ಲವ್ ಬರ್ಡ್ ಜತೆ ಮತ್ತೆ ಕಾಣಿಸಿಕೊಂಡ ಟೈಗರ್

ಈ ಸುದ್ದಿಯನ್ನು ಶೇರ್ ಮಾಡಿ

disha-patane

ಬಾಲಿವುಡ್‍ನ ಉದಯೋನ್ಮುಖ ತಾರೆಯರಾದ ಟೈಗರ್ ಶ್ರಾಫ್ ಮತ್ತು ದಿಶಾ ಪಟಾನಿ ಪ್ರಣಯದ ಪಕ್ಷಿಗಳು ಎಂಬುದು ಬಿ-ಟೌನ್‍ನಲ್ಲಿ ಜಗಜಾಹೀರವಾಗಿದೆ. ಕೆಲವು ತಿಂಗಳ ಹಿಂದೆ ವಿಡಿಯೋ ಸಾಂಗ್ ಚಿತ್ರೀಕರಣಕ್ಕಾಗಿ ಏಕಾಂತ ಸ್ಥಳದಲ್ಲಿ ಕಾಣಿಸಿಕೊಂಡಿದ್ದ ಈ ಜೋಡಿ ಮತ್ತೆ ಈಗ ಸುದ್ದಿಯಲ್ಲಿದ್ದಾರೆ.
ಬಿಡುವು ಲಭಿಸಿದಾಗ ವಾರಾಂತ್ಯದಲ್ಲಿ ಬಾಲಿವುಡ್ ತಾರೆಯರು ತಮ್ಮ ಹೃದಯಕ್ಕೆ ಹತ್ತಿರವಾದವರೊಂದಿಗೆ ಪ್ರಶಾಂತ ಸ್ಥಳಕ್ಕೆ ಹೋಗುತ್ತಾರೆ. ಕೆಲವರು ರೆಸಾರ್ಟ್‍ಗಳಿಗೆ ಮತ್ತು ಸಮುದ್ರ ತೀರಗಳಿಗೆ ಹೋಗುತ್ತಾರೆ. ಭಾನುವಾರ ಲವ್ ಬರ್ಡ್‍ಗಳಾದ ಟೈಗರ್ ಮತ್ತು ದಿಶಾ ಮುಂಬೈನ ಬಾಂದ್ರಾದಲ್ಲಿ ಒಟ್ಟಿಗೆ ಕಾಣಿಸಿಕೊಂಡರು. ಬೇಸಿಗೆ ಎಂಬ ಕಾರಣಕ್ಕಾಗಿ ಸಮರ್ ಡ್ರೆಸ್‍ನಲ್ಲಿದ್ದ ಇವರಿಬ್ಬರು ಕ್ಯಾಮೆರಾಗೆ ಆಹಾರವಾದರು. ತಮ್ಮ ಸಂಬಂಧಗಳ ಬಗ್ಗೆ ಇವರಿಬ್ಬರು ತುಟಿ ಬಿಚ್ಚದಿದ್ದರೂ. ಫೋಟೋಗಳು ಇವರಿಬ್ಬರ ಬಾಂಧವ್ಯದ ಬಗ್ಗೆ ಸಾರಿ ಹೇಳುತ್ತಿತ್ತು. ಈ ಹಿಂದೆ ಶೂಟಿಂಗ್ ನೆಪದಲ್ಲಿ ಟೈಗರ್ ಮತ್ತು ದಿಶಾ ಕಾಣಿಸಿಕೊಂಡು ಸುದ್ದಿಯಾಗಿದ್ದರು. ಬಾಲಿವುಡ್‍ನಲ್ಲಿ ಇವರಿಬ್ಬರ ಬಗ್ಗೆ ಗುಸುಗುಸು ಹಬ್ಬಿತ್ತು. ಇದಕ್ಕೆ ಕೇರ್ ಮಾಡದ ಈ ಪ್ರಯಣದ ಪಕ್ಷಿಗಳು ಯಾರನ್ನೂ ಲೆಕ್ಕಿಸದೇ ಮತ್ತೆ ಸ್ವಚ್ಚಂದವಾಗಿ ಹಾರಾಡುತ್ತಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin