ಲಂಕಾ ಸ್ಪೋಟದಲ್ಲಿ ಮೃತಪಟ್ಟ ಒಟ್ಟು ಭಾರತೀಯರ ಸಂಖ್ಯೆ 10ಕ್ಕೇರಿಕೆ..!

ಈ ಸುದ್ದಿಯನ್ನು ಶೇರ್ ಮಾಡಿ

ಲಂಬೊ,ಏ.23- ಶ್ರೀಲಂಕಾದ ರಾಜಧಾನಿ ಕೊಲಂಬೊದಲ್ಲಿ ಈಸ್ಟರ್ ಸಂಡೆ ದಿನದಂದು ಸಂಭವಿಸಿದ 8 ಸರಣಿ ಸ್ಫೋಟದಲ್ಲಿ ಮೃತಪಟ್ಟ ಭಾರತೀಯರ ಸಂಖ್ಯೆ 10ಕ್ಕೇರಿದೆ.

ಭಯೋತ್ಪಾದಕರ ಅಟ್ಟಹಾಸಕ್ಕೆ ಈವರೆಗೆ 310 ಜನ ಬಲಿಯಾಗಿದ್ದು, ಗಾಯಗೊಂಡ 500ಕ್ಕೂ ಹೆಚ್ಚು ಮಂದಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕವಿದೆ.

ಶ್ರೀಲಂಕಾ ಸರ್ಕಾರ ಕ್ಷಮೆ ಯಾಚನೆ: 310 ಜನರನ್ನು ಬಲಿ ತೆಗೆದುಕೊಂಡು ಭಯೋತ್ಪಾದಕರ ದಾಳಿ ಬಗ್ಗೆ ಮುನ್ಸೂಚನೆ ಇದ್ದರೂ ಸಕಾಲದಲ್ಲಿ ಕ್ರಮ ಕೈಗೊಳ್ಳಲು ವಿಫಲವಾಗಿರುವುದಕ್ಕೆ ಶ್ರೀಲಂಕಾ ಸರ್ಕಾರ ಮೃತ ಕುಟುಂಬದವರ ಕ್ಷಮೆಯಾಚಿಸಿದೆ.

ಈ ಕುರಿತು ಹೇಳಿಕೆ ನೀಡಿರುವ ಸರ್ಕಾರದ ವಕ್ತಾರ ರಜೀತ್ ಸಿರಿಸೇನ, ಭಯೋತ್ಪಾದಕರ ದಾಳಿಯಿಂದ ತಮ್ಮವರನ್ನು ಕಳೆದುಕೊಂಡ ಕುಟುಂಬಗಳಿಗೆ ನಾವು ಸಾಂತ್ವಾನ ಹೇಳುತ್ತೇವೆ. 10 ದಿನಗಳ ಮುನ್ನವೇ ಮಾನವ ಬಾಂಬ್ ದಾಳಿ ಬಗ್ಗೆ ಮಾಹಿತಿ ಇತ್ತು.

ಆದರೂ ಸೂಕ್ತ ಕ್ರಮ ಕೈಗೊಳ್ಳಲು ನಾವು ವಿಫಲವಾದೆವು ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ.  ಈ ನಡುವೆ ಶ್ರೀಲಂಕಾದ ರಾಷ್ಟ್ರಾದ್ಯಂತ ಮೃತರ ಗೌರವಾರ್ಥ ಮೂರು ನಿಮಿಷಗಳ ಮೌನ ಆಚರಿಸಲಾಗಿದೆ.

Facebook Comments

Sri Raghav

Admin