ಲಾರಿಗೆ ಕ್ರೂಸರ್ ಡಿಕ್ಕಿ : ಭೀಕರ ರಸ್ತೆ ಅಪಘಾತದಲ್ಲಿ ಬೆಳಗಾವಿ ಮೂಲದ ಐವರ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Accident--01

ಚಿತ್ರದುರ್ಗ, ಜ.8- ಪ್ರವಾಸ ಮುಗಿಸಿಕೊಂಡು ಎಲ್ಲರೂ ಖುಷಿ ಖುಷಿಯಿಂದ ವಾಪಸ್ ಹೋಗುತ್ತಿದ್ದರು. ಇನ್ನೇನು ಕೆಲವೇ ಗಂಟೆ ಕಳೆದಿದ್ದರೆ ಎಲ್ಲರೂ ತಮ್ಮ ತಮ್ಮ ಮನೆಗಳನ್ನು ಸೇರಿಕೊಳ್ಳುತ್ತಿದ್ದರು. ಆದರೆ, ಯಮನಂತೆ ಬಂದ ಲಾರಿ ಐವರನ್ನು ಬಲಿ ತೆಗೆದುಕೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ-4 ಸೀಬಾರ ಗ್ರಾಮದ ಬಳಿ ನಡೆದಿದೆ.  ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಮುನ್ಯಾಳು ಗ್ರಾಮದ ರಾಕೇಶ್, ಶಿವಲಿಂಗು, ಸಿದ್ಧಾರ್ಥ, ವಿನೋದ್ ಹಾಗೂ ಕ್ರೂಸರ್ ಚಾಲಕ ಸುರೇಶ್ ಮೃತಪಟ್ಟವರು ಎಂದು ಗುರುತಿಸಲಾಗಿದೆ.

ಶನಿವಾರ ಮೈಸೂರಿಗೆ ಪ್ರವಾಸಕ್ಕೆಂದು ಮುನ್ಯಾಳು ಗ್ರಾಮದ 13 ಮಂದಿ ಕ್ರೂಸರ್ ವಾಹನದಲ್ಲಿ ತೆರಳಿದ್ದರು.  ನಿನ್ನೆ ಸಂಜೆವರೆಗೂ ಮೈಸೂರಿನ ವಿವಿಧ ಪ್ರವಾಸಿ ತಾಣಗಳನ್ನು ವೀಕ್ಷಣೆ ಮಾಡಿಕೊಂಡು ರಾತ್ರಿ ಮರಳಿ ಬೆಳಗಾವಿಗೆ ತೆರಳುತ್ತಿದ್ದಾಗ ಕಬ್ಬಿಣ ತುಂಬಿದ್ದ ಲಾರಿಗೆ ಕ್ರೂಸರ್ ಚಾಲಕನ ನಿಯಂತ್ರಣ ತಪ್ಪಿ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಐದು ಮಂದಿ ಸಾವನ್ನಪ್ಪಿದರೆ, ಉಳಿದ ಎಂಟು ಮಂದಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಸುದ್ದಿ ತಿಳಿದು ಸ್ಥಳಕ್ಕೆ ದಾವಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin