ಲತಾಮಂಗೇಶ್ಕರ್‍ಗೆ ‘ಬಂಗಾಬಿಭೂಷಣ್’ ಪ್ರಶಸ್ತಿ ಪ್ರಕಟ

ಈ ಸುದ್ದಿಯನ್ನು ಶೇರ್ ಮಾಡಿ

Latha-mangeshkar

ಕೋಲ್ಕತ್ತಾ, ಸೆ. 18– ಭಾರತರತ್ನ , ಪದ್ಮವಿಭೂಷಣ ಪ್ರಶಸ್ತಿಗಳಿಗೆ ಭಾಜನರಾಗಿರುವ ಶ್ರೇಷ್ಠ ಗಾಯಕಿ ಲತಾಮಂಗೇಶ್ಕರ್‍ಗೆ ಬಂಗಾಬಿಭೂಷಣ್ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾಬ್ಯಾನರ್ಜಿ ತಿಳಿಸಿದ್ದಾರೆ. ಲತಾಮಂಗೇಶ್ಕರ್ ಅವರು ಶ್ರೇಷ್ಠ ಗಾಯಕಿಯಾಗಿದ್ದು ಬಂಗಾಳದ ಹಲವು ಚಿತ್ರಗಳಲ್ಲಿ ತಮ್ಮ ಸ್ವರಮಾಧುರ್ಯ ಹರಿಸಿರುವುದನ್ನು ಪರಿಗಣಿಸಿ ಅವರಿಗೆ ಈ ಬಾರಿಯ ಬಂಗಾಬಿಭೂಷಣ್ ಪ್ರಶಸ್ತಿಯನ್ನು ನೀಡುತ್ತಿದ್ದೇವೆ ಎಂದು ಹೇಳಿದ್ದಾರೆ.   ದುರ್ಗಾಪೂಜಾ ಹಬ್ಬದ ನಂತರ ಸ್ವತಹ ತಾವೇ ಮುಂಬೈನಲ್ಲಿರುವ ಲತಾಮಂಗೇಶ್ಕರ್‍ರ ನಿವಾಸಕ್ಕೆ ತೆರಳಿ ಸ್ವರ ಸಾಮ್ರಾಜ್ಞಿಗೆ ಬಂಗಾಬಿಭೂಷಣ್ ಪ್ರಶಸ್ತಿಯನ್ನು ಪ್ರದಾನ ಮಾಡುವುದಾಗಿ ಮಮತಾ ಬ್ಯಾನರ್ಜಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

2011ರಿಂದ ಆರಂಭಗೊಂಡಿರುವ ಬಂಗಾಬಿಭೂಷಣ ಪ್ರಶಸ್ತಿಯನ್ನು ಚಿತ್ರರಂಗ, ಕ್ರೀಡೆ, ಉದ್ಯಮ, ಸಾಹಿತ್ಯ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಪ್ರದಾನ ಮಾಡುತ್ತಿದ್ದು ಇದುವರೆಗೂ ಶ್ರೇಷ್ಠ ನೃತ್ಯಗಾರ್ತಿ ಅಮಲಾಶಂಕರ್, ಸರೋದ್ ವಾದಕ ಅಮ್ಜದ್ ಅಲಿಖಾನ್, ಶ್ರೇಷ್ಠ ಗಾಯಕ ಮನ್ನಾಡೆ, ಸಾಹಿತಿ ಮಹಾಶ್ವೇತಾದೇವಿ, ಫುಟ್‍ಬಾಲ್ ಆಟಗಾರ್ತಿ ಸೈಲೆನ್ ಮನ್ನಾ , ಒಲಿಂಪಿಕ್ ಹಾಕಿ ಆಟಗಾರ್ತಿ ಲೆಸ್ಲಿ ಕ್ಲ್ಯುಡಿಯಸ್ , ಕ್ರಿಕೆಟಿಗ ಸೌರವ್‍ಗಂಗೂಲಿ ಮತ್ತಿತರರಿಗೆ ಈ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ.

► Follow us on –  Facebook / Twitter  / Google+

Facebook Comments

Sri Raghav

Admin