ಲೀಸಾ ಮ್ಯಾರೇಜ್ ಸ್ಟೋರಿ

ಈ ಸುದ್ದಿಯನ್ನು ಶೇರ್ ಮಾಡಿ

Leesa

ಬಾಲಿವುಡ್ ಬೋಲ್ಡ್ ನಟಿ ಲೀಸಾ ಹೇಡನ್ ತನ್ನ ಪ್ರಿಯತಮ ಡೀನೊ ಲಾಲ್ವಾನಿಯನ್ನು ಮದುವೆಯಾಗಿದ್ದಾಳೆ. ಅ.29ರಂದು ಈ ಜೋಡಿಯ ವಿವಾಹ ಥೈಲೆಂಡ್‍ನ ಮೋಜಿನ ನಗರಿ ಫುಕೆಟ್‍ನ ಅಮನ್‍ಪುರಿ ಬೀಚ್ ರೆಸಾರ್ಟ್‍ನಲ್ಲಿ ನಡೆಯಿತು. ಡೀನೋ ಆಗರ್ಭ ಶ್ರೀಮಂತ. ಈತನ ತಂದೆ ಪಾಕಿಸ್ತಾನ ಮೂಲದ ಬ್ರಿಟಿಷ್ ಉದ್ಯಮಿ ಗುಲ್ಲು ಲಾಲ್ವಾನಿ.ವೆಡ್ಡಿಂಗ್ ಗೌನ್ ಧರಿಸಿರುವ ಲೀಸಾ ತನ್ನ ಬಾಳಸಂಗಾತಿ ಡೀನೊ ಜೊತೆ ಇರುವ ಪೋ ಟೊಗಳನ್ನು ಇನ್‍ಸ್ಟಾಗ್ರಾಂ ಅಕೌಂಟ್‍ನಲ್ಲಿ ಪ್ರಕಟಿಸಿದ್ದಾಳೆ. ಹೊಸ ಜೀವನಕ್ಕೆ ಕಾಲಿಟ್ಟಿರುವುದಾಗಿ ಶೀರ್ಷಿಕೆ ನೀಡಿದ್ದಾಳೆ.

ಶುಕ್ರವಾರ ತೆರೆಕಂಡ ವಿವಾದಿತ ಆಯಿ ದಿಲ್ ಹೈ ಮುಷ್ಕಿಲ್ ಚಿತ್ರದಲ್ಲಿ ನಟಿಸಿರುವ ಲೀಸಾ ಕಳೆದ ತಿಂಗಳು ತಾನು ಡೀನೊನನ್ನು ಮದುವೆಯಾಗುವುದಾಗಿ ಪ್ರಕಟಿಸಿದ್ದಳು. ರೂಪದರ್ಶಿಯಾಗಿ, ಫ್ಯಾಷನ್ ಡಿಸೈನರ್ ಆಗಿ ಗಮನಸೆಳೆದ ಲೀಸಾ ಸೂಪರ್‍ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾಳೆ. ಪ್ರಶಸ್ತಿ-ಪುರಸ್ಕಾರಗಳೂ ಈಕೆಗೆ ಲಭಿಸಿವೆ.

► Follow us on –  Facebook / Twitter  / Google+

Facebook Comments

Sri Raghav

Admin