ಲಿಂಗಾಯತ ಧರ್ಮ : ವಿ.ಸೋಮಣ್ಣ-ಎಂ.ಬಿ.ಪಾಟೀಲ್‍ ನಡುವೆ ಮಾತಿನ ಚಕಮಕಿ

ಈ ಸುದ್ದಿಯನ್ನು ಶೇರ್ ಮಾಡಿ

Somanna-Patil

ಬೆಂಗಳೂರು, ಸೆ.12-ಪ್ರತ್ಯೇಕ ಲಿಂಗಾಯತ ಧರ್ಮದ ಬಗ್ಗೆ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಹಾಗೂ ವಿಧಾನ ಪರಿಷತ್ ಸದಸ್ಯ ವಿ.ಸೋಮಣ್ಣ ನಡುವೆ ಮಾತಿನ ಚಕಮಕಿ ತಾರಕಕ್ಕೇರಿದೆ. ಎಂ.ಬಿ.ಪಾಟೀಲ್ ಒಬ್ಬ ಹುಚ್ಚ. ಅವರ ಮಾತಿಗೆ ಬೆಲೆ ಕೊಡಬೇಡಿ. ಪಾಟೀಲ್ ಮಂತ್ರಿಯಾಗಿದ್ದಾರೆ, ಮಂತ್ರಿಯಾಗಿ ಕೆಲಸ ಮಾಡಲಿ. ಬೇರೆ ವಿಷಯಕ್ಕೆ ತಲೆ ಹಾಕಬಾರದು ಎಂದು ತಿರುಗೇಟು ನೀಡಿದರು. ಸಮಾಜದ ಮೇಲೆ ಆರೇಳು ತಿಂಗಳಿಂದ ಇಲ್ಲದ ಕಾಳಜಿ ಎಂ.ಬಿ.ಪಾಟೀಲ್ ಅವರಿಗೆ ಈಗ ಬಂದಿದೆ. ಸಮಾಜ ತಿದ್ದಲು ಮಠಮಾನ್ಯಗಳಿವೆ. ಅವರು ಮಂತ್ರಿ ಕೆಲಸ ಮಾಡಲಿ, ಅದನ್ನು ಬಿಟ್ಟು ಇಲ್ಲಸಲ್ಲದ ಕೆಲಸಗಳಿಗೆ ಕೈ ಹಾಕಬಾರದು ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸಾಧನೆ, ಹೋರಾಟ ಏನೆಂದು ಅವರಿಗೆ ಗೊತ್ತಾ? ಸಮಾಜದ ಕುರಿತು ಯಡಿಯೂರಪ್ಪ ನಿರಂತರವಾಗಿ ಕಾಳಜಿ ವಹಿಸುತ್ತಿದ್ದಾರೆ. ನಿನ್ನೆ-ಮೊನ್ನೆ ಬಂದವರು ಯಡಿಯೂರಪ್ಪ ಅವರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಅಧಿಕಾರ ಆಸೆಗಾಗಿ ಎಂ.ಬಿ.ಪಾಟೀಲ್ ಇಂತಹ ಹೇಳಿಕೆ ನೀಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Facebook Comments

Sri Raghav

Admin