ವಕ್ಫ್ ಆಸ್ತಿ ಸಂರಕ್ಷಣೆಗೆ ಟಾಸ್ಕ್‍ಫೋರ್ಸ್ ಸಮಿತಿ ರಚನೆ

ಈ ಸುದ್ದಿಯನ್ನು ಶೇರ್ ಮಾಡಿ

tanveer

ಚಿತ್ರದುರ್ಗ, ಮೇ 15– ವಕ್ಫ್ ಬೋರ್ಡ್ ಆಸ್ತಿಗಳು ಕಬಳಿಕೆ ಹಾಗೂ ಒತ್ತುವರಿಯಾಗದಂತೆ ಸಂರಕ್ಷಿಸಲು ಟಾಸ್ಕ್‍ಫೋರ್ಸ್ ಸಮಿತಿಯನ್ನು ರಚಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ, ಅಲ್ಪಸಂಖ್ಯಾತ ಹಾಗೂ ವಕ್ಫ್ ಸಚಿವರಾದ ತನ್ವಿರ್‍ಸೇಠ್ ತಿಳಿಸಿದರು.  ಜಿಲ್ಲಾ ವಕ್ಫ್ ಮಂಡಳಿಯಿಂದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಮುತುವಲ್ಲಿಗಳ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕೇಂದ್ರ ಸರ್ಕಾರ 1995 ವಕ್ಫ್ ಕಾಯಿದೆ ರೂಪಿಸಿತು. ಈಗ ರಾಜ್ಯ ಸರ್ಕಾರ ವಕ್ಫ್ ಕಾಯಿದೆ ನಿಯಮ ಸಿದ್ದಪಡಿಸಿ ಸಾರ್ವಜನಿಕರಿಂದ ಸಲಹೆ ಆಕ್ಷೇಪಣೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ.ವಕ್ಫ್ ಆಸ್ತಿಗಳು ಅರೆ ಸರ್ಕಾರಿ ಆಸ್ತಿಯಾಗಿರುವುದರಿಂದ ದೇವರ ಹೆಸರಿನಲ್ಲಿ ಮೀಸಲಿಡಲಾಗಿದೆ. ಕೆಲವು ಜಾಗಗಳಲ್ಲಿ ಖಬರಸ್ಥಾನ್, ರುದ್ರಭೂಮಿಗಳು ಇಲ್ಲದಿರುವುದರಿಂದ ಮುತುವಲ್ಲಿಗಳ ಜವಾಬ್ದಾರಿ ಮತ್ತು ಕರ್ತವ್ಯ ಏನು ಎಂಬುದನ್ನು ತಿಳಿಸಲು ಇಂತಹ ಸಮ್ಮೇಳನಗಳನ್ನು ಪ್ರತಿ ಜಿಲ್ಲೆಯಲ್ಲಿಯೂ ನಡೆಸಲಾಗುವುದು ಎಂದರು.  ಸರ್ಕಾರಿ ಯೋಜನೆಗಳ ಬಗ್ಗೆ ಮುತುವಲ್ಲಿಗಳಿಗೆ ತಿಳುವಳಿಕೆ ನೀಡುವುದಲ್ಲದೆ ವಕ್ಫ್ ಆಸ್ತಿಗಳನ್ನು ಕಬಳಿಸುವ ಇಲ್ಲವೇ ಒತ್ತುವರಿ ಮಾಡುವವರ ಮೇಲೆ ಕ್ರಿಮಿನಲ್ಕೇಸು ಹಾಕಲಾಗುವುದು ಎಂದು ಎಚ್ಚರಿಸಿದ ಸಚಿವರು ಮಸೀದಿ, ಖಬರಸ್ಥಾನ್, ಈದ್ಗಾಗಳಲ್ಲಿ ಯಾವ್ಯಾವ ರೀತಿ ನಿಯಮಗಳನ್ನು ಪಾಲಿಸಬೇಕು ಎಂಬ ಹೊಣೆಗಾರಿಕೆ ಮುತುವಲ್ಲಿಗಳ ಮೇಲಿದೆ ಎಂದು ಹೇಳಿದರು. ಜಿಲ್ಲಾ ವಕ್ಫ್ ಮಂಡಳಿ ಚೇರ್ಮನ್ ಬಿ.ಕೆ.ರಹಮತ್‍ವುಲ್ಲಾ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಅಲ್ಲಾಭಕಾಷ್, ಆರ್.ಕೆ.ಸರ್ದಾರ್ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin