್, ಆ.23- ರ್ಯಾಂ ಕಿಂಗ್ಗೋಸ್ಕರ ನಾವು ಕ್ರಿಕೆಟ್ ಆಡುವುದಿಲ್ಲ. ಅದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದು ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.  ರ್ಯಾಂ ಕಿಂಗ್ಗಾಗಿ ಪಾಕ್ ತಂಡ ಕೂಡ ನಮಗೆ ಪೈಪೋಟಿ ನೀಡಿತ್ತು. ಒಂದು ವೇಳೆ ಪಾಕ್ ಸೋತು ನಂತರ ವೆಸ್ಟ್ ಇಂಡೀಸ್ ವಿರುದ್ಧ ಡ್ರಾ ಸಾಧಿಸಿದರೆ ನಾವು ನಂ.1 ಪಟ್ಟಕ್ಕೇರುತ್ತಿದ್ದೆವು. ಆದರೆ, ಅದೃಷ್ಟವಶಾತ್ ಅದು ಸಾಧ್ಯವಾಗಲಿಲ್ಲ ಎಂದರು.  ಪಾಯಿಂಟ್ಸ್ ಪಟ್ಟಿಯಲ್ಲಿ ನಮ್ಮ ತಂಡ ನಂ.1 ಪಟ್ಟಕ್ಕೆ ತುಂಬ ಹತ್ತಿರದಲ್ಲಿದೆ. ಮುಂಬರುವ ಟೆಸ್ಟ್ ಸರಣಿಯಲ್ಲಿ ಗೆಲುವು ಸಾಧಿಸಿ ನಂ.1 ಪಟ್ಟಕ್ಕೇರುತ್ತೇವೆ ಎಂದು ಕೊಹ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸದ್ಯ ಪಾಕಿಸ್ತಾನ (111) ಹಾಗೂ ಭಾರತ (110) ಟೆಸ್ಟ್ ರ್ಯಾಂ ಕಿಂಗ್ನಲ್ಲಿ ಕ್ರಮವಾಗಿ 1 ಮತ್ತು 2ನೆ ಸ್ಥಾನದಲ್ಲಿದೆ.   ವೆಸ್ಟ್ ಇಂಡೀಸ್ ಟೆಸ್ಟ್ ಸರಣಿಯಲ್ಲಿ 2-0 ಯಿಂದ ಸರಣಿ ವಶಪಡಿಸಿಕೊಂಡಿರುವ ಕೊಹ್ಲಿ ಬಳಗ ಅಂತಿಮ ಟೆಸ್ಟ್ನಲ್ಲಿ ಗೆಲುವು ಸಾಧಿಸಿ ನಂ.1 ಪಟ್ಟಕ್ಕೆ ಕಣ್ಣಿಟ್ಟಿತ್ತು. ಆದರೆ, ಈ ಟೆಸ್ಟ್ ಪಂದ್ಯ ಸಂಪೂರ್ಣ ಮಳೆಗೆ ಆಹುತಿಯಾಗಿ ಪಂದ್ಯವನ್ನೇ ರದ್ದುಮಾಡಲಾಯಿತು. ಹೀಗಾಗಿ ಭಾರತ ತಂಡ ಜಸ್ಟ್ 1 ಪಾಯಿಂಟ್ನಿಂದ ಈ ಅವಕಾಶವನ್ನು ಕಳೆದುಕೊಂಡಿತು.

Facebook Comments

Sri Raghav

Admin