ಲಂಕಾ ನಾಡಲ್ಲಿ ಕನ್ನಡ ಕಲಿಗಳ ಸಮರ..!

ಈ ಸುದ್ದಿಯನ್ನು ಶೇರ್ ಮಾಡಿ

KL-Rahul--011

ಕೊಲಂಬೊ, ಆ.19- ನಾಳೆಯಿಂದ ಶ್ರೀಲಂಕಾ ವಿರುದ್ಧ ನಡೆಯಲಿರುವ 5 ಏಕದಿನ ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಅಂತಿಮ 11 ರಲ್ಲಿ ಸ್ಥಾನ ಪಡೆದುಕೊಳ್ಳಲು ಕನ್ನಡಿಗರಾದ ಮನೀಷ್ ಪಾಂಡೆ ಹಾಗೂ ಕೆ.ಎಲ್. ರಾಹುಲ್ ನಡುವೆಯೇ ಸಮರ ನಡೆಯಲಿದೆ. 2019ರಲ್ಲಿ ನಡೆಯಲಿರುವ ವಿಶ್ವಕಪ್‍ನ ಮೇಲೆ ಕಣ್ಣಿಟ್ಟು ಈಗಿನಿಂದಲೇ ಅಭ್ಯಾಸ ನಡೆಸಲು ಚಿಂತಿಸಿರುವ ಟೀಂ ಇಂಡಿಯಾಗೆ ಶ್ರೀಲಂಕಾ ವಿರುದ್ಧದ ಸರಣಿಯು ಉತ್ತಮ ವೇದಿಕೆಯಾಗಿದೆ. ಈ ನಡುವೆ ತಂಡದಲ್ಲಿ ಸ್ಥಾನ ಪಡೆದಿರುವ ಕನ್ನಡಿಗರಾದ ಮನೀಷ್ ಪಾಂಡೆ ಹಾಗೂ ಕೆ.ಎಲ್.ರಾಹುಲ್‍ರ ಪೈಕಿ ಯಾರೂ ಟೀಮ್ ಇಲವೆನ್‍ನಲ್ಲಿ ಆಡಲಿದ್ದಾರೆ ಅಥವಾ ಇಬ್ಬರು ಆಟಗಾರರಿಗೂ ಲಕ್ ಕುದುರಲಿದೆಯೇ ಎಂಬ ಪ್ರಶ್ನೆಯೂ ಉದ್ಭವಿಸಿದೆ.

ಶ್ರೀಲಂಕಾ ವಿರುದ್ಧ ನಡೆದ 3 ಟೆಸ್ಟ್ ಪಂದ್ಯಗಳನ್ನು ವೈಟ್‍ವಾಷ್ ಮಾಡಿರುವ ವಿರಾಟ್ ಪಡೆಯು ಏಕದಿನ ಸರಣಿಯಲ್ಲೂ ಕ್ಲೀನ್‍ಸ್ವಿಮ್ ಮಾಡಲು ಯೋಚಿಸಿದ್ದರೆ, ಟೆಸ್ಟ್‍ನಲ್ಲಿ ಹೋದ ಮಾನವನ್ನು ಏಕದಿನ ಸರಣಿಯಲ್ಲಿ ಉಳಿಸಿಕೊಳ್ಳಲು ಲಂಕಾದ ನಾಯಕ ಉಪಲ್ ತರಂಗ ರಣತಂತ್ರ ರೂಪಿಸಿದ್ದಾರೆ.

ಆರಂಭಿಕ ದಾಂಡಿಗರ ಬಲ:

ಶ್ರೀಲಂಕಾಕ್ಕಿಂತ ಭಾರತ ತಂಡದಲ್ಲಿ ಆರಂಭಿಕ ಆಟಗಾರರ ಬಲ ಹೆಚ್ಚಿದೆ. ಟೆಸ್ಟ್ ಸರಣಿಯಲ್ಲಿ ರನ್‍ಗಳ ಸುರಿಮಳೆಯನ್ನೇ ಸುರಿಸಿದ್ದ ಶಿಖರ್ ಧವನ್, ರೋಹಿತ್ ಶರ್ಮಾ ಆ ಜವಾಬ್ದಾರಿಯನ್ನು ಹೊತ್ತಿದ್ದರೆ, ಅಜೆಂಕ್ಯಾ ರಹಾನೆ ಕೂಡ ಆರಂಭಿಕ ದಾಂಡಿಗನಾಗಿ ಕಣಕ್ಕಿಳಿಯಲು ಕಾತರದಿಂದಿದ್ದಾನೆ. ಇನ್ನು ಮೊದಲ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ರನ್ ಮಳೆಯನ್ನೇ ಸುರಿಸುವ ಬಲವನ್ನು ಹೊಂದಿದ್ದಾರೆ.
4ನೆ ಕ್ರಮಾಂಕದಲ್ಲಿ  ಕೆ.ಎಲ್.ರಾಹುಲ್:
ಕರ್ನಾಟಕದ ಕೆ.ಎಲ್.ರಾಹುಲ್‍ಕ್ಕೆ ತಂಡದಲ್ಲಿ ಸ್ಥಾನ ಸಿಕ್ಕರೆ 4ನೆ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕಾಗುತ್ತದೆ. ಗಾಯದ ಸಮಸ್ಯೆಯಿಂದ ಬಳಲಿದ್ದ ರಾಹುಲ್ ಐಪಿಎಲ್‍ನಲ್ಲಿ 4ನೆ ಕ್ರಮಾಂಕದಲ್ಲಿ ಆಡಿ ರನ್ ಮಿಷನ್ ಎನಿಸಿಕೊಂಡಿ ರುವುದರಿಂದ ಶ್ರೀಲಂಕಾದ ಬೌಲರ್‍ಗಳಿಗೆ ಕಬ್ಬಿಣದ ಕಡಲೆಯಾಗುವ ಸಂಭವವಿದೆ. ಅದೇ ಕ್ರಮಾಂಕದಲ್ಲೇ ಉತ್ತಮ ಪ್ರದರ್ಶನ ತೋರಿರುವ ಮತ್ತೊಬ್ಬ ಕನ್ನಡಿಗ ಮನೀಷ್ ಪಾಂಡೆಗೆ ಅವಕಾಶ ದೊರೆತರೂ ಆಶ್ಚರ್ಯವಿಲ್ಲ.
ಇನ್ನು ಮಾಧ್ಯಮ ಕ್ರಮಾಂಕದಲ್ಲಿ ವಿಕೆಟ್ ಕೀಪರ್ ಎಂ.ಎಸ್.ಧೋನಿ, ಕೇದಾರ್ ಜಾಧವ್, ಹಾರ್ದಿಕ್ ಪಾಂಡ್ಯಾ ತಂಡದ ಮೊತ್ತವನ್ನು ಹೆಚ್ಚಿಸುವ ಸಾಮಥ್ರ್ಯವನ್ನು ಹೊಂದಿ ದ್ದಾರೆ.

ಯುವ ಬೌಲರ್‍ಗಳು ಕಣಕ್ಕೆ:

ಮುಂಬರುವ ವಿಶ್ವಕಪ್‍ನ ದೃಷ್ಟಿಯಿಂದ ಬೌಲಿಂಗ್ ವಿಭಾಗವನ್ನು ಬಲಿಷ್ಠಗೊಳಿಸುವ ದೃಷ್ಟಿಯಿಂದ ತಂಡದ ಮುಖ್ಯ ಆಯ್ಕೆಗಾರ ಎಂ.ಎಸ್.ಪ್ರಸಾದ್ ಅವರು ಯುವ ಬೌಲರ್‍ಗಳಿಗೆ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.ಟೆಸ್ಟ್‍ನಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ತೋರಿದ್ದ ಮೊಹಮ್ಮದ್ ಶಮಿ , ಉಮೇಶ್‍ಯಾದವ್, ಅಶ್ವಿನ್ ಹಾಗೂ ಜಡೇಜಾಗೆ ವಿಶ್ರಾಂತಿ ನೀಡಿರುವುದರಿಂದ ಭುವನೇಶ್ವರ್‍ಕುಮಾರ್ ಬೌಲಿಂಗ್‍ನ ಸಾರಥ್ಯವನ್ನು ವಹಿಸಿಕೊಳ್ಳಲಿದ್ದಾರೆ. ಜಸ್‍ಪ್ರೀತ್ ಬೂಮ್ರಾ, ಯಜುವೇಂದ್ರ ಚಹಾಲ್, ಕುಲ್‍ದೀಪ್ ಯಾದವ್, ಶಾರ್ದೂಲ್ ಠಾಕೂರ್‍ರ ಪೈಕಿ ಯಾರಿಗೆ ಅವಕಾಶ ದೊರೆಯಲಿದೆ ಎಂಬುದನ್ನು ನೋಡಬೇಕು.

ಸೇಡು ತೀರಿಸಿಕೊಳ್ಳಲು ಲಂಕಾ ತಂತ್ರ:

ಟೆಸ್ಟ್ ಸೋಲಿನಿಂದ ಕಂಗೆಟ್ಟಿರುವ ಶ್ರೀಲಂಕಾದ ನಾಯಕ ಉಪಲ್‍ತರಂಗ ಏಕದಿನ ಸರಣಿಯನ್ನು ಗೆಲ್ಲಲೇಬೇಕೆಂಬ ಹಠಕ್ಕೆ ಬಿದ್ದಿದ್ದು ಆ ತಂಡದಲ್ಲಿರುವ ಹಿರಿಯ ಆಟಗಾರರಾದ ಮಾಲಿಂಗ, ತಿಸೇರಾ ಪೆರೇರಾ, ಅಂಜೆಲೋ ಮ್ಯಾಥ್ಯೂಸ್‍ರಿಂದ ಉತ್ತಮ ಪ್ರದರ್ಶನ ಹೊಮ್ಮಿಬಂದರೆ 2 ಪಂದ್ಯಗಳನ್ನು ಗೆಲ್ಲುವ ಮೂಲಕ 2019ರ ವಿಶ್ವಕಪ್‍ಗೆ ನೇರ ಅವಕಾಶ ಸಿಗಲಿದೆ.

Facebook Comments

Sri Raghav

Admin