ಲಿಂಗಾಯಿತ ಪ್ರತೇಕ ಧರ್ಮಕ್ಕಾಗಿ ಬೆಳಗಾವಿಯಲ್ಲಿ ಬೃಹತ್ ಸಮಾವೇಶ

ಈ ಸುದ್ದಿಯನ್ನು ಶೇರ್ ಮಾಡಿ

Lingayat

ಬೆಳಗಾವಿ,ಆ.22- ಲಿಂಗಾಯಿತ ಪ್ರತೇಕ ಧರ್ಮ ಘೋಷಣೆಗೆ ಒತ್ತಾಯಿಸಿ ನಗರದಲ್ಲಿಂದು ಹಮ್ಮಿಕೊಂಡಿದ್ದ ಬೃಹತ್ ಸಮಾವೇಶಕ್ಕೆ ರಾಜ್ಯಾದ್ಯಂತ ಸಾಗರೋಪಾದಿಯಲ್ಲಿ ಸಮುದಾಯದ ಜನ ಆಗಮಿಸಿದ್ದಾರೆ. ಬಸವ ಧರ್ಮ ಪೀಠ ಅಧ್ಯಕ್ಷೆ ಮಾತೆ ಮಹಾದೇವಿ ಅವರ ನೇತೃತ್ವದಲ್ಲಿ ನಗರದ ಲಿಂಗರಾಜ ಕಾಲೇಜು ಮೈದಾನದಲ್ಲಿ ಲಿಂಗಾಯಿತರ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಸಚಿವರಾದ ಎಂ.ಬಿ.ಪಾಟೀಲ್, ವಿನಯ್ ಕುಲಕರ್ಣಿ, ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಸೇರಿದಂತೆ ಸಮುದಾಯದ ಜನಪ್ರತಿನಿಧಿಗಳು, ಮುಖಂಡರು, ಗಣ್ಯರು ಪಾಲ್ಗೊಂಡಿದ್ದಾರೆ.

Ligayat Samavesha 9

ಗದಗದ ಶ್ರೀ ತೊಂಟದಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದು, ಲಿಂಗಾಯಿತ ಮಠಗಳ ಸ್ವಾಮೀಜಿಗಳು ಭಾಗವಹಿಸಿದ್ದಾರೆ. ಲಿಂಗಾಯಿತ, ವೀರಶೈವ ಒಂದೇ ಅಲ್ಲ. ಲಿಂಗಾಯಿತಕ್ಕೆ ಪ್ರತೇಕ ಧರ್ಮ ಮಾನ್ಯತೆ ನೀಡಲು ರಾಜ್ಯ ಸರ್ಕಾರವನ್ನು ಒತ್ತಾಯಿಸಿ, ಕೇಂದ್ರಕ್ಕೆ ಶಿಫಾರಸು ಮಾಡುವಂತೆ ಸಮಾವೇಶದಲ್ಲಿ ಆಗ್ರಹಿಸಲಾಯಿತು.  ಲಿಂಗಾಯಿತ ಧರ್ಮದ ಅಗತ್ಯ, ಪ್ರತೇಕ ಧರ್ಮದ ಮುಂದಿನ ಹೋರಾಟದ ರೂಪುರೇಷೆ ಕುರಿತು ಸಮಾವೇಶದಲ್ಲಿ ಚರ್ಚೆ ನಡೆಸಲಾಯಿತು.

Ligayat Samavesha 11 Ligayat Samavesha 10 Ligayat Samavesha 9 Ligayat Samavesha 6 Ligayat Samavesha 5 Ligayat Samavesha 1 Ligayat Samavesha 2

Facebook Comments

Sri Raghav

Admin