ಲಿಂಗ ಸಮಾನತೆಗೆ ಶ್ರಮಿಸುವಂತೆ ರಾಷ್ಟ್ರಪತಿ ಕರೆ

ಈ ಸುದ್ದಿಯನ್ನು ಶೇರ್ ಮಾಡಿ

Pranab-Mukharjee

ನವದೆಹಲಿ, ಮಾ.8-ದೇಶದ ಅಭಿವೃದ್ದಿಯಲ್ಲಿ ಮಹಿಳೆಯರ ಅಮೂಲ್ಯ ಕೊಡುಗೆಗಳನ್ನು ಕೊಂಡಾಡಿರುವ ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಲಿಂಗ ಸಮಾನತೆಗಾಗಿ ತಮ್ಮ ಬದ್ಧತೆಯನ್ನು ದೃಢಪಡಿಸಿ ಅದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಜನರು ಶ್ರಮಿಸುವಂತೆ ಕರೆ ನೀಡಿದ್ದಾರೆ. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಭಾರತದ ಮತ್ತು ದೇಶದ ಎಲ್ಲ ಮಹಿಳೆಯರುಗೆ ಶುಭಾಶಯಗಳು. ದೇಶದ ಅಭಿವೃದ್ಧಿ ಮತ್ತು ವಿಕಾಸಕ್ಕೆ ಭಾರತೀಯ ಮಹಿಳೆಯರ ಕೊಡುಗೆ ಅಮೂಲ್ಯವಾದುದು ಎಂದು ರಾಷ್ಟ್ರಪತಿ ಟ್ವೀಟರ್‍ನಲ್ಲಿ ಪ್ರಶಂಸಿಸಿದ್ದಾರೆ.
ಈ ಸಂದರ್ಭದಲ್ಲಿ ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣಕ್ಕೆ ದೇಶದ ಜನತೆ ಒತ್ತು ನೀಡಬೇಕೆಂದು ಅವರು ಸಲಹೆ ಮಾಡಿದ್ಧಾರೆ.

ಗಣ್ಯರ ಶುಭಾಶಯ :

ಮಹಿಳಾ ದಿನಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ, ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಸೇರಿದಂತೆ ಅನೇಕ ಗಣ್ಯಾತಿಗಣ್ಯರು ಶುಭ ಕೋರಿದ್ದಾರೆ. ಎಲ್ಲ ಕ್ಷೇತ್ರಗಳಲ್ಲೂ ಪ್ರಗತಿ ಸಾಧಿಸುತ್ತಿರುವ ಮಹಿಳಾ ಶಕ್ತಿ ಅಸಾಧಾರಣವಾದುದು ಎಂದು ಗಣ್ಯರು ಶ್ಲಾಘಿಸಿದ್ದಾರೆ.

Facebook Comments

Sri Raghav

Admin