ಲೋಕಸಭಾ ಅಧಿವೇಶನ : 545 ಸದಸ್ಯರಲ್ಲಿ ಖರ್ಗೆ, ಮೊಯ್ಲಿ ಗರಿಷ್ಠ ಹಾಜರಾತಿ

ಈ ಸುದ್ದಿಯನ್ನು ಶೇರ್ ಮಾಡಿ

kharge--01

ನವದೆಹಲಿ, ಜೂ.5- ಲೋಕಸಭೆಯ 545 ಸದಸ್ಯರಲ್ಲಿ ಕೇವಲ ಐವರು ಮಾತ್ರ ಅಧಿವೇಶನ ಕಲಾಪಗಳಲ್ಲಿ ಗರಿಷ್ಠ ಹಾಜರಾತಿ ದಾಖಲೆ ಸೃಷ್ಟಿಸಿದ್ದಾರೆ. ಲೋಕಸಭಾ ಕಾಂಗ್ರೆಸ್ ನಾಯಕ ಡಾ.ಎಂ.ಮಲ್ಲಿಕಾರ್ಜುನ ಖರ್ಗೆ ಮತ್ತು ಹಿರಿಯ ಸಂಸದ ಡಾ.ಎಂ.ವೀರಪ್ಪ ಮೊಯ್ಲಿ ಅವರ ಹೆಸರುಗಳೂ ಈ ಪಟ್ಟಿಯಲ್ಲಿವೆ.
ಸಂಸತ್ತಿನ ಕಾರ್ಯನಿರ್ವಹಣೆ ಕುರಿತು ನಿಗಾ ವಹಿಸಿರುವ ಸರ್ಕಾರೇತರ ಸಂಸ್ಥೆಯಾದ (ಎನ್‍ಜಿಒ) ಪಿಆರ್‍ಎಸ್ ಲೆಜಿಸ್ಲೇಷನ್ ಪ್ರಸ್ತುತ ಲೋಕಸಭೈಯ ಮೂರು ವರ್ಷಗಳ ಅವಧಿಯಲ್ಲಿ 545 ಸದಸ್ಯರ ಹಾಜರಾತಿ ಅಂಕಿ ಅಂಶವನ್ನು ಪ್ರಕಟಿಸಿದೆ.ಅಧಿವೇಶನದ ಕಲಾಪಗಳಲ್ಲಿ ಖರ್ಗೆ ಮತ್ತು ಮೊಯ್ಲಿ ಅವರು ಅನುಕ್ರಮವಾಗಿ ಶೇ.92 ಮತ್ತು ಶೇ.91ರಷ್ಟು ಹಾಜರಾತಿ ಹೊಂದಿದ್ದು, ಕಲಾಪಗಳ ಚರ್ಚೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಗಮನಸೆಳೆದಿದ್ದಾರೆ.   ಮಧ್ಯಪ್ರದೇಶದ ಬಾಂಡಾ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿರುವ ಭೈರೋನ್ ಪ್ರಸಾದ್ ಮಿಶ್ರಾ ಅವರು ಶೇ.100ರಷ್ಟು ಹಾಜರಾತಿ ಮೂಲಕ ತಮ್ಮ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ. ಅವರು 1488 ವಿಷಯಗಳ ಕುರಿತ ಚರ್ಚೆಗಳಲ್ಲಿ ಪಾಲ್ಗೊಂಡಿದ್ದಾರೆ ಎಂದು ಎನ್‍ಜಿಒ ತಿಳಿಸಿದೆ.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಸಹ ಗಮನಾರ್ಹ ಪ್ರಮಾಣದಲ್ಲಿ ಹಾಜರಾತಿ ದಾಖಲಿಸಿದ್ದಾರೆ. ಅಧಿವೇಶನ ಕಲಾಪಗಳಲ್ಲಿ ಮಗನಿಗಿಂತ ತಾಯಿ ಹಾಜರಾತಿ ಹೆಚ್ಚಾಗಿರುವುದು ಕಂಡುಬಂದಿದೆ. ಸೋನಿಯಾ ಶೇ. 59ರಷ್ಟು ಹಾಜರಾತಿ ದಾಖಲಿಸಿದ್ದರೆ, ರಾಹುಲ್ ಉಪಸ್ಥಿತಿ ಶೇ.54ರಷ್ಟು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin