ಲೂರ್ದು ಮಾತೆ ನೂತನ ಗವಿ ಲೋಕಾರ್ಪಣೆ

ಈ ಸುದ್ದಿಯನ್ನು ಶೇರ್ ಮಾಡಿ

kanakapura

ಕನಕಪುರ,ಆ.22- ಪಟ್ಟಣದ ಸಂತ ರೀತಮ್ಮನ ದೇವಾಲಯದ ಆವರಣದಲ್ಲಿ ಸಂತ ಲೂರ್ದು ಮಾತೆಯ ನೂತನ ಗವಿಯ ಉದ್ಘಾಟನಾ ಸಮಾರಂಭ ವಿಜೃಂಭಣೆಯಿಂದ ನಡೆಯಿತು.ರೈತ ಸಮುದಾಯದ ಬಂಧುಗಳು ಚರ್ಚ್ ಆವರಣದಲ್ಲಿ ಜಮಾವಣೆಗೊಂಡು ಅಲಂಕೃತಗೊಳಿಸಿದ್ದ ವಾತಾವರಣದಲ್ಲಿ ಲೂರ್ದು ಮಾತೆಯನ್ನು ಪೂಜಿಸುವ ಮೂಲಕ ಭಕ್ತಿಭಾವದಿಂದ ಸಂಭ್ರಮಿಸಿದರು.ನೂತನ ಗವಿ ಉದ್ಘಾಟನೆ ಮಾಡಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎಸ್.ರವಿ. ಯಾವುದೇ ಜಾತಿ ಜನಾಂಗದಲ್ಲಿ ಧಾರ್ಮಿಕ ಕಾರ್ಯಕ್ರಮ ಜರುಗಿದಾಗ ಮಾತ್ರ ಜನರಿಗೆ ಶಾಂತಿ ದೊರೆಯಲು ಸಾಧ್ಯವಾಗುತ್ತದೆ ಎಂದರು.
ಸಂತ ರೀತಮ್ಮನವರ ದೇವಾಲಯದ ಧರ್ಮಕೇಂದ್ರದ ಗುರುಗಳಾದ ಸ್ವಾಮಿ ಮರಿಯಪ್ಪ ಗ್ರೆಗೋರಿ ಮಾತನಾಡಿ, ಎಲ್ಲಾ ಧರ್ಮ ಗ್ರಂಥಗಳು ಹೇಳುವುದು ಒಂದೇ ಭಗವಂತ ಒಬ್ಬನೇ. ಆದರೆ, ನಾವು ಆ ದೇವರನ್ನು ನಾನಾ ರೂಪದಲ್ಲಿ ಕಾಣುತ್ತೇವೆ. ಎಲ್ಲರೂ ಮಾನವೀಯ ಮೌಲ್ಯಗಳಿಂದ ಬದುಕಿದಾಗ ಮಾತ್ರ ಉತ್ತಮ ಸಮಾಜನಿರ್ಮಾಣವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.
ಇದೇ ವೇಳೆ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಲೂರ್ದು ಮಾತೆಯ ಪ್ರತಿಮೆ ದಾನಿಗಳಾದ ಕೇಶವ ಮತ್ತು ಕುಟುಂಬದವರನ್ನು ಸನ್ಮಾನಿಸಲಾಯಿತು.ಸಮುದಾಯದ ಹಿರಿಯ ಮುಖಂಡ ಜೋಸೆಫ್ ಗೊನ್ಸಾಲ್ವಿಸ್, ಪುರಸಭಾ ಮಾಜಿ ಅಧ್ಯಕ್ಷ ರಾಮಚಂದ್ರು, ಟಿ.ಎ.ಪಿ.ಸಿ.ಎಂ.ಎಸ್. ಅಧ್ಯಕ್ಷ ಯದುನಂದನ್‍ಗೌಡ, ನಗರಸಭಾ ಸದಸ್ಯರು, ಚರ್ಚ್‍ನ ಪಾಲನಾ ಸಮಿತಿ ಹಾಗೂ ಆರ್ಥಿಕ ಸಮಿತಿಯ ಸದಸ್ಯರು ಧರ್ಮ ಕೇಂದ್ರದ ಭಕ್ತಾದಿಗಳು ಪಾಲ್ಗೊಂಡಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin