ಲಾಭದಾಯಕ ಕಸುಬಿಗೆ ಆಧುನಿಕ ಯಂತ್ರ ಬಳಸಲು ಸಲಹೆ

ಈ ಸುದ್ದಿಯನ್ನು ಶೇರ್ ಮಾಡಿ

tarikere

ತರೀಕೆರೆ (ರಂಗೇನಹಳ್ಳಿ), ನ.21– ಕೃಷಿಕರು ಸಂಪ್ರಾದಾಯಿಕ ಕೃಷಿಯ ಜೊತೆಗೆ ಪೂರಕವಾದ ಉಪ ಕಸುಬುಗಳಾದ ಹೈನುಗಾರಿಕೆ, ಜೇನು ಸಾಗಾಣೆ, ಮೀನುಗಾರಿಕೆ, ಮುಂತಾದವು ಲಾಭದಾಯಕ ಕಸುಬಿನ ಜೊತೆಗೆ ಆಧುನಿಕ ಯಂತ್ರಗಳ ಬಳಕೆಯನ್ನು ಸಮರ್ಪಕವಾಗಿ ಮಾಡಿ ಆರ್ಥಿಕವಾಗಿ ಸದೃಢರಾಗುವಂತೆ ಎಂದು ಶಾಸಕ ಜಿ.ಹೆಚ್.ಶ್ರೀನಿವಾಸ್ ತಿಳಿಸಿದರು. ಶ್ರೀ ಧರ್ಮಸ್ಥಳ ಗ್ರಾಮೀಣ ಅಭಿವೃದ್ದಿ ಯೋಜನೆಯಡಿ ಕೃಷಿ, ತೋಟಗಾರಿಕೆ, ಪಶು ಸಂಗೋಪನೆ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಡೆದ 2016 ರ ಕೃಷಿ ಉತ್ಸವಉದ್ಘಾಟಿಸಿ ಮಾತನಾಡಿದರು. ರಾಜ್ಯ ಸರ್ಕಾರ ಬರಗಾಲ ಪೀಡಿತ ಪ್ರದೇಶ ಎಂದು ತಾಲ್ಲೂಕನ್ನು ಘೋಷಿಸದೇ ಹೋದರು ಸರ್ಕಾರದೊಡನೆ ಮಾತುಕತೆ ನಡೆಸಿದ ನಂತರ ಬರಗಾಲ ಪೀಡಿತ ಪ್ರದೇಶಕ್ಕೆ ಲಭ್ಯವಾಗುವ ಹಣವನ್ನು ರಾಜ್ಯ ಸರ್ಕಾರ ಭರಿಸುತ್ತದೆ ಎಂಬ ಆಶ್ವಾಸನೆ ದೊರೆತಿದೆ ಎಂದರು.

ರಾಜ್ಯ ಸರ್ಕಾರ ಆಧುನಿಕ ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆ ದರದಲ್ಲಿ ನೀಡಲು ಲಕ್ಕವಳ್ಳಿ ಲಿಂಗದಹಳ್ಳಿ ಮತ್ತು ಶಿವನಿ ಹೋಬಳಿ ಕೇಂದ್ರಗಳನ್ನು ಆಯ್ಕೆ ಮಾಡಿದ್ದು, ಈ ಕೇಂದ್ರಗಳಲ್ಲಿ ರೈತರಿಗೆ ಬೇಕಾದ ಬೀಜ ಗೊಬ್ಬರ ರಾಸಾಯನಿಕಗಳು ಸಹ ಲಭ್ಯವಾಗುತ್ತದೆ ಎಂದು ತಿಳಿಸಿದರು. ಎಸ್‍ಸಿ- ಎಸ್‍ಟಿ ರೈತರು ಉಪಕರಣ ಕೊಳ್ಳಲು ಶೇ.90ರಷ್ಟು ಸಹಾಯ ಧನ, ಇತರೆ ಸಾಮಾನ್ಯ ವರ್ಗದ ಜನರಿಗೆ ಶೇ.50ರಷ್ಟು ಸಬ್‍ಸೀಡಿ ನೀಡಲಾಗುತ್ತದೆ ಎಂದು ತಿಳಿಸಿದರು. ರೈತರ ವರಮಾನ ಹೆಚ್ಚಿಸಲು ಸೂಕ್ತ ಸಮಯದಲ್ಲಿ ಕೃಷಿ ಉತ್ಪನ್ನಗಳನ್ನು ಮಾರಲು ಮಾರುಕಟ್ಟೆಗಳ ಮಾಹಿತಿಯನ್ನು ಆನ್‍ಲೈನ್ ಮೂಲಕ ನೀಡಲು ವ್ಯವಸ್ಥೆ ಮಾಡಲಾಗಿದೆ ಎಂದರು.ಬರದ ಚಾಪು ಎದುರಿಸುತ್ತಿರುವ ನಮ್ಮ ತಾಲ್ಲೂಕಿನಲ್ಲಿ ಮುಂದೆ ಉಂಟಾಗಬಹುದಾದ ನೀರಿನ ಕೊರತೆ ಎದುರಿಸಲು ನೀಲಿ ನಾಕಶೆ ತಯಾರಿಸಿದ್ದು ಯಾವುದೇ ಕಾರಣಕ್ಕೂ ಮೇಲು, ನೀರು ಕೊರೆತೆಯಾಗದಂತೆ ಎಚ್ಚರಿಕೆ ವಹಿಸಲಾಗುವುದು. ಪ್ಲೊರೈಡ್ ನೀರು ಇರುವ ಕಡೆಗಳಲ್ಲಿ ಹಂತ ಹಂತವಾಗಿ ಶುದ್ದ ಗಂಗಾ ಕುಡಿಯುವ ನೀರಿನ ಘಟಕಗಳನ್ನು ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.

ಜಿಪಂ ಅಧ್ಯಕ್ಷೆ ಚೈತ್ರಶ್ರೀ ಮಾಲತೇಶ್ ಮಾತನಾಡಿ, ಕೇಂದ್ರ ಸರ್ಕಾರ ರೈತರಿಗೋಸ್ಕರ ಮಣ್ಣು ಪರೀಕ್ಷಾ ಕಾರ್ಡ್‍ಗಳನ್ನು ನೀಡುವಂತೆ ಆದೇಶಿಸಿದೆ. ಸಾವಯವ ಗೊಬ್ಬರ ಸಮರ್ಪಕವಾಗಿ ಉಪಯೋಗಿಸಿದರೆ ಫಲವತ್ತತ್ತೆ ಹೆಚ್ಚಾಗುತ್ತದೆ. ಕೃಷಿಯನ್ನು ಜರಿಯಾದೆ ಕಸುಬಾಗಿ ಪರಿವರ್ತನೆ ಮಾಡಿಕೊಂಡರೆ ಇದೊಂದು ಉತ್ತಮ ಆದಾಯ ಕ್ಷೇತ್ರ ಎಂದರು. ತಾಪಂ ಅಧ್ಯಕ್ಷೆ ಪದ್ಮಾವತಿ ಸಂಜೀವ್ ಕುಮಾರ್ ಮಾತನಾಡಿ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆ ಪರವಾಲಂಭಿಗಳನ್ನು ಸ್ವಾವಲಂಭಿಗಳಾಗಿಮಾಡುವ ನಿರಂತರ ಸೇವೆ ಮಾಡುತ್ತಿದ್ದು, ಮಹಿಳೆಯರಿಗೆ ಆರ್ಥಿಕ ಸಂಕಷ್ಟದಿಂದ ಹೊರ ಬರುವಂತೆ ಯೋಜನೆಗಳನ್ನು ರೂಪಿಸಿದೆ ಎಂದರು. ಪ್ರಗತಿಪರ ಕೃಷಿಕ ಎಸ್. ಲಕ್ಷ್ಮಣ ಮಾತನಾಡಿ, ವಿದ್ಯುತ್ ಕೊರತೆಯನ್ನು ನಿಗಿಸಲು ಸೋಲಾರ್ ಸಿಸ್ಟಮ್‍ಗಳನ್ನು ರೈತರು ಅಳವಡಿಸಿಕೊಂಡಲ್ಲಿ ನಿರಂತರವಾಗಿ ವಿದ್ಯುತ್ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.ತಾಲ್ಲೂಕು ಪಂಚಾಯಿತಿ ಸದಸ್ಯ ರಾಮಪ್ಪ, ಹಿರಿಯ ಕೃಷಿಕ ಹೆಚ್.ವಿಶ್ವನಾಥ್, ತೋಟಗಾರಿಕೆ ಅಧಿಕಾರಿ ಲೋಹಿತ್ ಮತ್ತಿತರರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin