ಲಂಡನ್ ಏರ್‍ಪೋರ್ಟ್‍ನಲ್ಲಿ ರಾಸಾಯನಿಕ ಸೋರಿಕೆಯಿಂದ 30 ಮಂದಿ ಅಸ್ವಸ್ಥ

ಈ ಸುದ್ದಿಯನ್ನು ಶೇರ್ ಮಾಡಿ

London-Airport

ಲಂಡನ್, ಅ.22– ಇಲ್ಲಿನ ಅತ್ಯಂತ ಜನನಿಬಿಡ ವಿಮಾನನಿಲ್ಡಾಣವೊಂದರಲ್ಲಿ ರಾಸಾಯನಿಕ ಸೋರಿಕೆಯಿಂದಾಗಿ 30ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾದ ಘಟನೆ ನಿನ್ನೆ ನಡೆದಿದೆ. ಇದರಿಂದಾಗಿ ನೂರಾರು ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಸ್ಥಳಾಂತರಿಸಲಾಯಿತು ಮತ್ತು ಕೆಲಕಾಲ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಯಿತು. ಪೂರ್ವ ಲಂಡನ್‍ನ ಏರ್‍ಪೋರ್ಟ್‍ನಲ್ಲಿ ರಾಸಾಯನಿಕ ಸೋರಿಕೆಯಿಂದಾಗಿ 30ಕ್ಕೂ ಹೆಚ್ಚು ಮಂದಿಗೆ ಉಸಿರಾಟದ ಸಮಸ್ಯೆ ಎದುರಾಯಿತು. ತಕ್ಷಣ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಸಾಗಿಸಲಾಯಿತು ಎಂದು ಲಂಡನ್ ಆಂಬ್ಯುಲೆನ್ಸ್ ಸರ್ವಿಸ್ ಅಧಿಕಾರಿಗಳು ತಿಳಿಸಿದ್ದಾರೆ.

ರಾಸಾಯನಿಕ ಸೋರಿಕೆ ಸುದ್ದಿ ತಿಳಿದ ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಏರ್‍ಪೋರ್ಟ್‍ಗೆ ಧಾವಿಸಿ 500ಕ್ಕೂ ಹೆಚ್ಚು ಪ್ರಯಾಣಿಕರು, ಸಾರ್ವಜನಿಕರು ಮತ್ತು ಸಿಬ್ಬಂದಿಯನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಿದರು. ನಂತರ ರಾಸಾಯನಿಕ ಸೋರಿಕೆಯಾಗುತ್ತಿದ್ದ ವಿಮಾನನಿಲ್ಡಾಣದ ಒಂದು ಭಾಗವನ್ನು ದುರಸ್ಥಿಗೊಳಿಸಲಾಯಿತು. ಕೆಲ ಕಾಲ ಸ್ಥಗಿತಗೊಂಡಿದ್ದ ವಿಮಾನಗಳ ಹಾರಾಟ ಪುನರಾರಂಭವಾಯಿತು.

► Follow us on –  Facebook / Twitter  / Google+

Facebook Comments

Sri Raghav

Admin