ಲಾಲ್‍ಬಾಗ್‍ನಲ್ಲಿ ಪ್ಲಾಸ್ಟಿಕ್ ಬಳಸುತ್ತಿದ್ದ ಅಂಗಡಿಗಳಿಗೆ ದಂಡ..

ಈ ಸುದ್ದಿಯನ್ನು ಶೇರ್ ಮಾಡಿ

plastic

ಬೆಂಗಳೂರು, ಆ.13- ಲಾಲ್‍ಬಾಗ್‍ನಲ್ಲಿಂದು ಪ್ಲ್ಯಾಸ್ಟಿಕ್ ಬಳಕೆ ಮಾಡುತ್ತಿದ್ದ ಅಂಗಡಿಗಳ ಮೇಲೆ ಬಿಬಿಎಂಪಿ ಅಧಿಕಾರಿಗಳು ರೈಡ್ ಮಾಡಿ ದಂಡ ವಿಧಿಸಿದ್ದಾರೆ. ಹಿರಿಯ ಆರೋಗ್ಯ ಪರಿವೀಕ್ಷಕ ಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಿ ಜೂಟ್ ಬ್ಯಾಗ್ ಅಂಗಡಿ, ಹಲ್ವಾ ಅಂಗಡಿ ಸೇರಿದಂತೆ ವಿವಿಧ ಅಂಗಡಿಗಳ ಮೇಲೆ ದಾಳಿ ನಡೆಸಲಾಯಿತು.  ಪ್ಲ್ಯಾಸ್ಟಿಕ್ ನಿಷೇಧಿಸಿದ್ದರೂ ಲಾಲ್‍ಬಾಗ್‍ನಲ್ಲಿ ನಡೆಯುತ್ತಿರುವ ವಸ್ತು ಪ್ರದರ್ಶನ ವೇಳೆ ಅಂಗಡಿ ಹಾಕಿರುವ ಹಲವಾರು ಮಂದಿ ತಮ್ಮ ಅಂಗಡಿಗಳಲ್ಲಿ ಪ್ಲ್ಯಾಸ್ಟಿಕ್ ಬಳಸುತ್ತಿರುವುದನ್ನು ಗಮನಿಸಿದ ಅಧಿಕಾರಿಗಳು ಇಂದು ದಾಳಿ ನಡೆಸಿದ್ದಾರೆ.  ಜೂಟ್ ಬ್ಯಾಗ್ ಹಾಗೂ ಹಲ್ವಾ ಮಾರಾಟ ಮಾಡುತ್ತಿದ್ದ ಅಂಗಡಿಗಳಿಗೆ ತಲಾ 500ರೂ. ದಂಡ ವಿಧಿಸಿದ್ದಾರೆ. ಬಿಬಿಎಂಪಿ ಪರಿವೀಕ್ಷಕರೊಂದಿಗೆ ಇನ್ನ್ನಿತರ ಅಧಿಕಾರಿಗಳು ದಾಳಿ ವೇಳೆ ಉಪಸ್ಥಿತರಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin