ಲಾರಿ-ಕೆಎಸ್‍ಆರ್‍ಟಿಸಿ ಬಸ್ ನಡುವೆ ಭೀಕರ ರಸ್ತೆ ಅಪಘಾತ : ಚಾಲಕರು ಸೇರಿ 5 ಮಂದಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Bus-1

ಹುಣಸೂರು, ಅ.26- ಲಾರಿ ಮತ್ತು ಕೆಎಸ್‍ಆರ್‍ಟಿಸಿ ಬಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಎರಡು ವಾಹನಗಳ ಚಾಲಕರು ಸೇರಿದಂತೆ ಐವರು ಸ್ಥಳದಲ್ಲೇ ಮೃತಪಟ್ಟು 15 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರು ಕೆಆರ್ ಪೇಟೆ ಮೂಲದ ಬಸ್ ಚಾಲಕ ಸದಾಶಿವ ಹಾಗೂ ಹರಿಹರ ಮೂಲದ ನಿರ್ವಾಹಕ ದೇವರಾಜು ಎಂದು ತಿಳಿದು ಬಂದಿದ್ದು, ಇನ್ನೂ ಮೂವರ ವಿವರಗಳು ಲಭ್ಯವಾಗಿಲ್ಲ. ಆಂಧ್ರದಿಂದ ಅಕ್ಕಿ ತುಂಬಿಕೊಂಡು ಮೈಸೂರಿನ ಮೂಲಕ ಹುಣಸೂರಿಗೆ ಬರುತ್ತಿದ್ದ ಲಾರಿ ಹಾಗೂ ವಿರಾಜಪೇಟೆಯಿಂದ ಮೈಸೂರು ಕಡೆಗೆ ಬರುತ್ತಿದ್ದ ಎಚ್‍ಡಿ ಕೋಟೆ ಡಿಪೋಗೆ ಸೇರಿದ ಸರ್ಕಾರಿ ಬಸ್‍ಗಳ ನಡುವೆ ಬೆಳಗ್ಗೆ 6.40ರ ಸುಮಾರಿಗೆ ಮಧುಗಿರಿ ಕೊಪ್ಪಲಿನ ಬಳಿ ಇಂದು ಬೆಳ್ಳಂಬೆಳಗ್ಗೆ ಡಿಕ್ಕಿ ಸಂಭವಿಸಿದೆ. ಮಂಜು ಮುಸುಕಿದ ವಾತಾವರಣವಿದ್ದುದರಿಂದ ಈ ಅಪಘಾತ ಸಂಭವಿಸಿದೆ.

Bus-5

ಲಾರಿ ಹಾಗೂ ಬಸ್ ಚಾಲಕರು ಮತ್ತು ಬಸ್‍ನಲ್ಲಿದ್ದ ಕಂಡಕ್ಟರ್ ಸೇರಿದಂತೆ ಮೂವರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಿಂಧುವಳ್ಳಿಯ ಮುಕುಂದ, ಮುಳುಗನಕೆರೆ ಗ್ರಾಮದ ಸಂತೋಷ್, ಹಿರೇಕ್ಯಾತನಹಳ್ಳಿಯ ರಾಮಸ್ವಾಮಿ, ಶ್ರೀಮಂಗಲದ ತಂಗಮ್ಮ ಸೇರಿದಂತೆ ತೀವ್ರವಾಗಿ ಗಾಯಗೊಂಡಿರುವ 15 ಜನರನ್ನು ಮೈಸೂರಿನ ಕೆಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಿಳಿಕೆರೆ ಠಾಣೆ ಪೊಲೀಸರು ಸ್ಥಳಕ್ಕೆ ದಾವಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ.  ಸ್ಥಳಕ್ಕೆ ಜಿಲ್ಲಾಧಿಕಾರಿ ಹಾಗೂ ಸಾರಿಗೆ ಘಟಕ ವ್ಯವಸ್ಥಾಪಕರು ಸೇರಿದಂತೆ ಹಿರಿಯ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ.

Bus-2

Bus-6

ಚಾಲಕರು ಹಾಗೂ ಕಂಡಕ್ಟರ್‍ಗಳಿಗೆ ಬಿಡುವಿಲ್ಲದಂತೆ ಡ್ಯೂಟಿಗೆ ಹಾಕುತ್ತಿದ್ದ ಪರಿಣಾಮ ನಿದ್ದೆಯ ಮಂಪರಿನಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಇಲ್ಲಿನ ಸಿಬ್ಬಂದಿಗಳು ಹಿರಿಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವುದು ಕಂಡುಬಂತು.

► Follow us on –  Facebook / Twitter  / Google+

 

Bus-7

Bus-3

Bus-4

Facebook Comments

Sri Raghav

Admin