ಲಿಂಗಾಯತ ಧರ್ಮ : ಪಾಟೀಲ್ ಹೇಳಿಕೆಗೆ ಶ್ರೀಮಠದಲ್ಲೇ ಆಕ್ರೋಶ

ಈ ಸುದ್ದಿಯನ್ನು ಶೇರ್ ಮಾಡಿ

MB-Patil---01

ತುಮಕೂರು, ಸೆ.11-ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ತುಮಕೂರಿನ ಸಿದ್ದಗಂಗಾ ಶ್ರೀಗಳು ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ನೀಡಿರುವ ಹೇಳಿಕೆಗೆ ಶ್ರೀಮಠದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ನಿನ್ನೆ ತುಮಕೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಉದ್ಘಾಟನಾ ಸಮಾರಂಭದ ಸಂದರ್ಭದಲ್ಲಿ ಶ್ರೀಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಸಂದರ್ಭದಲ್ಲಿ ವೀರಶೈವ ಲಿಂಗಾಯತ ವಿಷಯದ ಬಗ್ಗೆ ಪ್ರಸ್ತಾಪಿಸಿ ನಂತರ ಬೆಂಗಳೂರಿಗೆ ಬಂದು ಲಿಂಗಾಯತ ಧರ್ಮಕ್ಕೆ ತುಮಕೂರು ಶ್ರೀಗಳು ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಏಕಪಕ್ಷೀಯವಾಗಿ ನೀಡಿರುವ ಹೇಳಿಕೆಯನ್ನು ಮಠದ ಮೂಲಗಳು ತೀವ್ರವಾಗಿ ಖಂಡಿಸಿವೆ.

ಹಿರಿಯ ಶ್ರೀಗಳೊಂದಿಗೆ ದಿನದ 24 ಗಂಟೆ ಇರುವ ಹಲವು ಶ್ರೀಗಳು ಮತ್ತು ಭಕ್ತರು ಹೇಳುವಂತೆ, ಇಂದಿಗೂ ಹಳ್ಳಿಗಳಲ್ಲಿ ವೀರಶೈವ-ಲಿಂಗಾಯತರು ಒಂದೇ ಎಂದು ತಿಳಿದಿದ್ದಾರೆ. ಅವರಲ್ಲಿ ಭಿನ್ನ ಮಾಡುವುದು ಬೇಡ ಎಂದು ಗುರುಗಳು ತಿಳಿಸಿದ್ದಾರೆ. ಆದರೆ ಎಂ.ಬಿ.ಪಾಟೀಲ್ ಅವರು ತಪ್ಪಾಗಿ ಅರ್ಥೈಸಿಕೊಂಡು ಪ್ರತ್ಯೇಕ ಧರ್ಮಕ್ಕೆ ಸಹಮತ ವ್ಯಕ್ತಪಡಿಸಿದ್ದು, ತಮ್ಮ ಮನಬಂದಂತೆ ಮಾತನಾಡಿದ್ದಾರೆ ಎಂದು ಆರೋಪಿಸಿದರು. ನಮ್ಮ ಮಠ ಶೈಕ್ಷಣಿಕ, ಧಾರ್ಮಿಕ ಸೇವೆ ಮಾಡುತ್ತಾ ಬಂದಿದೆ. ಮಠವನ್ನು ರಾಜಕೀಯವಾಗಿ ಬಳಸಿಕೊಳ್ಳುವುದು ಬೇಡ ಎಂದು ಇಂದು ಮಠಕ್ಕೆ ಭೇಟಿ ನೀಡಿದ ಸುದ್ದಿಗಾರರೊಂದಿಗೆ ಸ್ಪಷ್ಟನೆ ನೀಡಿದ್ದಾರೆ.

Facebook Comments

Sri Raghav

Admin