ವಕೀಲ ಅಮಿತ್ ಶೂಟೌಟ್ ಪ್ರಕರಣ : ಪೊಲೀಸರು ಸಲ್ಲಿಸಿದ ಚಾರ್ಜ್‍ಶೀಟ್‍ ನಲ್ಲೇನಿದೆ ..?

ಈ ಸುದ್ದಿಯನ್ನು ಶೇರ್ ಮಾಡಿ

Shruthi-01-Amith

ಬೆಂಗಳೂರು, ಮೇ 3– ವಕೀಲ ಅಮಿತ್‍ಗೌಡ ಶೂಟೌಟ್ ಪ್ರಕರಣ ಸಂಬಂಧ ಸೋಲದೇವನಹಳ್ಳಿ ಠಾಣೆ ಪೊಲೀಸರು ನ್ಯಾಯಾಲಯಕ್ಕೆ 300 ಪುಟಗಳ ಚಾರ್ಜ್‍ಶೀಟ್ ಸಲ್ಲಿಸಿದ್ದಾರೆ.
ಪ್ರಕರಣ ಸಂಬಂಧ 47 ಜನರ ಸಾಕ್ಷಿ ಸಂಗ್ರಹಿಸಲಾಗಿದೆ. ಪಿಡಿಒ ಶೃತಿಗೌಡ ಮತ್ತು ವಕೀಲ ಅಮಿತ್‍ಗೌಡನಿಗೆ ಇದ್ದ ಸಂಬಂಧದ ಬಗ್ಗೆಯೂ ಚಾರ್ಜ್‍ಶೀಟ್‍ನಲ್ಲಿ ಉಲ್ಲೇಖಿಸಲಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.



ಜನವರಿ 13ರಂದು ಶೃತಿಗೌಡ ಪತಿ ರಾಜೇಶ್ ಹಾಗೂ ಮಾವ ಗೋಪಾಲಕೃಷ್ಣ ಅವರು ಹೆಸರಘಟ್ಟ ಬಳಿ ಶೃತಿ ಹಾಗೂ ವಕೀಲ ಅಮಿತ್‍ಗೌಡ ಇದ್ದ ಕಾರಿನ ಮೇಲೆ ದಾಳಿ ಮಾಡಿದ್ದರು. ಈ ವೇಳೆ ರಾಜೇಶ್ ರಿವಾಲ್ವರ್‍ನಿಂದ ಅಮಿತ್‍ಗೆ ಗುಂಡು ಹಾರಿಸಿದ್ದರು. ಘಟನೆಯಲ್ಲಿ ಅಮಿತ್ ಮೃತಪಟ್ಟಿದ್ದು, ಶೃತಿಗೌಡ ಸಪ್ತಗಿರಿ ಆಸ್ಪತ್ರೆ ಸಮೀಪದ ಲಾಡ್ಜ್‍ಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin