ಲೋಕಸಭೆಯಲ್ಲಿ ಮೋಟಾರು ವಾಹನ ಕಾಯ್ದೆ ಅಂಗೀಕಾರ : ಸಾರಿಗೆ ವಲಯದಲ್ಲಿ ಕ್ರಾಂತಿಕಾರಿ ಸುಧಾರಣೆಗೆ ನಾಂದಿ

ಈ ಸುದ್ದಿಯನ್ನು ಶೇರ್ ಮಾಡಿ

Nitin-ghadkari--01

ನವದೆಹಲಿ, ಏ.12- ಸಂಚಾರಿ ನಿಯಮಗಳ ಉಲ್ಲಂಘನೆಗಾಗಿ ವಿಧಿಸಲಾಗುವ ದಂಡದಲ್ಲಿ ಐದು ಪಟ್ಟು ಏರಿಕೆ, ನಕಲಿ ಲೈಸನ್ಸ್ ಮತ್ತು ವಾಹನ ಕಳ್ಳತನಗಳ ತಡೆಗೆ ಕಠಿಣ ಕ್ರಮ, ರಸ್ತೆ ಸುರಕ್ಷತೆಗೆ ಒತ್ತು, ಅಪರಾಧಗಳ ನಿಯಂತ್ರಣ-ಇವು ಲೋಕಸಭೆಯಲ್ಲಿ ಅಂಗೀಕಾರಗೊಂಡ ಮೋಟಾರು ವಾಹನ ತಿದ್ದುಪಡಿ ಮಸೂದೆಯಲ್ಲಿರುವ ಪ್ರಮುಖ ಅಂಶಗಳಾಗಿವೆ. ಈ ಮೂಲಕ ಸಾರಿಗೆ ವಲಯದಲ್ಲಿ ಕ್ರಾಂತಿಕಾರಿ ಸುಧಾರಣೆಗಳನ್ನು ಜಾರಿಗೊಳಿಸಲು ಉದ್ದೇಶಿಸಲಾಗಿದೆ.
ಹಿಟ್ ಅಂಡ್ ರನ್ ಪ್ರಕರಣದಲ್ಲಿ ಈಗಿರುವ ಮೊತ್ತವನ್ನು ಎಂಟು ಪಟ್ಟು ಹೆಚ್ಚಿಸಲು ಈ ತಿದ್ದುಪಡಿ ವಿಧೇಯಕದಲ್ಲಿ ಅವಕಾಶವಿದೆ. ಅಲ್ಲದೇ ಮದ್ಯ ಸೇವಿಸಿ ವಾಹನ ಚಾಲನೆ, ಅಜಾಗರೂಕತೆಯ ಚಾಲನೆ ಮೊದಲಾದ ನಿಯಮ ಉಲ್ಲಂಘನೆಗೆ ಭಾರೀ ದಂಡ ವಿಧಿಸಲಾಗುತ್ತದೆ. ಲೈಸನ್ಸ್ ಇಲ್ಲದ ಹಾಗೂ ಅಪ್ರಾಪ್ತರು ವಾಹನ ಚಾಲನೆ ಮಾಡಿ ಅಪಘಾತಕ್ಕೆ ಮಾಡಿ ಸಾವು-ನೋವಿಗೆ ಕಾರಣವಾದರೆ ಪೋಷಕರಿಗೆ ಜೈಲು ಶಿಕ್ಷೆ ವಿಧಿಸುವ ಕಟ್ಟುನಿಟ್ಟಿನ ನಿಯಮವನ್ನೂ ಜಾರಿಗೊಳಿಸಲು ಪ್ರಸ್ತಾಪಿಸಲಾಗಿದೆ.

2016ರ ಮೋಟಾರು ವಾಹನ (ತಿದ್ದುಪಡಿ) ವಿಧೇಯಕವು ಕಾಯ್ದೆಯಾಗಿ ಜಾರಿಗೆ ಬಂದಲ್ಲಿ, ವಾಹನ ನೋಂದಣಿ, ಪರವಾನಗಿ ನೀಡಿಕೆ-ಈ ಎಲ್ಲ ರಸ್ತೆ ಸಾರಿಗೆ ಪ್ರಕ್ರಿಯೆಗಳು ಇ-ಆಡಳಿತ ವ್ಯಾಪ್ತಿಗೆ ಬರಲಿದೆ. ಸಾರಿಗೆ ಕ್ಷೇತ್ರದಲ್ಲಿ ಇ-ಆಡಳಿತ ವ್ಯವಸ್ಥೆ ಜಾರಿಗೊಂಡ ನಂತರ, ನಕಲಿ ಡ್ರೈವಿಂಗ್ ಲೈಸನ್ಸ್ ಅಥವಾ ವಾಹನ ಕಳ್ಳತನಕ್ಕೆ ಅವಕಾಶ ಇರುವುದಿಲ್ಲ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಈಗಾಗಲೇ ತಿಳಿಸಿದ್ದಾರೆ.

ವಾಹನ ಅಪಘಾತದಲ್ಲಿ ಸಂಭವಿಸುವ ಸಾವಿಗೆ ಗರಿಷ್ಠ 10 ಲಕ್ಷ ರೂ. ವಿಮಾ ಪರಿಹಾರ ನೀಡಲು ಮಸೂದೆಯಲ್ಲಿ ಉದ್ದೇಶಿಸಲಾಗಿದೆ. ಅಲ್ಲದೇ, 30 ವರ್ಷಗಳಷ್ಟು ಹಳೆಯದಾದ 1988ರ ಮೋಟಾರು ವಾಹನ ಕಾಯ್ದೆಗೆ ಈ ವಿಧೇಯಕದ ಮೂಲಕ ತಿದ್ದುಪಡಿ ತರಲಾಗುವುದು.  ಅಪಘಾತಗಳಲ್ಲಿ ನಾಲ್ಕು ತಿಂಗಳ ಒಳಗೆ 5 ಲಕ್ಷ ರೂ.ಗಳ ಪರಿಹಾರ ನೀಡಬೇಕೆಂದು ಈ ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ. ಪರಿಹಾರದ ಇಡೀ ಮೊತ್ತವನ್ನು ವಿಮಾ ಕಂಪನಿಗಳೇ ಭರಿಸಬೇಕೆಂಬ ನಿಯಮವನ್ನು ಅಳವಡಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin