ಲೋಧಾ ಸಮಿತಿ ಶಿಫಾರಸ್ಸು ಅನುಷ್ಠಾನಕ್ಕೆ ಬಿಸಿಸಿಐಗೆ 2 ವಾರ ಗಡುವು ನೀಡಿದ ಸುಪ್ರೀಂ

ಈ ಸುದ್ದಿಯನ್ನು ಶೇರ್ ಮಾಡಿ

bcci

ನವದೆಹಲಿ,ಅ.21- ನ್ಯಾ.ಲೋಧಾ ಸಮಿತಿ ಶಿಫಾರಸುಗಳನ್ನು ಅನುಷ್ಠಾನ ಗೊಳಿಸಲು ಹಿಂದೇಟು ಹಾಕುತ್ತಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಗೆ ಸುಪ್ರೀಂಕೋರ್ಟ್ ಚಾಟಿ ಬೀಸಿದೆ. ನ್ಯಾ.ಲೋಧಾ ಶಿಫಾರಸ್ಸುಗಳನ್ನು ಎರಡು ವಾರದೊಳಗೆ ಜಾರಿಗೆ ತರಬೇಕು ಎಂದು ಸುಪ್ರೀಂಕೋರ್ಟ್ ಬಿಸಿಸಿಐಗೆ ಗಡುವು ನೀಡಿದೆ. ಒಂದು ವೇಳೆ ಆದೇಶ ಪಾಲಿಸದಿದ್ದರೆ ಎಲ್ಲ ರೀತಿಯ ಹಣಕಾಸಿನ ವ್ಯವಹಾರಗಳ ಮೇಲೆ ನಿರ್ಬಂಧ ಹೇರಲಾಗುವುದು ಎಂದು ಸುಪ್ರೀಂಕೋರ್ಟ್ ಎಚ್ಚರಿಕೆ ನೀಡಿದೆ. ಶಿಫಾರಸುಗಳನ್ನು ಅನುಷ್ಠಾನಗೊಳಿಸುವುದಾಗಿ ಆಶ್ವಾಸನೆ ಲಭಿಸುವ ತನಕ ರಾಜ್ಯ ಕ್ರಿಕೆಟ್ ಮಂಡಳಿಗೆ ಹಣಕಾಸು ಬಿಡುಗಡೆ ಮಾಡಬಾರದೆಂದು ಸುಪ್ರೀಂಕೋರ್ಟ್ ಬಿಸಿಸಿಐಗೆ ತಾಕೀತು ಮಾಡಿದೆ.

ನ್ಯಾ.ಲೋಧಾ ಸಮಿತಿ ಎದುರು ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಹಾಜರಾಗಬೇಕೆಂದು ಸುಪ್ರೀಂಕೋರ್ಟ್ ಸೂಚಿಸಿದೆ.  ನ್ಯಾ.ಲೋಧಾ ಸಮಿತಿ ಅನುಮತಿ ಪಡೆದು ಬಿಸಿಸಿಐ ಹಣಕಾಸು ವ್ಯವಹಾರ ಸಂಬಂಧಕ್ಕೆ ಸ್ವತಂತ್ರ ಅಧಿಕಾರಿಯನ್ನು ನೇಮಿಸಲು ಸುಪ್ರೀಂಕೋರ್ಟ್ ತೀರ್ಮಾನ ಕೈಗೊಳ್ಳಲಾಗಿದೆ. ಪಂದ್ಯ ನಡೆಸುವುದಕ್ಕೆ ಹಾಗೂ ರಾಜ್ಯ ಸಂಸ್ಥೆಗಳಲ್ಲಿ ಹಣ ನೀಡುವ ವ್ಯವಹಾರಗಳನ್ನು ನಿಲ್ಲಿಸಬೇಕು ಎಂದು ಹೇಳಿದ್ದು, ಮುಂಬರುವ ದಿನಗಳಲ್ಲಿ ಬಿಸಿಸಿಐ ಮೇಲೆ ಆರ್ಥಿಕ ಆತಂಕದ ಕಾರ್ಮೋಡ ಕವಿಯಲಿದೆ.  ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಶಶಾಂಕ್ ಮನೋಹರ್ ಅವರಿಗೂ ಕೂಡ ಈ ಆದೇಶದ ಸಾರಂಶವನ್ನು ತಿಳಿಸಿ ಎಂದು ಸುಪ್ರೀಂಕೋರ್ಟ್ ಬಿಸಿಸಿಐ ಅಧಿಕಾರಿಗಳಿಗೆ ಸೂಚಿಸಿದೆ.

ಸದ್ಯ ಭಾರತ ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ಏಕದಿನ ಸರಣಿ ಹಾಗೂ ದೇಶೀಯ, ರಾಜ್ಯ ಪಂದ್ಯಗಳು ನಡೆಯುತ್ತಿರುವುದರಿಂದ ಹಣಕಾಸಿನ ಮುಗ್ಗಟ್ಟು ಎದುರಿಸಲಿದೆ. ಪಂದ್ಯ ನಡೆಸುವುದಕ್ಕೆ ಆರ್ಥಿಕ ಸಮಸ್ಯೆ ಎದುರಾದರೆ ಈಗ ನಡೆಯುತ್ತಿರುವ ಪಂದ್ಯಗಳನ್ನು ರದ್ದು ಮಾಡಬೇಕಾದ ಸ್ಥಿತಿಯೂ ಬರಲಿದೆ.

ಮಾಡು ಇಲ್ಲವೆ ಮಡಿ:

ಕೆಲ ತಿಂಗಳಿನಿಂದ ಬಿಸಿಸಿಐ ಹಾಗೂ ಸುಪ್ರೀಂಕೋರ್ಟ್ ನಡುವೆ ತಿಕ್ಕಾಟ ನಡೆಯುತ್ತಿದ್ದು , ಹಲವು ಬಾರಿ ಸುಪ್ರೀಂಕೋರ್ಟ್ ನ್ಯಾ.ಲೋಧಾ ಶಿಫಾರಸುಗಳನ್ನು ಅನುಷ್ಠಾನ ಮಾಡಿ ಎಂದು ಬಿಸಿಸಿಐಗೆ ಸೂಚನೆ ನೀಡಿತ್ತು. ಆದರೆ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಅವರು ನ್ಯಾ.ಲೋಧಾ ಶಿಫಾರಸ್ಸುಗಳು ಸಮಂಜಸವಲ್ಲ ಎಂದು ಹೇಳುವ ಮೂಲಕ ಮತ್ತೆ ಕೆಂಗೆಣ್ಣಿಗೆ ಗುರಿಯಾಗಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin