ಲಿಂಗರಾಜನ ದರುಶನ ಪಡೆದ ನಮೋ
ಭುವನೇಶ್ವರ್, ಏ.16-ಪ್ರಧಾನಿ ನರೇಂದ್ರ ಮೋದಿ ಇಂದು ಒಡಿಶಾದ 11ನೇ ಶತಮಾನದ ಲಿಂಗರಾಜ ದೇವಸ್ಥಾನಕ್ಕೆ ಭೇಟಿ ನೀಡಿ ಶಿವನಿಗೆ ವಿಶೇಷ ಪೂಜೆ ನೆರವೇರಿಸಿ ಪ್ರಾರ್ಥನೆ ಸಲ್ಲಿಸಿದರು. ಒಡಿಶಾ ರಾಜಧಾನಿಯಲ್ಲಿ ನಿನ್ನೆಯಿಂದ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿರುವ ಮೋದಿ, ಬಿಜೆಪಿ ನಾಯಕರೊಂದಿಗೆ ಇಂದು ಬೆಳಗ್ಗೆ ಲಿಂಗರಾಜ ದೇವಸ್ಥಾನಕ್ಕೆ ತೆರಳಿದರು.
Prayed at the Lingaraj Temple in Bhubaneswar. The magnificence of the Temple and Temple Complex leaves a lasting impression on the mind. pic.twitter.com/ofoXs8rltr
— Narendra Modi (@narendramodi) April 16, 2017
ಈಶ್ವರ ಸನ್ನಿಧಿಯಲ್ಲಿ 25 ನಿಮಿಷಗಳ ಕಾಲ ಇದ್ದ ಮೋದಿ ವಿಶೇಷ ಪೂಜೆ-ಪುನಸ್ಕಾರದೊಂದಿಗೆ ನಮನ ಸಲ್ಲಿಸಿದರು. ದೇವಸ್ಥಾನದಿಂದ ಹೊರ ಬಂದ ಅವರು ಅಲ್ಲಿ ನೆರೆದಿದ್ದ ಜನಸ್ತೋಮದತ್ತ ಕೈಬೀಸಿದಾಗ ಹರ್ಷೋದ್ಗಾರ ಮುಗಿಲುಮುಟ್ಟಿತು. ನಂತರ ಬಿಗಿ ಭದ್ರತೆ ನಡುವೆ ಅವರು ಕಾರ್ಯಕ್ರಮದತ್ತ ತೆರಳಿದರು.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS
Some more pictures from the Lingaraj Temple in Bhubaneswar. pic.twitter.com/XT50cFSjQz
— Narendra Modi (@narendramodi) April 16, 2017
With people after praying at the Lingaraj Temple. pic.twitter.com/DaHm7yXyif
— Narendra Modi (@narendramodi) April 16, 2017