ಲವ್ ಮಾಡಿ ಮದುವೆಯಾಗಿದ್ದ ಜೋಡಿ ಅನುಮಾನಾಸ್ಪದ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Couple-02

ಬಾಗಲಕೋಟೆ, ಡಿ.3- ಮನೆಯವರ ವಿರೋಧದ ನಡುವೆ ಪ್ರೀತಿಸಿ ವಿವಾಹವಾಗಿದ್ದ ಜೋಡಿ ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಘಟನೆ ಹುನಗುಂದ ತಾಲ್ಲೂಕಿನ ಹೂವಿನಹಳ್ಳಿ ಬಳಿ ನಡೆದಿದೆ. ಹುನಗುಂದ ತಾಲ್ಲೂಕಿನ ಕೈರವಾಡಗಿ ಗ್ರಾಮದ ಸಂಗಮೇಶಕುಂಬಾರ (30), ಅದೇ ಗ್ರಾಮದ ಹನುಮವ್ವ(24) ಮೃತ ದಂಪತಿ. ಮೇಲ್ನೋಟಕ್ಕೆ ಬೈಕ್ ಅಪಘಾತವಾಗಿ ಸಾವನ್ನಪ್ಪಿರುವಂತೆ ಕಂಡು ಬರುತ್ತಿದೆ. ಆದರೆ, ಈ ಇಬ್ಬರು ಕಳೆದ ತಿಂಗಳಷ್ಟೇ ವಿವಾಹವಾಗಿದ್ದರು. ಪರಸ್ಪರ ಪ್ರೀತಿಸುತ್ತಿದ್ದ ಇವರ ವಿವಾಹಕ್ಕೆ ಮನೆಯವರು ಅಡ್ಡಿಪಡಿಸಿದ್ದರು.

ಆದ ಕಾರಣ ಮನೆಯವರ ವಿರೋಧದ ನಡುವೆ ರಿಜಿಸ್ಟರ್ ವಿವಾಹವಾಗಿದ್ದರು. ಇಂದು ಅನುಮಾನಾಸ್ಪದವಾಗಿ ಇಬ್ಬರು ಸಾವನ್ನಪ್ಪಿದ್ದು, ಮನೆಯವರ ವಿರೋಧ ಈ ಘಟನೆ ಕಾರಣ ಇರಬಹುದೇ ಎಂದು ಶಂಕೆ ವ್ಯಕ್ತವಾಗಿದೆ. ಅಮೀನ್‍ಘಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು, ತನಿಖೆಯ ನಂತರ ಸತ್ಯಾಂಶ ಹೊರ ಬರಲಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin