ಲೋಕಯುಕ್ತ ಹುದ್ದೆಗೆ ಶಿಪಾರಸ್ಸು ಮಾಡಿದ್ದ ನ್ಯಾ.ವಿಶ್ವನಾಥ್ ಶೆಟ್ಟಿ ಹೆಸರು ತಿರಸ್ಕಾರ : ಸರ್ಕಾಕ್ಕೆ ಮತ್ತೆ ಮುಖಭಂಗ

ಈ ಸುದ್ದಿಯನ್ನು ಶೇರ್ ಮಾಡಿ

Lokayujta

ಬೆಂಗಳೂರು. ಜ.16 : ಲೋಕಯುಕ್ತ ನ್ಯಾಯಮೂರ್ತಿ ಹುದ್ದೆಗೆ ರಾಜ್ಯ ಸರ್ಕಾರ ಶಿಪಾರಸ್ಸು ಮಾಡಿದ್ದ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಹೆಸರನ್ನು ರಾಜ್ಯಪಾಲರು ತಿರಸ್ಕರಿಸದ್ದು, ಸರ್ಕಾಕ್ಕೆ ಮತ್ತೇ ಭಾರೀ ಮುಖಭಂಗವಾಗಿದೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎರಡು ಪುಟಗಳ ಪತ್ರ ಬರೆದಿರುವ ರಾಜ್ಯಪಾಲ ವಿ.ಆರ್. ವಾಲಾ ಅವರು ಲೋಕಾಯುಕ್ತ ಹುದ್ದೆಗೆ ಶಿಪಾರಸ್ಸು ಮಾಡಿದ್ದ ಸಲಹ ಸಮಿತಿಯ ಆಯ್ಕೆ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಕಳೆದ ಜ. 10 ರಂದು ಸರ್ಕಾರ ಲೋಕಾಯುಕ್ತ ಹುದ್ದೆಗೆ ವಿಶ್ವನಾಥ್ ಶೆಟ್ಟಿ ಅವರು ಹೆಸರನ್ನು ಶಿಪಾರಸ್ಸು ಮಾಡಿರುವುದು ಅನೇಕ ಸಂದೇಹಗಳಿಗೆ ಎಡೆಮಾಡಿಕೊಟ್ಟಿದೆ. ಸಲಹಾ ಸಮಿತಿ ಕೇವಲ ಒಂದೇ ದಿನ ಸಭೆ ನಡೆಸಿ ಆಯ್ಕೆ ಮಾಡಿದ್ದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನೆ ಮಾಡಿದ್ದಾರೆ.

ಸಾಮಾನ್ಯವಾಗಿ ಲೋಕಾಯುಕ್ತ ಹುದ್ದೆಗೆ ಕನಿಷ್ಟ ಎರಡರಿಂದ ಮೂರು ಹೆಸರಗಳನ್ನು ಪ್ರಸ್ತಾಪ ಮಾಡಬೇಕಿತ್ತು. ಆದರೆ ಸಲಹಾ ಸಮಿತಿ ಔಪಚಾರಿಕವಾಗಿ ಸಭೆ ನಡೆಸಿ ಒಬ್ಬರ ಹೆಸರನ್ನು ಶಿಪಾರಸ್ಸು ಮಾಡಿರುವುದು ಸರಿಯಲ್ಲ. ಲೋಕಾಯುಕ್ತ ನ್ಯಾಯಮೂರ್ತಿಗಳ ನೇಮಕಾತಿಗೆ ಸಂಬಂಧಿಸಿದಂತೆ ಈ ಹಿಂದೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಪಾಲನೆ ಮಾಡಿಲ್ಲ ಎಂದು ರಾಜ್ಯಪಾಲರು ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಲೋಕಾಯುಕ್ತ ಸಂಸ್ಥೆಗೆ ಆಯ್ಕೆ ಮಾಡುವ ವೇಳೆ ಸುಪ್ರಂಕೋರ್ಟ್ ನೀಡಿರುವ ತೀರ್ಪನ್ನು ಪಾಲನೆ ಮಾಡಲೇಬೇಕು ಎಂಬ ಆದೇಶವಿದ್ದರೂ ಸರ್ಕಾರ ಪದೇ ಪದೇ ಎಡುವುತ್ತಿರುವುದು ಸರಿಯಲ್ಲ. ಅಲ್ಲದೆ ಸರ್ಕಾರ ಶಿಫಾರಸ್ಸು ಮಾಡಿರುವ ನ್ಯಾಯಮೂರ್ತಿಗಳ ವಿರುದ್ದ ಸಮಾಜ ಪರಿವರ್ತನ ಸಮೂದಾಯ ಮಾಡಿರುವ ಆರೋಪಗಳನ್ನು ಏಕೆ ಪರಿಗಣಿಸಿಲ್ಲ ಎಂದು ಪ್ರಶ್ನೆಸಿದ್ದಾರೆ.

ಕೇವಲ ಸದನ ಸಲಹ ಸಮಿತಿ ಒಪ್ಪಿಕೊಂಡಿರುವದಕ್ಕೆ ನಾವು ಸಹಿ ಹಾಕಬೇಕೆಂಬ ನಿಯಮವಿಲ್ಲ. ಆಯ್ಕೆ ಮಾಡಿದ ವಿಧಾನ ಸಾರ್ವಜನಿಕವಾಗಿ ಅನುಮಾನಕ್ಕೆ ಎಡೆಮಾಡಿಕೊಟ್ಟರೆ ಕಾರ್ಯಾಂಗದ ಮುಖ್ಯಸ್ಥರಾದ ರಾಜ್ಯಪಾಲರು ಪ್ರಶ್ನೆ ಮಾಡಬಹುದೆಂದು ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.

ವಿಶ್ವನಾಥ್ ಶೆಟ್ಟ ಮೇಲಿನ ಆರೋಪವೇನು?

ಲೋಕಾಯುಕ್ತ ಹುದ್ದೆಗೆ ಶಿಫಾರಸುಗೊಂಡಿರುವ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಅವರ ಕುಟುಂಬ ಅಕ್ರಮವಾಗಿ ಗೋಮಾಳ ಜಮೀನು ಹೊಂದಿದ್ದು, ಅವರನ್ನು ಲೋಕಾಯುಕ್ತ ಹುದ್ದೆಗೆ ಪರಿಗಣಿಸದಂತೆ ರಾಜ್ಯಪಾಲರಿಗೆ ಸಮಾಜ ಪರಿವರ್ತನಾ ಸಮುದಾಯ ಮುಖ್ಯಸ್ಥ ಎಸ್.ಆರ್. ಹಿರೇಮಠ ದೂರು ನೀಡಿದ್ದರು.  ಬೆಂಗಳೂರು ನಗರ ಜಿಲ್ಲೆಯ ಜಾಲ ಹೋಬಳಿಯ ಕಾಡಗನಹಳ್ಳಿಯಲ್ಲಿ ಸರ್ವೇ ಸಂಖ್ಯೆ 23 ಹಾಗೂ 101ರಲ್ಲಿ ಒಟ್ಟು 4.25 ಎಕರೆ ಗೋಮಾಳ ಭೂಮಿ ಖರೀದಿ ಮಾಡಲಾಗಿದೆ. 1986ರಲ್ಲಿ ಆರ್. ರಾಮಸ್ವಾಮಿ ಎಂಬುವರಿಂದ ವಿಶ್ವನಾಥ ಶೆಟ್ಟಿ ಅವರ ಪತ್ನಿ ಶಕುಂತಲಾ ಶೆಟ್ಟಿ ಅವರ ಸೋದರ ಕೆ.ವಿಜಯ ಶೆಟ್ಟಿ ಅವರು ಖರೀದಿಸಿದ್ದರು. 2005ರ ವರೆಗೂ ಇವರು ಜಮೀನಿನ ಜಂಟಿ ಪಾಲುದಾರರಾಗಿದ್ದರು.

1966ರಲ್ಲಿ ಜಮೀನನ್ನು ತಮ್ಮ ಹೆಸರಿಗೆ ಖಾತೆ ಮಾಡಿಸಿಕೊಂಡಿದ್ದಾರೆ. ಕಾಯ್ದೆ ಅನ್ವಯ ಗೋಮಾಳ ಜಮೀನನ್ನು ಯಾರೂ ಮಾರುವಂತಿಲ್ಲ ಹಾಗೂ ಯಾರೂ ಖರೀದಿಸುವಂತಿಲ್ಲ. ಹೀಗಿರುವಾಗ ಶಕುಂತಲಾ ಶೆಟ್ಟಿ ಖರೀದಿಸಿರುವ ಪ್ರಕ್ರಿಯೆ ಹಾಗೂ ಗೋಮಾಳ ಜಮೀನು ಹೊಂದಿರುವುದು ಕಾನೂನಿಗೆ ವಿರುದ್ಧವಾಗಿದೆ. ಈ ಕುರಿತು ಉನ್ನತ ಮಟ್ಟದ ಸಮಿತಿಯಿಂದ ತನಿಖೆ ನಡೆಸಿ ಸತ್ಯಾಸತ್ಯತೆ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದ್ದರು. ಈ ಹಿಂದೆ ಲೋಕಾಯುಕ್ತ ಹುದ್ದೆಗೆ ಎಸ್.ಆರ್. ನಾಯಕ್ ಅವರ ಹೆಸರುನ್ನು ಶಿಫಾರಸ್ಸು ಮಾಡಿದ್ದ ಸರ್ಕಾರದ ಪ್ರಸ್ತಾವನೆಯನ್ನು ರಾಜ್ಯಪಾಲರು ತಿರಸ್ಕರಿಸಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin