ವಕ್ಕಲಿಗರ ಸ್ಮಶಾನಕ್ಕೆ ಭೂಮಿ ಮಂಜೂರಿಗೆ ಒತ್ತಾಯಿಸಿ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

okkaligaru

ತುಮಕೂರು,ಸೆ.14-ನಗರದಲ್ಲಿ ವಾಸಿಸುತ್ತಿರುವ ಒಕ್ಕಲಿಗ ಸಮುದಾಯವರಿಗೆ ತುಮಕೂರು ಕಸಬಾ ಹೋಬಳಿ ಸ್ವಾಂದೇನಹಳ್ಳಿ ಪಕ್ಕದಲ್ಲಿರುವ ಸರಕಾರಿ ಭೂಮಿಯಲ್ಲಿ 5 ಎಕರೆಯನ್ನು ಸ್ಮಶಾನಕ್ಕೆ ಮಂಜೂರು ಮಾಡಿಕೊಡಬೇಕೆಂದು ಒತ್ತಾಯಿಸಿ ಇಂದು ಒಕ್ಕಲಿಗರ ವಿಕಾಸ ವೇದಿಕೆವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ನಗರದ ಡಾ.ಶ್ರೀಶಿವಕುಮಾರಸ್ವಾಮೀಜಿಗಳ ವೃತ್ತದಲ್ಲಿರುವ ಒಕ್ಕಲಿಗರ ವಿಕಾಸ ವೇದಿಕೆ ಗೌರವಾಧ್ಯಕ್ಷ ಗಿರೀಶ್, ಅಧ್ಯಕ್ಷ ಉದಯ್,ಕಾರ್ಯದರ್ಶಿ ಕರಿಯಪ್ಪ,ಖಜಾಂಚಿ ಟಿ.ಎಸ್.ಶ್ರೀನಿವಾಸ್,ನಿದೇಶಕರಾದ ಎಂ.ಶಂಕರ್,ಶ್ರೀನಾಥಗೌಡ,ಒಕ್ಕಲಿಗ ಮುಖಂಡರಾದ ನರಸೇಗೌಡ,ಬೆಳ್ಳಿ ಲೋಕೇಶ್,ನಿವೃತ್ತ ಪ್ರಾಂಶುಪಾಲ ಮರುಳಯ್ಯ,ಕೇಶವಮೂರ್ತಿ, ಲಕ್ಕೇಗೌಡ, ಕೆಂಪರಾಜು ಮತ್ತಿತತರು ಜಿಲ್ಲಾಧಿಕಾರಿಗಳ ಕಚೇರಿಗೆ ನಿಯೋಗ ತೆರಳಿ ಮನವಿ ಸಲ್ಲಿಸಿದರು.
ತುಮಕೂರು ನಗರದಲ್ಲಿ ಸುಮಾರು 40 ಸಾವಿರದಷ್ಟು ಒಕ್ಕಲಿಗ ಸಮುದಾಯದ ಜನರು ವಾಸಿಸುತ್ತಿದ್ದು, ಜನಾಂಗದಲ್ಲಿ ಯಾರಾದರೂ ಮೃತಪಟ್ಟರೆ ಶವಸಂಸ್ಕಾರಕ್ಕೆ ಒಂದು ಸೂಕ್ತ ಸ್ಮಶಾನವಿಲ್ಲ.ಗಾರ್ಡನ್ ರಸ್ತೆಯಲ್ಲಿರುವ ಸಾರ್ವಜನಿಕ ಸ್ಮಶಾನ ಈಗಾಗಲೇ ತುಂಬಿದ್ದು, ಒಂದು ಮೃತದೇಹ ಹೂಳಲು ಮತ್ತೊಂದು ಮೃತದೇಹದ ಎಲುಬುಗಳ ತೆಗೆಯಬೇಕಾಗಿದೆ. ಈ ಹಿನ್ನೆಲೆಯಲ್ಲಿ ತುಮಕೂರು ತಾಲೂಕು ಸ್ವಾಂದೇನಹಳ್ಳಿ ಪಕ್ಕದಲ್ಲಿರುವ ಸರಕಾರಿ ಭೂಮಿಯಲ್ಲಿ ಐದು ಎಕರೆ ಜಾಗವನ್ನು ಒಕ್ಕಲಿಗರ ಸ್ಮಶಾನಕ್ಕೆ ಮಂಜೂರು ಮಾಡುವಂತೆ ಜಿಲ್ಲಾಧಿಕಾರಿ ಕೆ.ಪಿ.ಮೋಹನ್‍ರಾಜ್ ಅವರಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಲಾಗಿದೆ.ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ನಚಿತರ ಸುದ್ದಿಗಾರರೊಂದಿಗೆ ಮಾತನಾಡಿದ ಒಕ್ಕಲಿಗ ಸಮುದಾಯದ ನರಸೇಗೌಡ ಅವರು,ತುಮಕೂರು ನಗರದಲ್ಲಿ 40 ಸಾವಿರಕ್ಕೂ ಹೆಚ್ಚು ಒಕ್ಕಲಿಗ ಸಮುದಾಯದ ಜನರಿದ್ದು,ಸರಿಯಾದ ಸ್ಮಶಾನವಿಲ್ಲ. ಆದ್ದರಿಂದ ಜಿಲ್ಲಾಡಳಿತ ಸ್ವಾಂದೇನಹಳ್ಳಿ ಸಮೀಪವಿರುವ ಸರಕಾರಿ ಭೂಮಿಯಲ್ಲಿ ರುದ್ರಭೂಮಿ ಮಂಜೂರು ಮಾಡಿಕೊಡ ಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ.

 

 

ಜಿಲ್ಲಾಧಿಕಾರಿಗಳು ಸಹ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.ಅಲ್ಲದೆ ನಗರದ ಟೌನ್‍ಹಾಲ್ ವೃತ್ತಕ್ಕೆ ಆದಿಚುಂಚನಗಿರಿಯ ಡಾ.ಬಾಲಗಂಗಾಧರನಾಥಸ್ವಾಮೀಜಿ ವೃತ್ತ ಎಂದು ನಾಮಕರಣ ಮಾಡಿದ್ದು,ಗೆಜೆಟ್‍ನಲ್ಲಿ ಕೂಡ ಪ್ರಕಟಣವಾಗಿದೆ.ಡಾ.ಶ್ರೀಶಿವಕುಮಾರಸ್ವಾಮೀಜಿ ಅವರು ವೃತ್ತವನ್ನು ಉದ್ಘಾಟಿಸಿ ದ್ದಾರೆ.ಆದರೆ ಕೆ.ಎಸ್.ಆರ್.ಟಿ.ಸಿ.ಯವರು ನಗರದಲ್ಲಿ ಓಡಿಸುತ್ತಿರುವ ನಗರಸಾರಿಗೆ ಬಸ್ಸುಗಳಲ್ಲಿ ಇಂದಿಗೂ ಟೌನ್‍ಹಾಲ್ ವೃತ್ತ ಎಂದೇ ಇದೆ.ಈ ಬಗ್ಗೆ ಹಲವಾರು ಬಾರಿ ಕೆ.ಎಸ್.ಆರ್.ಟಿ.ಸಿ. ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಮನವಿ ಮಾಡಿದ್ದರೂ ಯಾವುದೇ ಬದಲಾವಣೆ ಮಾಡಿಲ್ಲ.ಕೂಡಲೇ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಬಿ.ಜಿ.ಎಸ್. ವೃತ್ತ ಎಂದು ಬದಲಾಯಿಸಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದು ನರಸೇಗೌಡರು ತಿಳಿಸಿದರು.(ಫೋಟೋ ಇದೆ14ಟಿಯುಎಮ1)

► Follow us on –  Facebook / Twitter  / Google+

Facebook Comments

Sri Raghav

Admin