ಲೋಕಾಯುಕ್ತ ನೇಮಕ ಪ್ರಕ್ರಿಯೆ ಚುರುಕು..!

ಈ ಸುದ್ದಿಯನ್ನು ಶೇರ್ ಮಾಡಿ

Lokayuta

ಬೆಂಗಳೂರು, ಆ.8- ಲೋಕಾಯುಕ್ತಕ್ಕೆ ಸುಭಾಷ್ ಬಿ.ಅಡಿ ಅವರ ಪುನರಾಗಮನಕ್ಕೆ  ಸರ್ಕಾರ ಬೆಚ್ಚಿ ಬಿದ್ದಿದ್ದು, ಲೋಕಾಯುಕ್ತ ನೇಮಕ ಪ್ರಕ್ರಿಯೆ ಚುರುಕುಗೊಳಿಸಿದೆ. ನ್ಯಾ.ಎಸ್.ಆರ್. ನಾಯಕ್ ಹೆಸರು ಕೈ ಬಿಟ್ಟು, ಹೊಸ ಹೆಸರು ಕಳುಹಿಸಲು ಸರ್ಕಾರ ಸಿದ್ಧತೆ ನಡೆಸಿದೆ.  ಈಗ ಲೋಕಾಯುಕ್ತರಿಲ್ಲದ್ದರಿಂದ ಸುಭಾಷ್ ಬಿ.ಅಡಿ ಲೋಕಾಯುಕ್ತದ ಪ್ರಭಾರಿಯಾಗಿರಲಿ ದ್ದಾರೆ. ಹೀಗಾಗಿ ಎಸ್.ಆರ್.ನಾಯಕ್ ಕೈಬಿಟ್ಟು ಲೋಕಾ ಯುಕ್ತ ನ್ಯಾಯಮೂರ್ತಿ ಸ್ಥಾನಕ್ಕೆ ನಿವೃತ್ತ ನ್ಯಾಯಮೂರ್ತಿ ಎ.ಎಂ.ಫಾರೂಕ್ ಅವರ ಹೆಸರನ್ನು ಶಿಫಾರಸು ಮಾಡುವುದು ಬಹುತೇಕ ಖಚಿತವಾಗಿದೆ.
ನ್ಯಾ.ಫಾರೂಕ್ ಯಾರು..? ಕರ್ನಾಟಕ ಹಾಗೂ ಕಾಸರಗೋಡಿನಲ್ಲಿ ಓದಿ ಬೆಳೆದ ಫಾರೂಕ್ 1968ರಿಂದ ನ್ಯಾಯಾಂಗ ಕ್ಷೇತ್ರದಲ್ಲಿದ್ದಾರೆ. ಕರ್ನಾಟಕ ಹೈಕೋರ್ಟ್‍ನಲ್ಲಿ 1995ರಿಂದ ನ್ಯಾಯಮೂರ್ತಿ ಆಗಿರುವ ಅವರು ಕರ್ನಾಟಕ ಜುಡಿಷಿಯಲ್ ಅಕಾಡೆಮಿ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ನ್ಯಾ.ಸಂತೋಷ್ ಹೆಗಡೆ, ನ್ಯಾ.ಜಗನ್ನಾಥ್ ಶೆಟ್ಟಿ ಅವರ ಬಳಿ ಕಿರಿಯ ವಕೀಲರಾಗಿಯೂ ಕೆಲಸ ಮಾಡಿದ್ದಾರೆ. ಕರ್ನಾಟಕ ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿಯೂ 1995ರ ವರೆಗೂ ಫಾರೂಕ್ ಕೆಲಸ ಮಾಡಿದ್ದಾರೆ.

ತಿದ್ದುಪಡಿಯಿಂದಾಗಿ ನೇಮಕ:

ಈ ಹಿಂದೆ ಲೋಕಾಯುಕ್ತದ ನ್ಯಾಯಮೂರ್ತಿ ಯಾಗಬೇಕಾದರೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿರಬೇಕಿತ್ತು ಅಥವಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿರುವುದು ಕಡ್ಡಾಯವಾಗಿತ್ತು.    ಆದರೆ, ಲೋಕಾಯುಕ್ತ ಕಾಯ್ದೆ ತಿದ್ದುಪಡಿ ಪ್ರಕಾರ ಲೋಕಾಯುಕ್ತರಾಗುವವರು  ಹೈಕೋರ್ಟ್‍ನಲ್ಲಿ 10 ವರ್ಷ ನ್ಯಾಯಮೂರ್ತಿ ಗಳಾಗಿದ್ದರೆ ಅವರನ್ನು ಲೋಕಾ ನ್ಯಾಯಾಮೂರ್ತಿ ಗಳನ್ನಾಗಿ ನೇಮಿಸಬಹುದು.  ಈ ಹೊಸ ತಿದ್ದುಪಡಿ ಅನ್ವಯ ನ್ಯಾ.ಎ.ಎಂ. ಫಾರೂಕ್ ಅವರನ್ನು ನೇಮಿಸಲು ಸರ್ಕಾರ ಸಿದ್ಧತೆ ನಡೆಸಿದೆ ಎಂದು ಮೂಲಗಳು ಮಾಹಿತಿ ನೀಡಿದೆ.

Facebook Comments

Sri Raghav

Admin