ಲಾಲ್‍ಬಾಗ್‍ನಲ್ಲಿ ಆ.6ರಿಂದ ಫಲಪುಷ್ಪ ಪ್ರದರ್ಶನ

ಈ ಸುದ್ದಿಯನ್ನು ಶೇರ್ ಮಾಡಿ

Lalbhag-1  ಬೆಂಗಳೂರು, ಆ.4-ನಗರದ ಲಾಲ್‍ಬಾಗ್‍ನಲ್ಲಿ ಈ ಬಾರಿಯ ಸ್ವಾತಂತ್ರ್ಯೋತ್ಸವದ ಫಲಪುಷ್ಪ ಪ್ರದರ್ಶನ ಆ.6 ರಂದು ಪ್ರಾರಂಭವಾಗಲಿದ್ದು, ಪ್ರಮುಖ ಆಕರ್ಷಣೆಯಾಗಿ ಗುಲಾಬಿ ಹೂಗಳಿಂದ ಸಂಸತ್ ಭವನ ನಿರ್ಮಿಸಲಾಗಿದೆ ಎಂದು ಮೈಸೂರು ಉದ್ಯಾನ ಕಲಾಸಂಘದ ಅಧ್ಯಕ್ಷರು, ತೋಟಗಾರಿಕೆ (ಪ್ರಭಾರ) ನಿರ್ದೇಶಕರೂ ಆದ ಎಚ್.ಎಸ್.ಶಿವಕುಮಾರ್ ತಿಳಿಸಿದರು.  ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಆ.6 ರಂದು ಬೆಳಿಗ್ಗೆ 11 ಗಂಟೆಗೆ ಫಲಪುಷ್ಪ ಪ್ರದರ್ಶನ ಉದ್ಘಾಟನೆಗೊಳ್ಳಲಿದೆ. 4 ಲಕ್ಷ ಕೆಂಪು, ಹಳದಿ, ಬಿಳಿ ಬಣ್ಣದ ಗುಲಾಬಿ ಹೂ ಬಳಸಿ ಸಂಸತ್ ಭವನ ನಿರ್ಮಿಸಿರುವುದು ಈ ಬಾರಿಯ ವಿಶೇಷ ಎಂದು ಹೇಳಿದರು.  ಆಗಸ್ಟ್ 15ರವರೆಗೆ ಪ್ರದರ್ಶನವಿರುತ್ತದೆ. ತೋಟಗಾರಿಕೆ ಸಂಸ್ಥಾಪಕ ನಿರ್ದೇಶಕರಾದ ಮರೀಗೌಡ ಅವರ ಮರಳಿನ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಹಸಿರು ದಳ ಕಸವಿಂಗಡಣೆ, ಕಸ ವಿಲೇವಾರಿ ಬಗ್ಗೆ ಜಾಗೃತಿ ಮೂಡಿಸುತ್ತದೆ.

Lalbhag-3ಎಚ್‍ಎಎಲ್, ಬಿಎಚ್‍ಇಎಲ್, ಬಿಇಎಲ್ ಸೇರಿದಂತೆ ಹಲವಾರು ಸಂಸ್ಥೆಗಳು ಫಲಪುಷ್ಪ ಪ್ರದರ್ಶನದಲ್ಲಿ ಪಾಲ್ಗೊಳ್ಳಲಿವೆ. ಎಂದಿನಂತೆ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯೋತ್ಸವ ದಿನದಂದು ಉಚಿತ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಉಳಿದಂತÉ ಮಕ್ಕಳಿಗೆ 20 ರೂ. ಪ್ರವೇಶ ಶುಲ್ಕ ವಿಧಿಸಲಾಗುತ್ತದೆ ಎಂದುಹೇಳಿದರು. ಈ ಬಾರಿ 15 ರಿಂದ 20 ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆ ಇದ್ದು, ಲಾಲ್‍ಬಾಗ್ ಸುತ್ತ ಬಿಗಿ ಭದ್ರತೆ ಒದಗಿಸಲಾಗುವುದು. 15ಕ್ಕೂ ಹೆಚ್ಚು ಸಿಸಿ ಕ್ಯಾಮೆರಾ ಅಳವಡಿಸಲಾಗುವುದು ಎಂದರು.
ಶಾಂತಿ ನಗರ ಬಸ್ ನಿಲ್ದಾಣ ಹಾಗೂ ಅಶೋಕ್ ಪಿಲ್ಲರ್ ಬಳಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುವುದು. ಆ.6 ರಂದು ಮಧ್ಯಾಹ್ನ 2 ಗಂಟೆಗೆ ಇಕೆ ಬನ ಮತ್ತು ಇತರೆ ಕಲೆಗಳ ಪ್ರದರ್ಶನವಿರುತ್ತದೆ.  7ರಂದು ಸಂಜೆ 7 ಗಂಟೆಗೆ ಇಕೆ ಬನ ಮತ್ತು ಇತರೆ ಕಲೆಗಳ ಪ್ರದರ್ಶನ ಮುಕ್ತಾಯ ಸಮಾರಂಭ, 11 ರಂದು ತೋಟಗಾರಿಕÉ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭ ನಡೆಯಲಿದೆ ಎಂದು ಅವರು ಶಿವಕುಮಾರ್ ತಿಳಿಸಿದರು.  ಮೈಸೂರು ಉದ್ಯಾನಕಲಾಸಂಘದ ಉಪಾಧ್ಯಕ್ಷ ಶ್ರೀಕಂಠಯ್ಯ ಪತ್ರಿಕಾಗೋಷ್ಠಿಯಲ್ಲಿ  ಉಪಸ್ಥಿತರಿದ್ದರು.

Lalbhag-2

Lalbhag-4

Facebook Comments

Sri Raghav

Admin