ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದ ರೆವಿನ್ಯೂ ಇನ್ಸ್ಪೆಕ್ಟರ್ ಎಸಿಬಿ ಬಲೆಗೆ

ಈ ಸುದ್ದಿಯನ್ನು ಶೇರ್ ಮಾಡಿ

ACB

ಮಂಡ್ಯ, ನ.5-ಒಂದು ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ತಾಲೂಕಿನ ಕೊಟ್ಟಟ್ಟಿ ರೆವಿನ್ಯೂ ಇನ್ಸ್‍ಪೆಕ್ಟರ್‍ನನ್ನು ಎಸಿಬಿ ಪೊಲೀಸರು ಬಂಧಿಸಿದ್ದಾರೆ.ದೂರಿನ ಮೇರೆಗೆ ಸುಭಾಷ್ ನಗರದಲ್ಲಿರುವ ಕಚೇರಿಗೆ ದಾಳಿ ನಡೆಸಿದ ಎಬಿಸಿ ಪೊಲೀಸರು ರೆವಿನ್ಯೂ ಇನ್ಸ್‍ಪೆಕ್ಟರ್ ಸತ್ಯಮೂರ್ತಿಯನ್ನು ಬಂಧಿಸಿದ್ದು, ತಾಲೂಕಿನ ಕೊಟ್ಟಟ್ಟಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇವರು ಕಳೆದ ಕೆಲ ದಿನಗಳ ಹಿಂದೆ ತಿಮ್ಮನಹೊಸಹಳ್ಳಿ ಗ್ರಾಮದ ನಿವಾಸಿ ಸುರೇಶ್ ಎಂಬುವರು ತಮ್ಮ ಜಮೀನಿನ ಸಮಸ್ಯೆ ಬಗೆಹರಿಸುವಂತೆ ಇವರ ಬಳಿ ಬಂದಿದ್ದರು. ಈ ವೇಳೆ ಒಂದು ಲಕ್ಷ ರೂ.ಗಳಿಗೆ ಲಂಚದ ಕೋರಿಕೆ ಇಟ್ಟಿದ್ದರು.ಇಷ್ಟು ಹಣವನ್ನು ನೀಡಲು ಅಸಹಾಯಕನಾದ ಸುರೇಶ್ ಎಸಿಬಿ ಪೊಲೀಸರ ಮೊರೆ ಹೋಗಿದ್ದಾನೆ. ಇವರ ದೂರಿನನ್ವಯ ದಾಳಿ ನಡೆಸಿದ ಎಸಿಬಿ ಪೊಲೀಸರು ಸತ್ಯಮೂರ್ತಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin