ಲಿಂಗಾಯಿತ ಧರ್ಮಕ್ಕಾಗಿ ಯಾವುದೇ ತ್ಯಾಗಕ್ಕೆ ಸಿದ್ದ : ಎಂ.ಬಿ.ಪಾಟೀಲ್

ಈ ಸುದ್ದಿಯನ್ನು ಶೇರ್ ಮಾಡಿ

MB-Patil

ಬೆಂಗಳೂರು,ಆ.2-ಲಿಂಗಾಯಿತ ಧರ್ಮಕ್ಕಾಗಿ ನಾನು ಯಾವುದೇ ತ್ಯಾಗ ಮಾಡಲು ಸಿದ್ದ ಎಂದು ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಿಂಗಾಯಿತ ಧರ್ಮ ಒಂದು ಜಾಗತಿಕ ಧರ್ಮವಾಗಬೇಕಿತ್ತು. ಬುದ್ಧ , ಮಹಾವೀರರ ಸಾಲಿನಲ್ಲಿ ಇರಬೇಕಿತ್ತು. ಆದರೆ ಇಂದಿನ ಈ ಪರಿಸ್ಥಿತಿಗೆ ನಾವೇ ಕಾರಣವಾಗಿದ್ದೇವೆ ಎಂದು ವಿಷಾದಿಸಿದರು.  ನಾನು ಹಿಂದಿನಿಂದಲೂ ಬಸವಣ್ಣನವರ ಪರವಾಗಿದ್ದವನು. ಬಸವಣ್ಣನವರು ವೈದಿಕ ಧರ್ಮದಿಂದ ಹೊರಬಂದು ಲಿಂಗಾಯಿತ ಧರ್ಮವನ್ನು ಸ್ಥಾಪಿಸಿದವರು ಎಂದರು.

800 ವರ್ಷಗಳ ಹಿಂದೆಯೇ ಲಿಂಗಾಯಿತ ಧರ್ಮ ಸ್ಥಾಪನೆಯಾಗಿದೆ. ಆದರೆ ಅದಕ್ಕೆ ಮಾನ್ಯತೆ ದೊರೆತಿಲ್ಲ. ಲಿಂಗಾಯಿತ ವೀರಶೈವದ ಬಗ್ಗೆ ಚರ್ಚೆ ನಡೆದು ಪ್ರತ್ಯೇಕ ಧರ್ಮದ ತೀರ್ಮಾನಕ್ಕೆ ಬರುವ ಅವಶ್ಯಕ. ಆದರೆ ಹಾದಿರಂಪ ಮಾಡುವುದು ಸರಿಯಲ್ಲ ಎಂದು ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin