ಲಾಟರಿ ಮಾರಾಟ ಪುನರಾರಂಭ ಮಾಡುವಂತೆ ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

lottry

ಬೆಂಗಳೂರು,ಜ.27- ಎಂಎಸ್‍ಐಎಲ್ ಮುಖಾಂತರ ಕಾನೂನು ಬದ್ಧ ಲಾಟರಿಯನ್ನು ಪುನರಾರಂಭಿಸಬೇಕೆಂದು ಕರ್ನಾಟಕ ರಾಜ್ಯ ಚಿಲ್ಲರೆ ಮಾರಾಟಗಾರರ ಸಂಘ ಸರ್ಕಾರವನ್ನು ಆಗ್ರಹಿಸಿದೆ.  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ರಾಮಕೃಷ್ಣ, ಕಳೆದ 2007ರಲ್ಲಿ ಲಾಟರಿ ನಿಷೇಧವಾದ ಮೇಲೆ ತಮಿಳುನಾಡು ಮೂಲದವರಿಂದ ವ್ಯಾಪಕ ಅಕ್ರಮ ಲಾಟರಿ ದಂಧೆ ನಡೆಯುತ್ತಿದೆ. ಈ ದಂಧೆಯಲ್ಲಿ ಪೊಲೀಸ್ ಅಕಾರಿಗಳು ಹಾಗೂ ರಾಜಕಾರಣಿಗಳು ಶಾಮೀಲಾಗಿರುವುದು ಬಹಿರಂಗ ವಾಗಿತ್ತು.  ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಾಗಿತ್ತಾದರೂ ಅಕ್ರಮ ದಂಧೆ ಎಂದಿಗೂ ನಿಂತಿಲ್ಲ. ಹೊರರಾಜ್ಯದ ಲಾಟರಿ ದಂಧೆ ರಾಜಾರೋಷವಾಗಿ ನಡೆಯುತ್ತಿದೆ. ಆನ್‍ಲೈನ್ ಲಾಟರಿಗಳು ವ್ಯಾಪಕವಾಗಿ ನಡೆಯುತ್ತಿವೆ. ಇದರಿಂದ ಕಾನೂನು ಬದ್ಧವಾಗಿ ನಡೆಯುತ್ತಿದ್ದ ಲಾಟರಿ ಮಾರಾಟಗಳಿಗೆ ಒಡೆತಬಿದ್ದಿದ್ದಲ್ಲದೆ, ಇದನ್ನು ನಂಬಿ ಬದುಕುತ್ತಿದ್ದವರು ಬೀದಿಪಾಲಾಗಿದ್ದಾರೆ ಎಂದರು.  ಇದರಿಂದ ಸರ್ಕಾರಕ್ಕೆ ಬರುತ್ತಿದ್ದ ಆದಾಯ ತಪ್ಪಿ ಹೋಗಿದೆ ಎಂದು ಅವರು ಹೇಳಿದರು.

ಕಾನೂನು ಬದ್ಧ ಸಾಂಪ್ರದಾಯಿಕ ಹಾಗೂ ಸಾಪ್ತಾಹಿಕ ಲಾಟರಿಯನ್ನು ಪುನರಾರಂಭಿಸಿದರೆ ಪ್ರತೀ ವರ್ಷ ಸರ್ಕಾರಕ್ಕೆ 4ಸಾವಿರ ಕೋಟಿ ರೂ.ಗೂ ಅಕ ಹಣ ಬರುತ್ತದೆ ಎಂದು ತಿಳಿಸಿದರು.  2007ರಲ್ಲಿ ಲಾಟರಿ ನಿಷೇಧ ಮಾಡಿದಾಗ ರಾಜ್ಯಾದ್ಯಂತ 8 ಲಕ್ಷ ಲಾಟರಿ ಮಾರಾಟಗಾರರಿದ್ದರು. ಅವರ ಬದುಕು ಅತಂತ್ರವಾಗಿದೆ. ಈಗ ಪುನರಾರಂಭಿಸಿದರೆ ಅವರು ಜೀವನ ರೂಪಿಸಿಕೊಳ್ಳಲು ಅನುಕೂಲವಾಗುತ್ತದೆ. ಸರ್ಕಾರಕ್ಕೂ ಆದಾಯ ಬರುತ್ತದೆ. ಅಕ್ರಮವಾಗಿ ನಡೆಯುತ್ತಿರುವ ಲಾಟರಿ ದಂಧೆ ನಿಂತು ಹೋಗುತ್ತದೆ ಎಂದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

 

Facebook Comments

Sri Raghav

Admin