ಲಂಕಾ ವಿರುದ್ಧ ಭಾರತಕ್ಕೆ 168 ರನ್ ಗಳ ಗೆಲುವು, 4-0 ಅಂತರದಲ್ಲಿ ಸರಣಿ ಮುನ್ನಡೆ

ಈ ಸುದ್ದಿಯನ್ನು ಶೇರ್ ಮಾಡಿ

4th-ODI

ಪ್ರೇಮದಾಸ್,ಆ.31-ಶ್ರೀಲಂಕಾ ವಿರುದ್ಧ ನಡುವೆ ನಡೆದ  ನಾಲ್ಕನೇ ಏಕದಿಂದ ಪಂದ್ಯದಲ್ಲಿ ಭಾರತ 168 ರನ್ ಗಳಿಂದ ಜಯಭೇರಿ ಭಾರಿಸುವ ಮೂಲಕ ಸರಣಿಯಲ್ಲಿ 4-0 ಅಂತರದಲ್ಲಿ ಮುನ್ನಡೆ  ಸಾಧಿಸಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಭಾರತ ಆರಂಭದಲ್ಲೇ ಧವನ್ ವಿಕೆಟ್ ಕಳೆದುಕೊಂಡರೂ ದೃತಿಗೆಡದೆ ಕೊಹ್ಲಿ ಹಾಗೂ ರೋಹಿತ್ ಜೋಡಿ ಉತ್ತಮ ಜೊತೆಯಾಟವಾಡುವ ಮೂಲಕ ಬೃಹತ್ ಮೊತ್ತ ಕಲೆಹಾಕುವಲ್ಲಿ ಯಶಸ್ವಿಯಾದರು. ನಾಯಕ ಕೊಹ್ಲಿ ಮತ್ತು ರೋಹಿತ್ ಶರ್ಮ ಭರ್ಜರಿ ಶತಕ ಸಿಡಿಸುವ  ಮೂಲಕ ಬೃಹತ್ ಮೊತ್ತ ಕಲೆಹಾಕುವಲ್ಲಿ ಯಶಸ್ವಿಯಾದರು.

ಭಾರತ ನೀಡಿದ 376 ರನ್‌ಗಳ ಬೃಹತ್ ಗೆಲುವಿನ ಗುರಿಯನ್ನು ಬೆನ್ನತ್ತಿದ ಆತಿಥೇಯ ಶ್ರೀಲಂಕಾ ತಂಡವು 42.4 ಓವರ್ಗಳಲ್ಲಿ 207 ರನ್ ಕಲೆ ಹಾಕಿ ಅಲೌಟ್ ಆಯಿತು. ಇದರಿಂದ ಸರಣಿಯ 4 ಪಂದ್ಯಗಳಲ್ಲೂ ಶ್ರೀಲಂಕಾ ಸೋಲನುಭವಿಸಿತು.
ಸ್ಕೋರ್ : ಭಾರತ : 375/5 / ಶ್ರೀಲಂಕಾ : 207 (42.4)

ಧೋನಿ ದಾಖಲೆ :

ಕೊಲಂಬೊದಲ್ಲಿ 300 ನೇ ಏಕದಿನ ಪಂದ್ಯ ಆಡಿದ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ 49 ರನ್ ಗಳಿಸುವ ಮೂಲಕ ಸ್ಮರಣೀಯ ಪಂದ್ಯದಲ್ಲಿ ವಿಶ್ವದಾಖಲೆ ಬರೆದಿದ್ದಾರೆ. ಅತಿ ಹೆಚ್ಚು ಬಾರಿ ನಾಟ್ ಔಟ್ ಆದ ಆಟಗಾರ ಎಂಬ ದಾಖಲೆಗೆ ಪಾತ್ರರಾದ ಧೋನಿ 73 ಏಕದಿನ ಪಂದ್ಯಗಳ ಇನ್ನಿಂಗ್ಸ್ ನಲ್ಲಿ ಅವರು ಅಜೇಯರಾಗುಳಿದಿದ್ದಾರೆ. ಶ್ರೀಲಂಕಾದ ಚಮಿಂದಾ ವಾಸ್, ದಕ್ಷಿಣ ಆಫ್ರಿಕಾದ ಶಾನ್ ಪೊಲಾಕ್ ಅವರು 72 ಪಂದ್ಯಗಳಲ್ಲಿ ಅಜೇಯರಾಗುಳಿದಿದ್ದು, 2 ನೇ ಸ್ಥಾನದಲ್ಲಿದ್ದಾರೆ. 99 ಸ್ಟಂಪಿಂಗ್ ಮಾಡುವ ಮೂಲಕ ಶ್ರೀಲಂಕಾದ ಕುಮಾರ ಸಂಗಕ್ಕಾರ ಅವರ ದಾಖಲೆಯನ್ನು ಸರಿಗಟ್ಟಿರುವ ಧೋನಿ ಇನ್ನೊಂದು ಸ್ಟಂಪಿಂಗ್ ಮಾಡಿದರೆ, ವಿಶ್ವ ದಾಖಲೆ ಬರೆಯಲಿದ್ದಾರೆ. ಧೋನಿ ಏಕದಿನ ಪಂದ್ಯಗಳಲ್ಲಿ 10 ಶತಕ, 65 ಅರ್ಧ ಶತಕಗಳನ್ನೊಳಗೊಂಡ 9657 ರನ್ ಗಳಿಸಿದ್ದಾರೆ.

ದ್ವಿಶತಕದ ದಾಖಲೆ ಜೊತೆಯಾಟ :

ಏಕದಿನ ಪಂದ್ಯಗಳಲ್ಲಿ 10 ಬಾರಿ ದ್ವಿಶತಕದ ಜೊತೆಯಾಟ ಆಡುವ ಮೂಲಕ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತೊಂದು ದಾಖಲೆ ಮಾಡಿದ್ದಾರೆ. 10 ಬಾರಿ ದ್ವಿಶತಕದ ಜೊತೆಯಾಟ ಆಡಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ ಕೊಹ್ಲಿ. ಶ್ರೀಲಂಕಾ ವಿರುದ್ಧದ 4ನೇ ಏಕದಿನ ಪಂದ್ಯದಲ್ಲಿ 2ನೇ ವಿಕೆಟ್ ಗೆ 219 ರನ್ ಗಳ ಜೊತೆಯಾಟ ನೀಡಿ ಈ ನೂತನ ದಾಖಲೆಯನ್ನು ಕೊಹ್ಲಿ ತನ್ನ ಹೆಸರಿಗೆ ಬರೆದುಕೊಂಡರು. ವೃತ್ತಿ ಜೀವನದ 29ನೇ ಶತಕ ಬಾರಿಸಿ ಶ್ರೀಲಂಕಾದ ಸನತ್ ಜಯಸೂರ್ಯ ದಾಖಲೆಯನ್ನು ಹಿಂದಿಕ್ಕಿದರು. ಕೊಹ್ಲಿ ಗೌತಮ್ ಗಂಭೀರ್ ಹಾಗೂ ರೋಹಿತ್ ಶರ್ಮಾ ಜೊತೆ ತಲಾ 3 ದ್ವಿಶತಕದ ಜೊತೆಯಾಟ ನೀಡಿದ್ದಾರೆ. ಜೊತೆಗೆ 2017ರಲ್ಲಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ದಾಖಲೆಯೂ ಸದ್ಯ ವಿರಾಟ್ ಕೊಹ್ಲಿ ಹೆಸರಲ್ಲಿದೆ.

 

Kohli

Facebook Comments

Sri Raghav

Admin