ಲಕ್ಷ್ಮೀವಿಲಾಸ್ ಬ್ಯಾಂಕ್‍ಗೆ 203 ಕೋಟಿ ನಿವ್ವಳ ಲಾಭ

ಈ ಸುದ್ದಿಯನ್ನು ಶೇರ್ ಮಾಡಿ

lakshmi-vilas

ಬೆಂಗಳೂರು, ಜ.27- ಲಕ್ಷ್ಮೀ ವಿಲಾಸ್ ಬ್ಯಾಂಕ್ ತ್ರೈಮಾಸಿಕ ಹಣಕಾಸು ಮಾಸಾಂತ್ಯದಲ್ಲಿ (ಡಿಸೆಂಬರ್ 2016) ಶೇ.55.66ರಷ್ಟು ಪ್ರಗತಿ ಕಂಡಿದ್ದು, 203.91 ಕೋಟಿ ರೂ.ಗಳ ನಿವ್ವಳ ಲಾಭ ಪಡೆದಿದೆ.  ಠೇವಣಿ ಮೊತ್ತ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.15.93ರಷ್ಟು ಏರಿಕೆ ಕಂಡಿದ್ದು 5, 943.49 ಕೋಟಿ ಇದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕ್‍ನ ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕ ಟಿ.ಮುಖರ್ಜಿ ತಿಳಿಸಿದರು.  ದೇಶದ 16 ರಾಜ್ಯಗಳಲ್ಲಿ 467 ಶಾಖೆಗಳು, 927 ಎಟಿಎಂಗಳನ್ನು ಹೊಂದಿದ್ದು , ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುವತ್ತ ಜನ ಮನ್ನಣೆ ಗಳಿಸಿದೆ ಎಂದು ಅವರು ವಿವರಿಸಿದರು.  ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಲೆಕ್ಕ ಪರಿಶೋಧನಾ ವಿವರಗಳನ್ನು ಪ್ರಕಟಿಸಿ ಅನುಮೋದನೆ ಪಡೆಯಲಾಯಿತು. ಮುಂದಿನ ದಿನಗಳಲ್ಲಿ ಮತ್ತಷ್ಟು ಶಾಖೆಗಳನ್ನು ತೆರೆಯಲು ಮತ್ತು ಹಲವು ಹೊಸ ಯೋಜನೆಗಳನ್ನು ಜಾರಿಗೆ ತರಲು ಚಿಂತನೆ ನಡೆದಿದೆ ಎಂದು ಅವರು ತಿಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

 

Facebook Comments

Sri Raghav

Admin