ಲಾ ಕಮೀಷನ್ ಜಾರಿ ಖಂಡಿಸಿ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

law

ಕನಕಪುರ, ಏ.22- ಸರ್ಕಾರ ನೂತನವಾಗಿ ಲಾ ಕಮೀಷನ್ ಜಾರಿಗೆ  ತಂದಿರುವುದು ವಕೀಲರ ವೃತ್ತಿಗೆ ವ್ಯತಿರಿಕ್ತವಾಗಿದೆ ಎಂದು ಸರ್ಕಾರದ ಧೋರಣೆ ಖಂಡಿಸಿ ತಾಲೂಕು ವಕೀಲರ ಸಂಘ ನ್ಯಾಯಾಲಯದ ಕಲಾಪಗಳಿಂದ ದೂರ ಉಳಿದು ನ್ಯಾಯಾಲಯದ ಮುಂದೆ ಪ್ರತಿಭಟನೆ ನಡೆಸಿ ಲಾ ಕಮಿಷನ್ ಪ್ರತಿಯನ್ನು ದಹಿಸಿದ ಘಟನೆ ನಡೆಯಿತು.ವಕೀಲರ ಹಕ್ಕುಗಳಿಗೆ ಚ್ಯುತಿರುವ ಅಸಂವಿಧಾನಿಕವಾದ ವಕೀಲರ ಕಾನೂನಿಗೆ ತಿದ್ದುಪಡಿ ತಂದಿರುವ ಭಾರತದ ಕಾನೂನು ಆಯೋಗದ ವಿರುದ್ದ ಕನಕಪುರದ ವಕೀಲರು ವಿರೋಧಿಸಿ ನ್ಯಾಯಾಲಯದ ಕಲಾಪದಿಂದ ದೂರ ಉಳಿದರು.

ವಕೀಲರ ಸಂಘದ ಅಧ್ಯಕ್ಷ ಕೆ.ನಂಜೇಗೌಡ ಮಾತನಾಡಿ, ವಕೀಲರ ಹಕ್ಕುಗಳಿಗೆ ಚ್ಯುತಿಯಿರುವ ವಕೀಲರ ಸಂಘಟನೆಗಳಲ್ಲಿ ವಕೀಲ ವೃತ್ತಿಯಲ್ಲಿ ಭಾಗಿಯಾಗದವರಿಗೆ ಅವಕಾಶವಿರುವ ಅಸಂವಿಧಾನಿಕವಾದ ವಕೀಲರ ಕಾನೂನಿಗೆ ತಿದ್ದುಪಡಿ ಮಾಡುವ ಕುರಿತು ಭಾರತದ ಕಾನೂನು ಆಯೋಗವು ಕೇಂದ್ರ ಕಾನೂನು ಸಚಿವರು ಹಾಗೂ ಕೇಂದ್ರ ಸರ್ಕಾರಕ್ಕೆ ತನ್ನ ವರದಿಯನ್ನು ತಿದ್ದುಪಡಿ ಮಸೂದೆ 2017ನ್ನು ತಯಾರಿಸಿ ಸಲ್ಲಿಸಿರುವುದು ದುರಂತ ಸಂಗತಿ ಎಂದು ಹೇಳಿದರು.ಕಾನೂನು ಆಯೋಗದ ವರದಿ ಹಾಗೂ ಅದರೊಂದಿಗಿನ ವಕೀಲರ ತಿದ್ದುಪಡಿ ಮಸೂದೆ ಪರಿಶೀಲಿಸಿದ ಭಾರತದ ವಕೀಲರ ಪರಿಷತ್ತು ವಕೀಲರ ಪ್ರಜಸತ್ತಾತ್ಮಕ ಹಕ್ಕುಗಳನ್ನು ಮೊಟಕುಗೊಳಿಸುವ ಹಾಗೂ ವಕೀಲರ ವೃತ್ತಿಗೆ ಸಂಬಂಧವಿಲ್ಲದವರು ವಕೀಲರ ಸಂಗಟನೆಗಳ ಸದಸ್ಯರಾಗಲು ಅವಕಾಶವನ್ನು ಮಾಡಿ ಕೊಟ್ಟಿರುವುದು ನ್ಯಾಯ ಸಮ್ಮತವಲ್ಲ.

ಈಗಾಗಲೇ ರಾಜ್ಯಗಳ ವಕೀಲರ ಪರಿಷತ್ತಿನ ಸದಸ್ಯರೊಂದಿಗೆ ಜಂಟಿ ಸಭೆ ನಡೆಸಿ ಭಾರತದ ಕಾನೂನು ಆಯೋಗ ನೀಡಿದ ವರದಿ ತಿರಸ್ಕರಿಸುವಂತೆ ಹಾಗೂ ಅಂಗೀಕರಿಸಲು ಕ್ರಮ ಕೈಗೊಳ್ಳದಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲಾಗಿದೆ ಎಂದು ತಿಳಿಸಿದರು.ವಕೀಲರ ಸಂಘದ ಉಪಾಧ್ಯಕ್ಷ ಜಗದೀಶ್, ವಕೀಲರಾದ ರಾಮಚಂದ್ರು, ಪುಟ್ಟಮಾದಯ್ಯ, ಕಾಳಯ್ಯ, ಸ್ವಾಮಿಗೌಡ, ಶಿವರುದ್ರ, ಚನ್ನೇಗೌಡ, ನಾರಾಯಣ ಸಿ.ಎಸ್. ರವಿ ಟಿ.ಕೆ. ಸೇರಿದಂತೆ ಅನೇಕ ವಕೀಲರು ಭಾಗವಹಿಸಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin