ಲಿಂಗಾಯತರ ಸಮಾವೇಶಕ್ಕೆ ಪ್ರತಿಯಾಗಿ ಡಿ.24ರಂದು ವೀರಶೈವರ ಸಮಾವೇಶ

ಈ ಸುದ್ದಿಯನ್ನು ಶೇರ್ ಮಾಡಿ

Lingayat--01

ಚಿಕ್ಕಮಗಳೂರು,ನ.6- ವೀರಶೈವ-ಲಿಂಗಾಯಿತ ಧರ್ಮಕ್ಕೆ ಸಂಬಂಧಿಸಿದಂತೆ ಸತ್ಯ ಸಂಗತಿಯನ್ನು ಸಮಾಜಕ್ಕೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಗದಗದಲ್ಲಿ ಡಿ.24ರಂದು ವೀರಶೈವ ಲಿಂಗಾಯಿತ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ರಂಭಾಪುರಿ ಪೀಠದ ಜಗದ್ಗುರು ಶ್ರೀ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲಿಂಗಾಯಿತ ಸ್ವತಂತ್ರ ಧರ್ಮಕ್ಕಾಗಿ ಒತ್ತಾಯಿಸಿ ಹುಬ್ಬಳ್ಳಿಯಲ್ಲಿ ನಡೆದ ಸಮಾವೇಶದಲ್ಲಿ ಕೂಡಲ ಸಂಗಮದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿಗಳ ಮಾತು ಖಂಡನೀಯ. ನಮ್ಮದೇ ಆದ ವಿಶಿಷ್ಟ ತತ್ವ ಸಿದ್ದಾಂತ ಹೊಂದಿದ್ದ ವೀರಶೈವ ಧರ್ಮ ಸಕಲ ಜೀವ ಸಂಕುಲಕ್ಕೂ ಒಳಿತು ಮಾಡುತ್ತಾ ಬಂದಿದೆ ಎಂದರು.

ದೇಶಕ್ಕೆ ಒಂದು ಸಂವಿಧಾನ ಇದೆ. ವೀರಶೈವ ಧರ್ಮಕ್ಕೂ ಒಂದು ಸಂವಿಧಾನವಿದೆ. ಆದರೆ ಅದನ್ನು ಅರಿಯದೆ ಜಯ ಮೃತ್ಯುಂಜಯ ಶ್ರೀಗಳು ವೀರಶೈವದಿಂದ ಒಬ್ಬ ತಂದೆಗೆ ಹುಟ್ಟಿದವರು ಲಿಂಗಾಯಿತರು, ಐವರು ತಂದೆಗೆ ಹುಟ್ಟಿದವರು ವೀರಶೈವರು ಎಂದು ಹೇಳಿರುವುದು ಅವರ ಸಂಸ್ಕಾರ, ಸಂಸ್ಕøತಿ ಏನೆಂಬುದನ್ನು ತಿಳಿಸುತ್ತದೆ ಎಂದರು.  ಪ್ರಜ್ಞಾವಂತರು ಯಾರೂ ಈ ಮಾತಿಗೆ ಬೆಲೆ ಕೊಡಬಾರದು. ಸ್ವತಂತ್ರ ಲಿಂಗಾಯಿತ ಧರ್ಮಕ್ಕಾಗಿ ಒತ್ತಾಯಿಸುತ್ತಿರುವ ಮುಖಂಡರಿಗೆ ಸತ್ಯ ಅರಿಯುವುದು ಬೇಕಾಗಿಲ್ಲ ಎಂದ ಅವರು, ಅಸತ್ಯವನ್ನು ಹಲವಾರು ಬಾರಿ ಹೇಳಿ ಅದೇ ಸತ್ಯ ಎಂದು ನಂಬಿಸಲು ಹೊರಟಿದ್ದಾರೆ ಎಂದು ಹೇಳಿದರು.
ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಅವರು ಜಗದ್ಗುರು ರೇಣುಕಾಚಾರ್ಯರು ಕಲ್ಲಿನಿಂದ ಹುಟ್ಟಿದ್ದಾರೆ ಎಂದು ಹೇಳಿದ್ದಾರೆ. ಅವರು ಕಲ್ಲು ಎಂದು ತಿಳಿದುಕೊಂಡಿದ್ದೇ ಮೊದಲು ತಪ್ಪು . ಜಾಗೃತವಾಗಿರುವ ಶ್ರೀ ಸೋಮೇಶ್ವರ ಶಿವಲಿಂಗದಿಂದ ಅವತರಿಸಿದರೆ ಹೊರತು ಕಲ್ಲಿನಿಂದ ಅಲ್ಲ. ವೀರಶೈವರಾಗಲಿ, ಲಿಂಗಾಯಿತರಾಗಲಿ ಪೂಜಿಸುವ ಲಿಂಗ ಶಿಲೆಯಿಂದಲೇ ನಿರ್ಮಾಣಗೊಂಡಿದೆ ಎಂದು ಹೇಳಿದರು.

ಬಸವಣ್ಣನವರು ಧರ್ಮ ಸ್ಥಾಪಕ ಗುರು ಎಂದು ಎಲ್ಲಿಯೂ ಹೇಳಿಲ್ಲ. ವಿಶ್ವ ಮಾನವ ಬಸವಣ್ಣವನರನ್ನು ಒಂದು ಜಾತಿ, ಧರ್ಮಕ್ಕೆ ಕಟ್ಟಿ ಹಾಕುವುದು ಒಳ್ಳೆಯದಲ್ಲ. ಬಸವಣ್ಣನವರ ವಿಚಾರಧಾರೆಗಳನ್ನು ಅನುಸರಿಸಿ ನಡೆಯಲಾರದ ಇವರು ಅವರ ಹೆಸರಿಗೆ ಕಳಂಕ ತರುವ ಕೆಲಸ ಮಾಡುತ್ತಿದ್ದಾರೆ.  ವೀರಶೈವ ಲಿಂಗಾಯಿತ ಧರ್ಮದಲ್ಲಿ ಕಲುಷಿತ ವಾತಾವರಣ ಉಂಟು ಮಾಡದೆ ಬಸವಣ್ಣನವರ ಮೇಲೆ ಅಷ್ಟೊಂದು ಪ್ರೀತಿ ಅಭಿಮಾನವಿದ್ದರೆ ಅವರ ಹೆಸರಿನಲ್ಲಿಯೇ ಹೊಸ ಧರ್ಮ ಹುಟ್ಟು ಹಾಕಲಿ ಎಂದರು.

Facebook Comments

Sri Raghav

Admin