ಲಾರಿ ಮತ್ತು ದ್ವಿಚಕ್ರ ವಾಹನದ ನಡುವೆ ಮುಖಾಮುಖಿ ಡಿಕ್ಕಿ : ಟಿಪ್ಪರ್‍ಗೆ ಬೆಂಕಿ

ಈ ಸುದ್ದಿಯನ್ನು ಶೇರ್ ಮಾಡಿ

Tumakuru-Tippar-fire

ತುಮಕೂರು, ಆ.26- ಲಾರಿ ಮತ್ತು ದ್ವಿಚಕ್ರ ವಾಹನದ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ರೊಚ್ಚಿಗೆದ್ದ ಸ್ಥಳೀಯರು ಟಿಪ್ಪರ್ ಲಾರಿಗೆ ಬೆಂಕಿ ಹಚ್ಚಿದ ಘಟನೆ ಗುಬ್ಬಿ ಗೇಟ್ ಸಮೀಪದ ರಿಂಗ್ ರಸ್ತೆಯಲ್ಲಿ ಜರುಗಿದೆ.  ಅಪಘಾತದಲ್ಲಿ ಬೈಕ್ ಸವಾರ ಅಪ್ಸರ್ (28) ಎಂಬುವವರ ಕಾಲು ಮುರಿದಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಈತ ಪಿಎಚ್ ಕಾಲೋನಿ ನಿವಾಸಿಯಾಗಿದ್ದು, ಕಾರಿನ ಸೀಟ್ ಕವರಿಂಗ್ ಕೆಲಸ ಮಾಡುತ್ತಿದ್ದನೆಂದು ತಿಳಿದುಬಂದಿದೆ.  ಲಾರಿ ದಿಬ್ಬೂರಿನ ವಿಜಯಕುಮಾರ್ ಅವರಿಗೆ ಸೇರಿದ್ದೆಂದು ತಿಳಿದು ಬಂದಿದೆ. ಬೆಂಕಿ ನಂದಿಸಲು ಅಗ್ನಿಶಾಮಕದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು.ಈ ಘಟನೆಯಿಂದಾಗಿ ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಆಗಿತ್ತು. ಗುಬ್ಬಿ ಕಡೆಯಿಂದ ತುಮಕೂರಿಗೆ ಆಗಮಿಸುವ ಹಾಗೂ ತುಮಕೂರಿನಿಂದ ಗುಬ್ಬಿ ಕಡೆಗೆ ತೆರಳುವ ವಾಹನಗಳು ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ನಿಂತಲ್ಲೇ ನಿಲ್ಲುವ ಸ್ಥಿತಿ ಉಂಟಾಯಿತು. ನಂತರ ಪೊಲೀಸರು ಸಂಚಾರವನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾದರು.

 

► Follow us on –  Facebook / Twitter  / Google+

Facebook Comments

Sri Raghav

Admin