ವಚನ ಸಾಹಿತ್ಯ ಪರಿಚಯಿಸಿದ ಉಳವಿಯ ಚನ್ನಬಸವಣ್ಣ

ಈ ಸುದ್ದಿಯನ್ನು ಶೇರ್ ಮಾಡಿ

23
ಬೈಲಹೊಂಗಲ,ಫೆ.2- 12ನೇ ಶತಮಾನದಲ್ಲಿ ವೀರಶೈವರ ಕುರಿತು ಅಪವಾದಗಳು ಎದುರಾದಾಗ ಶರಣರೆಲ್ಲರೂ ಕೂಡಿ ತಮ್ಮ ವಚನಗಳ ಸಾಹಿತ್ಯವನ್ನು ನಾಡಿಗೆ ಪರಿಚಯಿಸಿದರು. ಅವರಲ್ಲಿ ಉಳವಿಯ ಚನ್ನಬಸವಣ್ಣವರು ಕೂಡಾ ಒಬ್ಬರು ಎಂದು ಶಾಖಾಮೂರುಸಾವಿರಮಠದ ಪ್ರಭುನೀಲಕಂಠ ಸ್ವಾಮಿಜಿ ಹೇಳಿದರು.  ಅವರು ಬುಧವಾರ ಪಟ್ಟಣದ ಮರಡಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಉಳವಿಗೆ ಹೊರಟಿರುವ ಭಕ್ತರ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿ, ಆಗೀ ಕಾಲದಲ್ಲಿ ಬಸವಣ್ಣ, ಅಕ್ಕಮಹಾದೇವಿ, ಹರಳಯ್ಯ ಅವರಂತಹ ಮಹಾನ ಶರಣರುಕನ್ನಡ ನಾಡಿಗೆ ವಚನಗಳನ್ನು ಕೊಡುಗೆಯಾಗಿ ನೀಡಿದವರು.

ಜಾತಿಯತೆಯ ವಾದಗಳು ಬುಗಿಲೆದ್ದಾಗ ತಂಡತಂಡವಾಗಿ ದೇಶ್ಯಾದಂತ್ಯ ಪರ್ಯಟನ ಮಾಡಿ ವೀರಶೈವ ಸಮುದಾಯವರನ್ನು ಒಗ್ಗೂಡಿಸಿ ಪಾದಯಾತ್ರೆಯ ಮೂಲಕ ವಚನಗಳನ್ನು ಪರಿಚಯಿಸುವದರ ಮೂಲಕ ನಾಡಿನಲ್ಲಿ ಶಾಂತಿ ನೆಲೆಯೂರುವಂತೆ ಮಾಡಿದ್ದರು ಎಂದರು.  ಉತ್ತರ ಭಾಗಕ್ಕೆ ಕೆಲವರು ಹೊರಟರೆ, ದಕ್ಷಿಣ ಭಾಗಕ್ಕೆ ಉಳವಿಯ ಚನ್ನ ಬಸವಣ್ಣ, ಹರಳಯ್ಯ ಮುಂತಾದ ಶರಣರು ಈ ಭಾಗದಲ್ಲಿ ಬಂದು ನೆಲೆಸಿ ಇಲ್ಲಿನಜನರಲ್ಲಿಧರ್ಮದಕುರಿತುಜಾಗೃತಿ ಮೂಡಿಸಿದ್ದರು. ಲಿ. ಗಂಗಮ್ಮ ಅಂಗಡಿಯವರು ಸುಮಾರು 50 ವರ್ಷಗಳ ಹಿಂದೆ ಉಳವಿಯ ಚನ್ನಬಸವಣ್ಣನ ದರ್ಶನಕ್ಕೆ ಪಾದಯಾತ್ರೆ ಆರಂಭಿಸಿ ಇಂದು ಸುವರ್ಣ ಮಹೋತ್ಸವದ ಪಾದಯಾತ್ರೆಯಲ್ಲಿಜರು ಭಕ್ತಿಯಿಂದ ಪಾಲ್ಗೊಳ್ಳುತ್ತಿರುವದು ಶ್ಲಾಘನೀಯ. ಎಲ್ಲ ಯಾತ್ರಾತ್ರಿಗಳು ತಮ್ಮ ಆರೋಗ್ಯದ ಜೊತೆಗೆ ಪರಿಸರವನ್ನು ಕಾಪಾಡಿಕೊಂಡು ಯಾತ್ರೆಯನ್ನು ಯಶಸ್ವಿಯಾಗಿ ಪೂರೈಸಲಿ ಎಂದರು.

ಉಳವಿಯ ಶಂಕ್ರಯ್ಯ ಸ್ವಾಮಿಗಳು ಮಾತನಾಡಿ, ಬರಗಾಲದ ದಿನಗಳಲ್ಲಿಯೂ ಸಹ ಉಳವಿಯಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದು, ಚನ್ನಬಸವಣ್ಣದರ್ಶನಕ್ಕೆ ಬರುವ ಯಾತ್ರಾತ್ರಿಗಳು ನೀರು ಮಿತವಾಗಿ ಬಳಸಿ, ಪರಿಸರ ಸ್ವಚ್ಚತೆಯುಕಾಪಾಡಬೇಕೆಂದರು.ಈ ಸಂದರ್ಭದಲ್ಲಿ ಪುರಸಭೈ ಉಪಾಧ್ಯಕ್ಷ ಉಳವಪ್ಪ ಬಡ್ಡಿಮನಿ, ವಿಪಕ್ಷ ನಾಯಕ ಮಹಾಂತೇಶ ತುರಮರಿ, ಬಿಜೆಪಿ ಮಂಡಲ ಅಧ್ಯಕ್ಷ ಮಡಿವಾಳಪ್ಪ ಹೋಟಿ, ಮಲ್ಲನಾಯ್ಕ ಪಾಟೀಲ, ಪಾಂಡಪ್ಪ ಇಂಚಲ, ಈಶ್ವರಕೊಪ್ಪದ, ಬಸವರಾಜ ಶಿಂತ್ರಿ, ದುಂಡವ್ವ ಮುರುಗಿ, ಚನ್ನಪ್ಪಅಂಗಡಿ ಹಾಗೂ ನೂರಾರು ಭಕ್ತರು ಇದ್ದರು.50 ಕ್ಕೂ ಹೆಚ್ಚು ಭಕ್ತಾಧಿಗಳು ಪಟ್ಟಣದಿಂದ ಶ್ರೀಕ್ಷೇತ್ರ ಉಳವಿಗೆ 50ನೇ ವರ್ಷದ ಪಾದಯಾತ್ರೆ ಕೈಗೊಂಡರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin