ಲಕ್ಷ್ಮೀ ಹೆಬ್ಬಾಳ್ಕರ್ ಪರ ‘ಪವರ್’ ಮಿನಿಸ್ಟರ್ ಬ್ಯಾಟಿಂಗ್

ಈ ಸುದ್ದಿಯನ್ನು ಶೇರ್ ಮಾಡಿ

Laksmi--Hebbalkar--001

ಬೆಂಗಳೂರು, ಆ.31- ಲಕ್ಷ್ಮೀ ಹೆಬ್ಬಾಳ್ಕರ್ ಪರ ಡಿಕೆಶಿ ಬ್ಯಾಟಿಂಗ್ ಮಾಡಿದ್ದಾರೆ. ಅವರು ಯಾವುದೇ ತಪ್ಪು ಹೇಳಿಕೆ ನೀಡಿಲ್ಲ. ಮಾಧ್ಯಮದವರು ಅವರ ಭಾಷಣದ ಸಾರಾಂಶವನ್ನು ಸಂಪೂರ್ಣವಾಗಿ ಪ್ರಸಾರ ಮಾಡಿಲ್ಲ. ಕೆಲವು ಭಾಗ ಮಾತ್ರ ಉದ್ದೇಶಪೂರ್ವಕವಾಗಿ ಕಟ್ ಮಾಡಲಾಗಿದೆ ಎಂದು ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.

ಲಕ್ಷ್ಮೀ ಹೆಬ್ಬಾಳ್ಕರ್ ಅವರು ಯುವಕರಿಗೆ ಮತ್ತು ಯುವ ಜನತೆ ಹಿತ ಕಾಪಾಡಲು ಮಾತನಾಡಿದ್ದಾರೆ. ಆದರೆ, ಅವರನ್ನು ತೇಜೋವಧೆ ಮಾಡಲು ಕೆಲವರು ಹೊರಟಿದ್ದಾರೆ ಎಂದು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಡಿಕೆಶಿ ಮಾತನಾಡಿದರು. ನಾನು ಸಂಪೂರ್ಣ ಕ್ಲಿಪ್ಪಿಂಗ್ ನೋಡಿದ್ದೇನೆ. ಅವರು ಯಾವುದೇ ತಪ್ಪು ಮಾಡಿಲ್ಲ. ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿದ ಸಂಪೂರ್ಣ ಕ್ಲಿಪ್ಪಿಂಗ್‍ಅನ್ನು ಮಾಧ್ಯಮದವರು ಪ್ಲೇ ಮಾಡಿಲ್ಲ. ಕೆಲವು ಭಾಗ ಮಾತ್ರ ಉದ್ದೇಶಪೂರ್ವಕವಾಗಿ ಪ್ರಸಾರ ಮಾಡಲಾಗಿದೆ ಎಂದು ಡಿಕೆಶಿ ಹೆಬ್ಬಾಳ್ಕರ್ ಪರ ನಿಂತಿದ್ದಾರೆ.

Facebook Comments

Sri Raghav

Admin