ವಯಸ್ಸು ನೂರಾದರೂ ಓಟದಲ್ಲಿ ಮೂರು ಚಿನ್ನ ಗೆದ್ದ ಭಾರತ ಮೂಲದ ಅಜ್ಜಿ

ಈ ಸುದ್ದಿಯನ್ನು ಶೇರ್ ಮಾಡಿ

Man-Kourವ್ಯಾಂಕೋವರ್ ಆ.31 : ಶತಾಯುಷಿ ಭಾರತೀಯ ಮಹಿಳೆಯೊಬ್ಬರು 100 ಮೀ. ಓಟದಲ್ಲಿ ಚಿನ್ನದ ಪದಕ ಗೆದ್ದು ಅಚ್ಚರಿ ಮೂಡಿಸಿದ್ದಾರೆ. ಹೌದು. ಅಮೆರಿಕನ್ ಮಾಸ್ಟರ್ ಆಯತ್ಲೆಟಿಕ್ಸ್ನಲ್ಲಿ ಇಂಥದೊಂದು ಅಪರೂಪದ ದಾಖಲೆ ನಿರ್ಮಾಣವಾಗಿದೆ. ಭಾರತೀಯ ಮೂಲದ ಮನ್ ಕೌರ್ ಈ ಸಾಧನೆ ಮಾಡಿರುವ ಅಜ್ಜಿ. ಕೆನಡಾದಲ್ಲಿ ನಡೆದ ಕೂಟದಲ್ಲಿ ಯುವ ಜನತೆಯನ್ನೂ ನಾಚಿಸುವಂತೆ ಓಡಿದ ಅಜ್ಜಿ ಚಿನ್ನದ ಪದಕ ಗೆದ್ದಿದ್ದಾರೆ. 100 ವರ್ಷ ಮೇಲ್ಪಟ್ಟವರಿಗಾಗಿ ನಡೆದ ಈ ರೇಸ್ನಲ್ಲಿ ಬೇರೆ ಸ್ಪರ್ಧಿಗಳೇ ಇರಲಿಲ್ಲ.ಆದರೂ ರೇಸ್ನಲ್ಲಿ ಓಡಿದ ಅಜ್ಜಿ 1 ನಿಮಿಷ, 21 ಸೆಕೆಂಡ್ಸ್ನಲ್ಲಿ 100 ಮೀ.ಗುರಿಯನ್ನು ತಲುಪಿದ್ದಾರೆ. ಈ ಕೂಟದಲ್ಲಿ ಶಾಟ್ಪುಟ್ ಮತ್ತು ಜಾವೆಲಿನ್ ಎಸೆತದಲ್ಲೂ ಕೌರ್ ಅವರು ಚಿನ್ನ ಗೆದ್ದು ಹ್ಯಾಟ್ರಿಕ್ ಸಾಧಿಸಿದ್ದಾರೆ.

ಕೌರ್ ಈಗಾಗಲೇ ಹಲವು ಮಾಸ್ಟರ್ ಅಥ್ಲೆಟಿಕ್ಸ್ನಲ್ಲಿ ಭಾಗವಹಿಸಿದ್ದಾರೆ. 20ಕ್ಕೂ ಹೆಚ್ಚು ಪದಕ ಗೆದ್ದಿದ್ದಾರೆ. ಇನ್ನೊಂದು ಅಚ್ಚರಿಯ ವಿಷಯವೆಂದರೆ ಮನ್ಕೌರ್ ಅವರು ಓಡಲು ಆರಂಭಿಸಿದ್ದೇ 93ನೇ ವರ್ಷದಲ್ಲಂತೆ. ತಾಯಿಯ ಅತ್ಯುತ್ತಮ ಆರೋಗ್ಯ ಗಮನಿಸಿದ ಅವರ ಪುತ್ರ ಗುರುದೇವ್ ಸಿಂಗ್, ತಾಯಿಗೆ ಹಿರಿಯರ ಕ್ರೀಡಾಕೂಟದಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಿದರಂತೆ. ಹೀಗಾಗಿ ಕೌರ್ 93ನೇ ವಯಸ್ಸಿನಲ್ಲಿ ಕ್ರೀಡಾಕ್ಷೇತ್ರಕ್ಕೆ ಕಾಲಿರಿಸಿದ್ದರು. ಅನಂತರ ಪ್ರತಿ 4 ವರ್ಷಕ್ಕೊಮ್ಮೆ ನಡೆಯುವ ವಿಶ್ವ ಮಾಸ್ಟರ್ ಆಯತ್ಲೆಟಿಕ್ಸ್ನಲ್ಲಿ ಭಾಗವಹಿಸುತ್ತ ಬಂದಿದ್ದಾರೆ. ಮಾಸ್ಟರ್ ಆಯತ್ಲೆಟಿಕ್ಸ್ 30 ವರ್ಷ ಮೇಲ್ಪಟ್ಟವರಿಗಾಗಿ ನಡೆಯುವ ಕ್ರೀಡಾಕೂಟ.

► Follow us on –  Facebook / Twitter  / Google+

Facebook Comments

Sri Raghav

Admin