ವನ್ಯಜೀವಿಗಳಿಗೆ ಕುಡಿಯುವ ನೀರು : ಕವಿಕಾ ವತಿಯಿಂದ 2.5 ಲಕ್ಷ ರೂ.ನೆರವು

ಈ ಸುದ್ದಿಯನ್ನು ಶೇರ್ ಮಾಡಿ

5
ಬೆಂಗಳೂರು, ಫೆ.22-ನಾಗರಹೊಳೆ ಅಭಯಾರಣ್ಯ ವ್ಯಾಪ್ತಿಯಲ್ಲಿ ವನ್ಯಜೀವಿಗಳಿಗೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿರುವ ಹಿನ್ನೆಲೆಯಲ್ಲಿ ಟ್ಯಾಂಕರ್‍ಗಳ ಮೂಲಕ ನೀರು ಸರಬರಾಜು ಮಾಡುವ ಉದ್ದೇಶದಿಂದ ಕವಿಕಾ ಸಂಸ್ಥೆಯಿಂದ ಎರಡೂವರೆ ಲಕ್ಷ ರೂ.ಗಳ ಆರ್ಥಿಕ ನೆರವು ನೀಡಲಾಯಿತು.ಬೇಸಿಗೆ ಪ್ರಾರಂಭದಲ್ಲೇ ವನ್ಯಜೀವಿಗಳಿಗೆ ತೊಂದರೆಯಾಗಿದ್ದು, ಅರಣ್ಯದ ಮಧ್ಯಭಾಗದಲ್ಲಿರುವ ಕೆರೆಗಳು ಬತ್ತಿಹೋಗಿವೆ. ಕೆರೆಗಳಿಗೆ ಅಲ್ಲಲ್ಲಿ ನಿರ್ಮಿಸಿರುವ ಟ್ಯಾಂಕ್‍ಗಳಿಗೆ ಖಾಸಗಿ ಟ್ಯಾಂಕರ್‍ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ವಿದ್ಯುತ್ ಕಾರ್ಖಾನೆ ವತಿಯಿಂದ ಎರಡೂವರೆ ಲಕ್ಷ ರೂ. ನೆರವು ನೀಡಲಾಗಿದೆ.ಕವಿಕಾ ಸಂಸ್ಥೆ ಅಧ್ಯಕ್ಷ ಎಸ್.ಮನೋಹರ್, ವ್ಯವಸ್ಥಾಪಕ ನಿರ್ದೇಶಕ ಎಸ್.ವಿ.ಗೋವಿಂದರಾಜು, ಕಾರ್ಯನಿರ್ವಹಣಾ ನಿರ್ದೇಶಕ ಎಸ್.ಕೆ.ರಾಮಚಂದ್ರರಾವ್ ಹಾಗೂ ಕವಿಕಾ ಸಂಸ್ಥೆ ಅಧಿಕಾರಿಗಳು, ಅಂತರ್ ಸಂತೆ ಸಹಾಯಕ ಅರಣ್ಯ ಸರಂಕ್ಷಣಾಧಿಕಾರಿಗಳು, ವಲಯ ಅರಣ್ಯಾಧಿಕಾರಿಗಳ ಸಮ್ಮುಖದಲ್ಲಿ ಪರಿಹಾರಧನದ ಚೆಕ್ ವಿತರಿಸಲಾಯಿತು.ಪ್ರತಿದಿನ ಎರಡು ಟ್ಯಾಂಕರ್‍ಗಳು ಎರಡು ತಿಂಗಳ ಅವಧಿಯವರೆಗೆ ನೀರು ಸರಬರಾಜು ಮಾಡಲು ಈ ಆರ್ಥಿಕ ನೆರವು ಅನುಕೂಲವಾಗುತ್ತದೆ ಎಂದು ಮನೋಹರ್ ತಿಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin