ಲೆಫ್ಟಿನೆಂಟ್ ಗೌರ್ನರ್ ನಿರ್ಧಾರ ಪ್ರಶ್ನಿಸುವಂತಿಲ್ಲ ಎಂದ ಕೋರ್ಟ್ : ಆಮ್ ಆದ್ಮಿಗೆ ಮುಖಭಂಗ

ಈ ಸುದ್ದಿಯನ್ನು ಶೇರ್ ಮಾಡಿ

asdgDGASG

ನವದೆಹಲಿ,ಆ.4-ರಾಷ್ಟ್ರ ರಾಜಧಾನಿ ದೆಹಲಿಯ ಆಡಳಿತಾತ್ಮಕ ಅಧಿಕಾರ ಲೆಫ್ಟಿನೆಂಟ್ ಗೌರ್ನರ್ ಅವರದ್ದೇ ಆಗಿದ್ದು, ಸ್ಥಳೀಯ ಸರ್ಕಾರ ಅವರ ನಿರ್ಧಾರಗಳನ್ನು ಪ್ರಶ್ನಿಸುವಂತಿಲ್ಲ ಎಂಬ ಮಹತ್ವದ ತೀರ್ಪನ್ನು ಇಂದು ದೆಹಲಿ ಉಚ್ಛ ನ್ಯಾಯಾಲಯ ನೀಡಿದೆ. ಈ ತೀರ್ಪಿನಿಂದಾಗಿ ಆಪ್ ಸರ್ಕಾರಕ್ಕೆ ಮುಖಭಂಗವಾಗಿದೆ.  ಲೆಫ್ಟಿನೆಂಟ್ ಗೌರ್ನರ್(ರಾಜ್ಯಪಾಲ) ದೆಹಲಿ ರಾಜ್ಯ ಸಚಿವ ಸಂಪುಟದ ತೀರ್ಮಾನಗಳನ್ನು ಪ್ರಶ್ನಿಸಬಾರದು, ಅವರಿಗೆ  ಆ ಅಧಿಕಾರ ಇಲ್ಲ ಎಂದು ಆಮ್ ಆದ್ಮಿ ಪಾರ್ಟಿ ನ್ಯಾಯಾಲಯದಲ್ಲಿ ವಾದಿಸಿತ್ತು.

ಆದರೆ ಹೈಕೋರ್ಟ್ ಇಂದು ಈ ತೀರ್ಪು ನೀಡುವ ಮೂಲಕ ಲೆಫ್ಟಿನೆಂಟ್ ಗೌರ್ನರ್(ಎಲ್‍ಜಿ) ಅವರ ಆಡಳಿತಾತ್ಮಕ ಅಧಿಕಾರವನ್ನು ಎತ್ತಿ ಹಿಡಿದಿದ್ದು, ಇದರಿಂದ ಎಎಪಿ ಸರ್ಕಾರಕ್ಕೆ ತೀವ್ರ ಹಿನ್ನೆಡೆಯಾಗಿದೆ.
ದೆಹಲಿ ಸಚಿವರಿಗೆ ಎಲ್‍ಜಿ ಅವರ ಅಧಿಕಾರ ವ್ಯಾಪ್ತಿ ಆಡಳಿತಾತ್ಮಕ ನಿರ್ಣಯಗಳನ್ನು ಪ್ರಶ್ನಿಸುವ ಅಧಿಕಾರವಿಲ್ಲ ಎಂದು ಹೇಳಿದೆ. ಸೇವಾ ವಿಷಯಗಳು ದೆಹಲಿ ವಿಧಾನಸಭೆ ವ್ಯಾಪ್ತಿಯಿಂದ ಹೊರಗಿದ್ದು, ಲೆಫ್ಟಿನೆಂಟ್ ಗೌರ್ನರ್ ತಮ್ಮ ಅಧಿಕಾರವನ್ನು ಚಲಾಯಿಸುವುದು ಸಂವಿಧಾನ ಬಾಹಿರವಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.   ಇದಲ್ಲದೆ ಸಿಎನ್‍ಜಿ ಫಿಟ್ನೆಸ್ ಹಗರಣ ಹಾಗೂ ಡಿಡಿಸಿಎ ಹಗರಣಗಳಿಗೆ ಸಂಬಂಧಿಸಿದಂತೆ ದೆಹಲಿಯ ಎಎಪಿ ಸರ್ಕಾರ ರಚಿಸಿರುವ ಆಯೋಗಕ್ಕೆ ಲೆಫ್ಟಿನೆಂಟ್ ಗೌರ್ನರ್ ಅವರ ಅಂಕಿತವಿಲ್ಲದೆ ಮೌಲ್ಯಯುತವಲ್ಲ ಎಂದು ಹೇಳಿದೆ.
ಮೇಲ್ಮನವಿ:
ದೆಹಲಿ ಹೈಕೋರ್ಟ್‍ನ ಈ ತೀರ್ಪನ್ನು ಪ್ರಶ್ನಿಸಿ ತಕ್ಷಣ ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಶ್ನಿಸಿ ಮೇಲ್ಮನವಿ ಅರ್ಜಿ ಸಲ್ಲಿಸಲಾಗುವುದು ಎಂದು ಆಪ್ ಸರ್ಕಾರದ ಪರವಕೀಲರು ಹೇಳಿದ್ದಾರೆ.

Facebook Comments

Sri Raghav

Admin