ಲಂಡನ್ ವಿವಿಯಲ್ಲಿ ಸೆಕ್ಸ್ ಕೋರ್ಸ್ ಪ್ರಾರಂಭ

ಈ ಸುದ್ದಿಯನ್ನು ಶೇರ್ ಮಾಡಿ

sex-couseಲಂಡನ್, ಆ.9- ಚೀನಾದ ಕಾಲೇಜೊಂದರಲ್ಲಿ ಲವ್ ಟ್ರೈನಿಂಗ್ ಹೇಳಿಕೊಡುವ ಪಠ್ಯವನ್ನು ಅಳವಡಿಸಿದ್ದ ಬಗ್ಗೆ ಇತ್ತೀಚೆಗೆ ಸುದ್ದಿಯಾಗಿತ್ತು. ಭಾರತದಲ್ಲಿ ಪಠ್ಯದಲ್ಲಿ ಲೈಂಗಿಕ ಶಿಕ್ಷಣ ಅಳವಡಿಸುವ ಕುರಿತಂತೆ ಪರ-ವಿರೋಧದ ಚರ್ಚೆಗಳು ವ್ಯಾಪಕವಾಗಿ ನಡೆದಿವೆ.  ಹೀಗಿರುವಾಗಲೇ ಐರ್ಲೆಂಡ್‍ನ ವಿಶ್ವವಿದ್ಯಾಲಯವೊಂದರಲ್ಲಿ ಲೈಂಗಿಕ ಶಿಕ್ಷಣ ಕೋರ್ಸ್ ಆರಂಭಿಸಲಾಗಿದೆ. ಹೌದು, ಐರ್ಲೆಂಡ್‍ನ ಪ್ರತಿಷ್ಠಿತ ಡಬ್ಲಿನ್ ವಿಶ್ವವಿದ್ಯಾಲಯದಲ್ಲಿ ಸೆಕ್ಸ್ ಕೋರ್ಸ್ ಆರಂಭಿಸಲಾಗಿದೆ.  ಈಗಾಗಲೇ ವೆಬ್‍ಸೈಟ್‍ನಲ್ಲಿ ಜಾಹೀರಾತು ನೀಡಲಾಗಿದೆ. ಸೆಪ್ಟೆಂಬರ್‍ನಿಂದ ಲೈಂಗಿಕತೆ ಮತ್ತು ಲೈಂಗಿಕ ಆರೋಗ್ಯ ಕುರಿತಂತೆ ತರಗತಿಗಳು ಆರಂಭವಾಗಲಿವೆ ಎಂದು ವಿಶ್ವವಿದ್ಯಾಲಯ ಹೇಳಿದ್ದು, ಈ ಮೂಲಕ ಪ್ರವೇಶಕ್ಕೆ ವಿದ್ಯಾರ್ಥಿಗಳನ್ನು ಆಹ್ವಾನಿಸಿದೆ.  ಲೈಂಗಿಕತೆ ಮತ್ತು ಲೈಂಗಿಕ ಆರೋಗ್ಯ ಶಿಕ್ಷಣದ ಕೋರ್ಸ್‍ನಲ್ಲಿ, ಲೈಂಗಿಕತೆಯ ವೈವಿಧ್ಯತೆ, ಸಂಸ್ಕøತಿ ಮೊದಲಾದ ವಿಷಯಗಳನ್ನು ಹೇಳಿಕೊಡಲಾಗುವುದು. ಸೆಪ್ಟೆಂಬರ್‍ನಿಂದ ತರಗತಿಗಳು ಆರಂಭವಾಗಲಿವೆ. ಐರ್ಲೆಂಡ್‍ನಲ್ಲಿ ಲೈಂಗಿಕತೆ ಮುಕ್ತವಾಗಿದೆ ಅದಕ್ಕೆ ಎಲ್ಲೆಯಿಲ್ಲ ಎನ್ನಲಾಗಿದೆ.

Facebook Comments

Sri Raghav

Admin