ಲಂಚ ಪಡೆದ ಸರ್ವೆಯರ್‍ಗೆ ಜೈಲು ಶಿಕ್ಷೆ

ಈ ಸುದ್ದಿಯನ್ನು ಶೇರ್ ಮಾಡಿ

arrest

ದಾವಣಗೆರೆ,ಆ.31-ಲಂಚ ಪ್ರಕರಣದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಸರ್ವೇಯರ್‍ನೊಬ್ಬನಿಗೆ 10 ಸಾವಿರ ದಂಡ ಮತ್ತು ಒಂದು ವರ್ಷ ಜೈಲು ಶಿಕ್ಷೆಯನ್ನು ಜಿಲ್ಲಾ ನ್ಯಾಯಾಲಯ ವಿಧಿಸಿದೆ. ಸರ್ವೆಯರ್ ಸೋಮಶೇಖರ್ ಶಿಕ್ಷೆಗೊಳಗಾದ ಆರೋಪಿ. ಹರಪ್ಪನಹಳ್ಳಿ ತಾಲ್ಲೂಕಿನ ಮೈದೂರು ಗ್ರಾಮದ ನಿವಾಸಿಯಾದ ಕ್ಯಾರೆಕಟ್ಟೆ ಕೆಂಚನಗೌಡ ತಮ್ಮ ಜಮೀನಿಗೆ ಪೋಡಿ  ಮಾಡಿಸುವ ಸಲುವಾಗಿ ಸರ್ವೆಯರ್ ಸೋಮಶೇಖರ್‍ಗೆ ಹೇಳಿದ್ದರು. ಜಮೀನಿಗೆ ಪೋಡಿ  ಮಾಡಿಸುವ ಸಂಬಂಧಕ್ಕೆ ಒಂದು ಸಾವಿರ ರೂ. ಲಂಚವನ್ನು ಸರ್ವೆಯರ್ ಕೆಂಚನಗೌಡರಿಗೆ ಬೇಡಿಕೆಯಿಟ್ಟಿದ್ದು ,ಲಂಚ ಪಡೆಯುವ ಸಂದರ್ಭದಲ್ಲಿ ನೇರವಾಗಿ ದಾವಣಗೆರೆ ಲೋಕಾಯುಕ್ತರ  ಪೊಲೀಸರ ಬಲೆಗೆ ಬಿದ್ದಿದ್ದಾರೆ.

ನಂತರ ಲೋಕಾಯುಕ್ತ  ಪೊಲೀಸರು ಸರ್ವೆಯರ್ ಸೋಮಶೇಖರ್‍ನನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀದೇವಿಯವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮಶೇಖರ್‍ಗೆ 10 ಸಾವಿರ ರೂ. ದಂಡ ಮತ್ತು ಒಂದು ವರ್ಷ ಜೈಲು ಶಿಕ್ಷೆ ತೀರ್ಪು ನೀಡಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin