ಲೋಕಸಭೆಯಲ್ಲಿ ಸೋಮವಾರ ಜಿಎಸ್‍ಟಿ ಮಸೂದೆ ಅಂಗೀಕಾರ..?

ಈ ಸುದ್ದಿಯನ್ನು ಶೇರ್ ಮಾಡಿ

afgAGdgನವದೆಹಲಿ, ಆ.5-ತೀವ್ರ ಚರ್ಚೆಗೆ ಗ್ರಾಸವಾಗಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಮಸೂದೆ ಆ.8ರಂದು ಸೋಮವಾರ ಲೋಕಸಭೆಯಲ್ಲಿ ಅಂಗೀಕಾರವಾಗುವ ಸಾಧ್ಯತೆ ಇದೆ. ವಿಧೇಯಕ ಸುಗಮ ಅಂಗೀಕಾರಕ್ಕಾಗಿ ಬಿಜೆಪಿ ತನ್ನ ಸದಸ್ಯರಿಗೆ ವಿಪ್ ಜಾರಿಗೊಳಿಸಿದೆ. ಕಳೆದ ಬುಧವಾರ ರಾಜ್ಯಸಭೆಯಲ್ಲಿ ಈ ಮಸೂದೆ ಅಂಗೀಕಾರವಾಗಿತ್ತು. ಜಿಎಸ್‍ಟಿ ಮಸೂದೆ ಸೋಮವಾರ ಲೋಕಸಭೆಯಲ್ಲಿ ಅಂಗೀಕಾರವಾಗುವ ನಿರೀಕ್ಷೆ ಇರುವುದರಿಂದ ತನ್ನ ಎಲ್ಲ ಸದಸ್ಯರು ಕಲಾಪಕ್ಕೆ ತಪ್ಪದೇ ಹಾಜರಾಗುವಂತೆ ಬಿಜೆಪಿ ಇಂದು ವಿಪ್ ನೀಡಿದೆ.  ಸೋಮವಾರ ಜಿಎಸ್‍ಟಿ ಮಸೂದೆ ಮಂಡನೆಯಾಗಲಿದೆ ಹಾಗೂ ಮತಕ್ಕೆ ಬರುವ ಸಾಧ್ಯತೆ ಇದೆ ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ.


ಮುಂದಿನ ವರ್ಷ ಏಪ್ರಿಲ್ ಒಂದರಿಂದ ಜಿಎಸ್‍ಟಿ ಜಾರಿ ಸಾಧ್ಯವಾಗದು ಎಂಬ ಅನುಮಾನಗಳಿಗೆ ಕೇಂದ್ರ ಹಣಕಾಸು ಸಚಿವ ಅರುಣ್‍ಜೇಟ್ಲಿ  ತೆರೆ ಎಳೆದಿದ್ದು, ನೀಲನಕ್ಷೆಯನ್ನು ಪ್ರಕಟಿಸಿದ್ದಾರೆ.

► Follow us on –  Facebook / Twitter  / Google+

ಡೌನ್ಲೋಡ್ ‘ಈ ಸಂಜೆ’ ಮೊಬೈಲ್  ಆಪ್ 

Facebook Comments

Sri Raghav

Admin