ವಯಸ್ಸು 70.. ಹುಮ್ಮಸ್ಸು 16..! : ಇಳಿವಯಸ್ಸಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ಪರ್ಬತ್

ಈ ಸುದ್ದಿಯನ್ನು ಶೇರ್ ಮಾಡಿ

SSLC-Exam--01

ಗಾಂಧಿನಗರ. ಮಾ.21 : ಇವರು ಪರ್ಬತ್ ಮಕ್ವಾನ. ವಯಸ್ಸು 70 ವರ್ಷ, ಕಾಂಗ್ರೆಸ್ ಮುಖಂಡರು. ಆದರೆ, ಇವರ ವಿದ್ಯೆ ಕಲಿಯುವ ಹುಮ್ಮಸ್ಸಿಗೆ ವಯಸ್ಸು ಅಡ್ಡಿಬಂದಿಲ್ಲ. 55 ವರ್ಷಗಳ ಹಿಂದೆ ಶಿಕ್ಷಣಕ್ಕೆ ಗುಡ್‍ಬೈ ಹೇಳಿದ ಏಳು ಮಕ್ಕಳ ತಂದೆ, ಗುಜರಾತ್‍ನ ಜುನಗಡ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಪರ್ಬತ್ ಈಗ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು ಗಮನ ಸೆಳೆದಿದ್ದಾರೆ. ಇವರು ವಿದ್ಯಾರ್ಥಿನಿಲಯವೊಂದರ ಒಡೆಯರೂ ಹೌದು. ಇವರ ಮೂರು ಗಂಡು ಮಕ್ಕಳು ಸ್ನಾತಕೋತ್ತರ ಪದವಿ ಪಡೆದು ಹುನ್ನತ ಹುದ್ದೆಯಲ್ಲಿದ್ದಾರೆ. ಕಾರಣಾಂತರಗಳಿಂದ ವಿದ್ಯೆಯನ್ನು ಅರ್ಧಕ್ಕೆ ನಿಲ್ಲಿಸಿದ್ದರು. ಈಗಿನ ಹೊಸ ಪಠ್ಯಕ್ರಮವನ್ನು ಸವಾಲಾಗಿ ಸ್ವೀಕರಿಸಿ ಪರೀಕ್ಷೆ ಬರೆದಿದ್ದಾರೆ. ಈ ವಯಸ್ಸಿನಲ್ಲಿ ಪರೀಕ್ಷೆ ಬರೆಯಲು ಇವರಿಗೆ ಇತರೆ 101 ವರ್ಷಗಳ ತಾಯಿ ಪ್ರೇರಣೆಯಂತೆ !

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin