ವಚನಗಳ ಮೂಲಕ ಭಕ್ತಿಮಾರ್ಗ ತೋರಿದ ಮಹಾಸಂತ ದೇವರದಾಸಿಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

ದೇವಾಂಗ ಜನಾಂಗದಲ್ಲಿ ಮೊಟ್ಟ ಮೊದಲು ಪ್ರಸಿದ್ಧವಾದವರು ದೇವರ ದಾಸಿಮಯ್ಯ.ಸೀರೆ ನೇಯುವ ಕೆಲಸದಿಂದ ಜೀವನ ಸಾಗಿಸುತ್ತಿದ್ದ ಇವರು ರಾಮನಾಥ ಎನ್ನುವ ನಾಮಂಕಿತವನ್ನು ಕೊಟ್ಟು ಅನೇಕ ವಚನಗಳನ್ನು ರಚಿಸಿದ್ದಾರೆ.

ತುಂಬಾ ಉಪಯುಕ್ತ ಮತ್ತು ತಮ್ಮ ದಿನನಿತ್ಯದ ಜೀವನಕ್ಕೆ ಸಂಭಂದಿಸಿದ ವಿಷಯಗಳ ಬಗ್ಗೆಯೆ ರಚಿಸಿದ ದೇವರ ದಾಸಿಮಯ್ಯ ಅವರ ವಚನಗಳು ತುಂಬಾ ಸರಳವಾಗಿ ಮನೆಸೂರೆಗೊಳ್ಳುತ್ತವೆ.

ಇವರು ದೇವಾಂಗ/ ದೇವ ಬ್ರಾಹ್ಮಣ ದವರಿಗೆ ಕುಲಗುರು. ಅನೇಕ ಪವಾಡಗಳನ್ನಷ್ಟೇ ಅಲ್ಲ, ಮನುಷ್ಯನ/ಜೀವನದಲ್ಲಿ ದೇವರ ಸ್ಮರಣೆಯೂ ಹಾಗೂ ಜೀವನದಲ್ಲಿ ಸಾಧನೆಯೂ ಅಷ್ಟೇ ಪ್ರಮುಖವೆಂದು ನಂಬಿ ಭಕ್ತಿ ಸಾಧನೆಯಲ್ಲಿಯೇ ಬಹಳ ಹೆಸರನ್ನು ಪಡೆದವರು, ಒಂದು ರೀತಿಯಲ್ಲಿ ಎಲ್ಲರಿಗೂ ಶಿಕ್ಷಕರಾಗಿದ್ದರು.

ಅನೇಕ ಮಹಾನ್ ವ್ಯಕ್ತಿಗಳನ್ನು ತಮ್ಮ ಭಕ್ತಿಯ ವಾದದಿಂದ ಸೋಲಿಸಿ, ಆಗಿನ ಕಾಲದಲ್ಲಿಯೇ ಪ್ರಸಿದ್ಧಿ ಪಡೆದು ಹೆಸರಾಗಿದ್ದರು. ಶಿವನ ದರ್ಶನದಿಂದ ವರವನ್ನು ಪಡೆದ ದಾಸಿಮಯ್ಯ ಸರಳ, ಸಜ್ಜನಿಕೆಯ ಸ್ವಭಾವದವರಾಗಿದ್ದರು, ಎಲ್ಲರಲ್ಲಿಯೂ ಭಕ್ತಿಯ ಸಿಂಚನವನ್ನು ಸಿಂಪಡಿಸಿದರು. ಇವರ ಪತ್ನಿ ದುಗ್ಗಳೆಯೂ ಸಹ ಸತಿ ಶಿರೋಮಣಿಯಾಗಿ ಮಹಾ ಪ್ರತಿವ್ರತೆಯಾಗಿದ್ದರು.

ತಮ್ಮ ಗಂಡನ ಜೊತೆಯಲ್ಲಿ ಆಕೆ ಕೂಡ ಭಕ್ತಿಯಲ್ಲಿ,ಸಂಸಾರದಲ್ಲಿ ಹೆಸರು ಮಾಡಿದ್ದರು. ಇವರುಗಳ ಬಗ್ಗೆ ಹೆಚ್ಚಿಗೆ ಎಲ್ಲೂ ಪ್ರಚಾರಗಳಾಗಲಿ, ಪುಸ್ತಕಗಳಾಗಲಿ ಜಾಸ್ತಿ ಪ್ರಚಲಿತದಲ್ಲಿ ಇಲ್ಲದಿರುವುದೇ ನಮ್ಮ ದುರಾದೃಷ್ಠ. ಹಾಗಾಗಿ ಹೆಚ್ಚು ಬೆಳಕಿಗೆ ಬರಲಿಲ್ಲ, ಇಂತಹ ಮಹಾಸಾಧ್ವಿಗಳು ನಮ್ಮ ನಾಡಲ್ಲಿ ಇದ್ದರು ಎನ್ನುವುದಕ್ಕೆ ಕುರುಹುಗಳನ್ನು ಉಳಿಸುವುದು ನಮ್ಮ ಕರ್ತವ್ಯವಾಗಿದೆ. ಇತಿಹಾಸದಲ್ಲಿ,ಪುರಾಣದಲ್ಲಿ ಇವರ ಬಗ್ಗೆ ತಿಳಿಯಲು ಎಲ್ಲರು ಶ್ರಮಿಸಬೇಕಿದೆ.

ದೇವರ ದಾಸಿಮಯ್ಯನವರು ಶತ-ಶತಮಾನಗಳಿಂದ ಬಂದಂತಹ ದಕ್ಷಿಣ ಭಾರತದಲ್ಲಿ ಹೆಸರಾದ ಪ್ರಸಿದ್ಧ ಶರಣರಿಗಿಂತಲೂ, ಮೊದಲು ಬಂದಂತಹ ಮೊಟ್ಟ ಮೊದಲ ವಚನಕಾರರಾಗಿದ್ದಾರೆ. ಇವರೇ ವಚನಗಳಿಗೆ ತಳಹದಿ ನೀಡಿದವರು. ತಮ್ಮ ಸಾಮಾಜಿಕ ಜೀವನದಲ್ಲಿಯೇ ಬಹಳಷ್ಟು ಕಂಡುಕೊಂಡು ವಚನಗಳನ್ನು ರಚಿಸಿದರು. ಸೀರೆ ನೇಯುತ್ತಾ ತಮ್ಮ ಪ್ರಾಪಂಚಿಕ ಜೀವನದಲ್ಲಿ ಸಂಸಾರ ಸಾಗಿಸುತ್ತಾ, ಭಕ್ತಿ ಮಾರ್ಗವೇ ಉನ್ನತ ಎಂದು ಸಾರಿದರು.

ಪ್ರಜಾಪ್ರಭುತ್ವದ ಮೂಲ ಸೆಲೆಯೊಳಗೊಂಡ ವಚನಗಳನ್ನು ರಚಿಸುವ ಮೂಲಕ ಕಲ್ಯಾಣ ಕ್ರಾಂತಿಯನ್ನು ಮಾಡಿದ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯ ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯ ಜಯಂತಿ ಬಸವಣ್ಣನವರಿಗೂ ಮೊದಲ ಆದ್ಯ ವಚನಕಾರ ದೇವರ ದಾಸಿಮಯ್ಯ ಆಗಿದ್ದು. ಅವರ ಚಿಂತನೆಗಳನ್ನು ಬಸವಣ್ಣನವರು ಎತ್ತರದ ಮಟ್ಟಕ್ಕೆ ಕೊಂಡೊಯ್ದರು.

ದಾಸಿಮಯ್ಯ ರಚಿಸಿರುವ 176 ವಚನಗಳು ಲಭ್ಯವಿದ್ದು, ಅವುಗಳು ರಾಮನಾಥ ಕಾವ್ಯನಾಮ ಹೊಂದಿವೆ. ದೈವಿಕತೆಯೇ ಆತ್ಮಸಾಕ್ಷಿ, ಆತ್ಮಸಾಕ್ಷಿಯೇ ದೇವರು ಎಂದು ದಾಸಿಮಯ್ಯ ವಚನಗಳ ಮೂಲಕ ತಿಳಿಸಿದ್ದಾರೆ. ಕರುಣೆ, ಪ್ರೀತಿ, ವಿಶ್ವಾಸ, ನಂಬಿಕೆ, ವಾತ್ಸಲ್ಯಗಳು ದೈವಿಕ ಅಂಶಗಳಾಗಿವೆ.

ಇವುಗಳಲ್ಲಿ ಪ್ರೀತಿಯನ್ನು ನಮ್ಮ ಇಂದಿನ ಯುವಪೀಳಿಗೆ ದೇವರೆಂದು ಆರಾಧಿಸುತ್ತಿವೆ. ಈ ಆರಾಧನೆ ದುರ್ನಡತೆಯನ್ನು ಕಲಿಸದಿರಲಿ. ನಾವು ಸಮಾಜದಲ್ಲಿ ಹೇಗೆ ಬದುಕಬೇಕೆಂದು ತಿಳಿಸಿಕೊಡುವ ಕೆಲಸವನ್ನು ಶತಮಾನಗಳ ಹಿಂದೆ ಇವರು ರಚಿಸಿದ ವಚನಗಳು ಮಾರ್ಗದರ್ಶನ ಮಾಡುತ್ತವೆ.

ಜನ ಸಾಮಾನ್ಯರ ಬದುಕು-ಬವಣೆಗಳನ್ನು ಕುರಿತು ದೇವರ ದಾಸಿಮಯ್ಯ ರಚಿಸಿದ ವಚನಗಳಲ್ಲಿ ಜನರ ಅನುಭವಗಳನ್ನು ಚರ್ಚಿಸಲಾಗಿದೆ. ಜತೆಗೆ ಜನರ ಉನ್ನತಿಗೆ ಬೇಕಾದ ಜೀವನಾನುಭವಗಳನ್ನು ತಿಳಿಸಿದ್ದಾರೆ. ಇವು ಜನರ ಸಾಮಾಜಿಕ ಬದುಕು ನೆಮ್ಮದಿಯನ್ನು ಸಾರುತ್ತವೆ.

ವಚನ ಎಂದರೆ ಶರಣರ ಸಮಯೋಚಿತ ನುಡಿ ಎಂದರ್ಥ. ಶರಣರ ವಿಚಾರಧಾರೆಗಳನ್ನು ಸಮಾಜ ಅನುಸರಿಸಬೇಕು. ಜಾನಪದ ಸಾಹಿತ್ಯ ಸೃಷ್ಠಿಗೆ ಕಾರಣವಾದದ್ದು ಅನುಭವ ಜ್ಞಾನ. ಅದರಂತೆಯೇ ವಚನಗಳು ಅನುಭವ ಜ್ಞಾನದ ಮೂಲಕ ಹುಟ್ಟು ಪಡೆಯಿತು

ಇಂದಿನ ನಮ್ಮ ಸಮಾಜಕ್ಕೆ ದಾಸಿಮಯ್ಯ ರಚಿಸಿದ ವಚನಗಳ ಅಧ್ಯಯನ ಅವಶ್ಯಕವಾಗಿದೆ. ಏಕೆಂದರೆ ಭೂಮಿ, ಅಧಿಕಾರ, ಸಂಪತ್ತಿಗಾಗಿ ಲೌಕಿಕ ವಿಲಾಸಿ ಜೀವನಕ್ಕಾಗಿ ಪ್ರಗತಿಯ ಹೆಸರಿನಲ್ಲಿ ಮನುಷ್ಯ ಮಾಡುವ ಕೆಲಸಗಳಿಂದಾಗುವ ಪರಿಣಾಮಗಳನ್ನು ವಚನದಲ್ಲಿ ಉಲ್ಲೇಖಿಸಲಾಗಿದೆ.

ಇವುಗಳ ಅಧ್ಯಯನ ಮನುಷ್ಯನನ್ನು ಅರಿಷಡ್ವರ್ಗಗಳಿಂದ ಗೆಲ್ಲವು ಸಹಾಯ ಮಾಡುತ್ತಿವೆ ದೇವರ ದಾಸಿಮಯ್ಯನವರು ರಚಿಸಿದ ವಚನಗಳು:
ಅಚ್ಚ ಶಿವಭಕ್ತಂಗೆ ಹೊತ್ತಾರೆ ಅಮವಾಸೆ
ಮಟಮಧ್ಯಾಹ್ನ ಸಂಕ್ರಾಂತಿ;
ಮತ್ತೆ ಅಸ್ತಮಾ ನ ಪೌರ್ಣಮಿ ಹುಣ್ಣಿಮೆ;
ಭಕ್ತನ ಮನೆಯ ಅಂಗಳವೆ ವಾರಣಾಸಿ ಕಾಣಾ!
ರಾಮನಾಥ ||

Facebook Comments