ರ‍್ಯಾಗಿಂಗ್’ನಿಂದ ಮನನೊಂದ ಎಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

Ragging-002

ವಿಜಯವಾಡ, ನ.19-ರ‍್ಯಾಗಿಂಗ್’ನಿಂದ ಮನನೊಂದ ಎಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಸಾವಿಗೆ ಶರಣಾದ ಘಟನೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ  ನಂದ್ಯಾಲ ಪಟ್ಟಣದಲ್ಲಿ ನಡೆದಿದೆ.  ಖಾಸಗಿ ಎಂಜಿನಿಯರಿಂಗ್ ಕಾಲೇಜೊಂದರ ಹಿರಿಯ ವಿದ್ಯಾರ್ಥಿಗಳ ರ‍್ಯಾಗಿಂಗ್  ನಿಂದ ಪ್ರಥಮ ವರ್ಷದ ಬಿ.ಟೆಕ್ ವಿದ್ಯಾರ್ಥಿನಿ ಉಷಾ ರಾಣಿ ವಿಷ ಸೇವಿಸಿದಳು. ತೀವ್ರ ಅಸ್ವಸ್ಥಳಾದ ಆಕೆ ಬುದ್ವೆಲ್ ಪಟ್ಟಣದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಳು.  ಕಡಪ ಜಿಲ್ಲೆಯ ಉಷಾರಾಣಿ ಈ ತಿಂಗಳ ಆರಂಭದಲ್ಲಿ ತನ್ನ ಮನೆಗೆ ಹೋಗಿ ಗುರುವಾರವಷ್ಟೇ ತನ್ನ ತಂದೆಯೊಂದಿಗೆ ಕಾಲೇಜು ಹಾಸ್ಟೆಲ್‍ಗೆ ಹಿಂದಿರುಗಿದ್ದಳು. ಈ ಕಾಲೇಜಿನಲ್ಲಿ ಓದಲು ತನಗೆ ಇಷ್ಟವಿಲ್ಲ. ಇಲ್ಲಿ ಹಿರಿಯ ವಿದ್ಯಾರ್ಥಿಗಳಿಂದ ನಿರಂತರ ಕಿರುಕುಳ ನಡೆಯತ್ತಿದೆ ಎಂದು ತಂದೆ ಬಳಿ ಉಷಾ ಹೇಳಿಕೊಂಡಿದ್ದಳು.

ಉಷಾ ಆತ್ಮಹತ್ಯೆಗೆ ರ್ಯಾಂಗಿಂಗ್ ಕಾರಣ ಎಂದು ಆಕೆ ಪೋಷಕರು ಆರೋಪಿಸಿದ್ದಾರೆ. ಆದರೆ, ಕಾಲೇಜು ಆಡಳಿತ ಮಂಡಳಿ ಇದನ್ನು ತಳ್ಳಿಹಾಕಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin