ಲಾಹೋರ್‍ನ ವಿಧಾನಸಭೆ ಹೊರಗೆ ಬಾಂಬ್ ಸ್ಫೋಟ : 18 ಮಂದಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Blast--041

ಲಾಹೋರ್, ಫೆ.14-ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಲಾಹೋರ್‍ನ ವಿಧಾನಸಭೆ ಕಟ್ಟಡದ ದ್ವಾರದ ಹೊರಗೆ ಬಾಂಬ್ ಸ್ಫೋಟಗೊಂಡು ಮೂವರು ಪೊಲೀಸರೂ ಸೇರಿದಂತೆ 18 ಮಂದಿ ಮೃತಪಟ್ಟು, 73ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ ಎಂದು ಕಾನೂನು ಸಚಿವ ರಾಜಾ ಸನಾವುಲ್ಲಾ ಆತಂಕ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನಿ ತಾಲಿಬಾನ್ ಜೊತೆ ಸಂಪರ್ಕ ಹೊಂದಿರುವ ಜಮಾತ್-ಉರ್-ಅಹ್ರಾರ್ ಭಯೋತ್ಪಾದನೆ ಸಂಘಟನೆ ಈ ವಿಧ್ವಂಸಕ ಕೃತ್ಯದ ಹೊಣೆ ಹೊತ್ತುಕೊಂಡಿದೆ.

ಲಾಹೋರ್‍ನ ಮಾಲ್ ರಸ್ತೆಯಲ್ಲಿರುವ ವಿಧಾನಸಭೆ ಕಟ್ಟಡದ ಹೊರಗೆ ಸರ್ಕಾರದ ಹೊಸ ನೀತಿಯೊಂದರ ವಿರುದ್ಧ ಔಷಧ ಮಾರಾಟಗಾರರು ಮತ್ತು ತಯಾರಕರ ಬೃಹತ್ ಗುಂಪು ಪ್ರತಿಭಟನೆ ನಡೆಸುತ್ತಿದ್ದಾಗ ಈ ಸ್ಫೋಟ ಸಂಭವಿಸಿದೆ. ಮೋಟಾರ್‍ಬೈಕ್‍ನಲ್ಲಿ ಬಂದ ಆತ್ಮಾಹುತಿ ದಾಳಿಕೋರ ಗುಂಪಿನ ಮಧ್ಯೆ ನುಗ್ಗಿ ತನ್ನಲ್ಲಿದ್ದ ಸ್ಫೋಟಕಗಳನ್ನು ಆಸ್ಫೋಟಿಸಿದ. ಈ ವಿಸ್ಪೋಟ ಎಷ್ಟು ಪ್ರಬಲವಾಗಿತ್ತೆಂದರೆ ಹಲವಾರು ಕಿಲೋಮೀಟರ್‍ಗಳವರೆಗೆ ಇದರ ಶಬ್ಧ ಕೇಳಿಬಂತು ಎಂದು ಭಯೋತ್ಪಾದನೆ ನಿಗ್ರಹ ಇಲಾಖೆ ಮುಖ್ಯಸ್ಥ ಡಾ.ಮಹಮದ್ ಇಕ್ಬಾಲ್ ಹೇಳಿದ್ದಾರೆ. ಲಾಹೋರ್‍ನ ಉದ್ಯಾನವನವೊಂದರಲ್ಲಿ ಕಳೆದ ವರ್ಷ ಬಾಂಬ್ ಸ್ಫೋಟಗೊಂಡು 70ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin