ಲಂಚ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದ ಬಾಬುರಾವ್ ಚಿಂಚನಸೂರ್ ಅವರ ಆಪ್ತ ಸಹಾಯಕ

ಈ ಸುದ್ದಿಯನ್ನು ಶೇರ್ ಮಾಡಿ

Currotiposfvn

ಯಾದಗಿರಿ, ಆ.30-ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಅವರ ಆಪ್ತ ಸಹಾಯಕನೊಬ್ಬ ಲಂಚ ಪಡೆಯುವ ವೇಳೆ ಭ್ರಷ್ಟಾಚಾರ ನಿಗ್ರಹದಳದ ಬಲೆಗೆ ಬಿದ್ದಿದ್ದಾನೆ. ಯಾದಗಿರಿ ವಸತಿಯೋಜನೆಯಡಿ ಮನೆ ಕೊಡಿಸುವುದಾಗಿ ವ್ಯಕ್ತಿಯೊಬ್ಬರಿಗೆ ಲಂಚಕ್ಕೆ ಬೇಡಿಕೆ ಇಟ್ಟಿರುವುದಾಗಿ ಬಂದ ದೂರನ್ನಧರಿಸಿ ದಾಳಿ ನಡೆಸಿದ ಎಸಿಬಿ ಚಿಂಚನಸೂರ್ ಅವರ ಪಿಎ ಆಶಾಪ್ಪ ಗಜಾರ್ಕೋಟ ಅವರನ್ನು ಬಲೆಗೆ ಕೆಡವಿದೆ.  ವಸತಿಯೋಜನೆಯಡಿಯ ಮನೆ ಕೊಡಿಸುವುದಾಗಿ ಒಂದು ಲಕ್ಷ ರೂ. ಲಂಚ ಸ್ವೀಕರಿಸುವ ವೇಳೆ ದಾಳಿ ನಡೆಸಿದ ಎಸಿಬಿ ಈತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ಸರ್ಕಾರಿ ಮನೆ ಹಂಚಿಕೆಯಲ್ಲೂ ಇವರ ಮೇಲೆ ಲಂಚದ ಗಂಭೀರ ಆರೋಪ ಇತ್ತು. ಕಳೆದ ಸುಮಾರು ದಿನಗಳಿಂದ ಎಸಿಬಿ ತಂಡ ಇವರ ಮೇಲೆ ನಿಗಾ ವಹಿಸಿತ್ತು.

ಯಾದಗಿರಿಯಲ್ಲಿ ನೂರಾರು ಸರ್ಕಾರಿ ಮನೆಗಳನ್ನು ಬಡವರಿಗೆ ಹಂಚುವ ಸಂಬಂಧ ಪ್ರತಿಯೊಬ್ಬರಿಂದಲೂ ಈತ ಒಂದು ಲಕ್ಷ ರೂ.ಗಳನ್ನು ನಿಗದಿ ಮಾಡಿ ವಸೂಲಿ ಮಾಡುತ್ತಿದ್ದ ಎಂಬ ಆರೋಪ ಕೇಳಿ ಬಂದಿತ್ತು.

► Follow us on –  Facebook / Twitter  / Google+

Facebook Comments

Sri Raghav

Admin