ಲಿಬಿಯಾ ಕರಾವಳಿ :ಭೀಕರ ದೋಣಿ ದುರಂತದಲ್ಲಿ 99 ಕ್ಕೇರಿದ ಸಾವಿನ ಸಂಖ್ಯೆ..!

ಈ ಸುದ್ದಿಯನ್ನು ಶೇರ್ ಮಾಡಿ

liby-a-coast

ರೋಮ್, ನ.17-ಲಿಬಿಯಾ ಕರಾವಳಿಯಲ್ಲಿ ನಿನ್ನೆ ಸಂಭವಿಸಿದ ಭೀಕರ ದೋಣಿ ದುರಂತದಲ್ಲಿ ಸತ್ತವರ ಸಂಖ್ಯೆ 99ಕ್ಕೇರಿದ್ದು, ಈವರೆಗೆ 23 ಮಂದಿಯನ್ನು ರಕ್ಷಿಸಲಾಗಿದೆ. ಈ ದುರ್ಘಟನೆಯೊಂದಿಗೆ ಮೆಡಿಟರೇನಿಯನ್ ಸಮುದ್ರದಲ್ಲಿ ನೀರು ಪಾಲಾಗಿರುವ ವಲಸಿಗರ ಸಂಖ್ಯೆಯ ಸಾವಿರಕ್ಕಿಂತ ಹೆಚ್ಚಾಗಿದೆ.
ಈ ದೋಣಿಯಲ್ಲಿ 10 ಮಹಿಳೆಯರೂ ಸೇರಿದಂತೆ 122 ಮಂದಿ ಪ್ರಯಾಣಿಸುತ್ತಿದ್ದರು. ಮೆಡಿಟರೇನಿಯನ್ ಸಾಗರದಲ್ಲಿ ಸ್ಥಳೀಯ ಕಾಲಮಾನ ಬೆಳಿಗ್ಗೆ 6 ಗಂಟೆಗೆ ಕಿಕ್ಕಿರಿದು ತುಂಬಿದ್ದ ದೋಣಿ ಮುಳುಗಿತು. ಈ ಪ್ರದೇಶದಲ್ಲಿ ತೈಲ ಟ್ಯಾಂಕರ್ ನೌಕೆ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿ 23 ಮಂದಿಯನ್ನು ರಕ್ಷಿಸಿದರು ಎಂದು ದುರಂತದಿಂದ ಪಾರಾದ ವ್ಯಕ್ತಿಯೊಬ್ಬ ಹೇಳಿದ್ದಾನೆ. ದೋಣಿ ಮುಳುಗಡೆಯಾದ ನಾಲ್ಕು ಗಂಟೆಗಳ ಬಳಿಕ ಹಡಗಿನ ಸಿಬ್ಬಂದಿ ರಕ್ಷಣೆಗೆ ಧಾವಿಸಿದರು. ಅಷ್ಟು ಹೊತ್ತಿಗಾಗಲೇ 90ಕ್ಕೂ ಹೆಚ್ಚು ಮಂದಿ ಜಲಸಮಾಧಿಯಾದರು.  ಇಟಲಿ ಕರಾವಳಿ ರಕ್ಷಣಾ ಪಡೆ ಮತ್ತು ಎಸ್‍ಒಎಸ್ ಮೆಡಿಟರೇನಿಯನ್ ಚಾರಿಟಿ ಗ್ರೂಪ್ ರಕ್ಷಣಾ ಕಾರ್ಯ ಮುಂದುವರಿಸಿದ್ದು, ಕೆಲವು ಮೃತದೇಹಗಳನ್ನು ಮಾತ್ರ ಪತ್ತೆ ಮಾಡಲು ಸಾಧ್ಯವಾಗಿದೆ.  ಕಳೆದ ಆರು ತಿಂಗಳಿನಿಂದ ಈ ಜಲಮಾರ್ಗದ ಮೂಲಕ ಅಕ್ರಮ ವಲಸಿರನ್ನು ಕರೆದೊಯ್ಯುವ ಅನೇಕ ದೋಣಿಗಳು ಮುಳುಗಿದ್ದು, ನೂರಾರು ಮಂದಿ ನೀರು ಪಾಲಾಗುತ್ತಿರುವ ಬಗ್ಗೆ ವಿಶ್ವಸಂಸ್ಥೆ ಆತಂಕ ವ್ಯಕ್ತಪಡಿಸಿದೆ.

► Follow us on –  Facebook / Twitter  / Google+

Facebook Comments

Sri Raghav

Admin