ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಬಲಿ
ತುಮಕೂರು, ಸೆ.16-ವರದಕ್ಷಿಣೆ ದಾಹಕ್ಕೆ ಗೃಹಿಣಿಯೊಬ್ಬಳು ಬಲಿಯಾದ ಪ್ರಕರಣ ಸಂಬಂಧ ಪಾವಗಡ ತಾಲ್ಲೂಕು ವೈ.ಎನ್.ಹೊಸಕೋಟೆ ಹೋಬಳಿಯ ಅನಿಲ್ಕುಮಾರ್ ಹಾಗೂ ಕುಟುಂಬದವರನ್ನು ಪೊಲೀಸರು ಬಂಧಿಸಿದ್ದಾರೆ. ಅನಿಲ್ಕುಮಾರ್ ಸರ್ಕಾರಿ ನೌಕರನಾಗಿದ್ದು, ಐದು ವರ್ಷಗಳ ಹಿಂದೆ ತಮ್ಮ ಸಂಬಂಧಿ ಮಂಜುಳಾರನ್ನು ಸಾಕಷ್ಟು ವರದಕ್ಷಿಣೆ ಪಡೆದು ವಿವಾಹವಾಗಿದ್ದರು. ಆದರೆ ಅನಿಲ್ ಕುಟುಂಬದವರು ಸದಾ ವರದಕ್ಷಿಣೆ ತರುವಂತೆ ಮಂಜುಳಾಳನ್ನು ಪೀಡಿಸುತ್ತಾ ಕಿರುಕುಳ ನೀಡುತ್ತಿದ್ದರು ಎಂದು ತಿಳಿದುಬಂದಿದೆ. ಮಂಜುಳಾಗೆ ತಿಳಿಯದಂತೆ ಅನಿಲ್ ಮತ್ತೊಂದು ಮದುವೆ ಮಾಡಿಕೊಂಡಿದ್ದಾನೆ ಎಂಬ ವದಂತಿ ಹರಡಿ, ಹಲವು ಬಾರಿ ಪಂಚಾಯಿತಿಗಳು ನಡೆದಿದ್ದವು.
ಹಣ ತರುವಂತೆ ಪೀಡಿಸಿ ಆಕೆಯ ಮೇಲೆ ಸೀಮೆಎಣ್ಣೆ ಸುರಿದು ಅನಿಲ್ ಮನೆಯವರು ಬೆಂಕಿ ಹಚ್ಚಿದ್ದರು.ಆಕೆಯನ್ನು ಪಾವಗಡದ ಸರ್ಕಾರಿ ಆಸ್ಪತ್ರೆಗೆ ಕರೆದ್ಯೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಳು.ಮಂಜುಳಾ ಮನೆಯವರು ಪೊಲೀಸರಿಗೆ ದೂರು ನೀಡುತ್ತಿದ್ದಂತೆ ಹೆದರಿದ ಆಕೆಯ ಮಾವ ಅರಿವಿಲು ಶ್ರೀನಿವಾಸ್ ನೇಣು ಬಿಗಿದುಕೊಂಡು ಸಾವನ್ನಪ್ಪಿದರು. ಈ ಸಂಬಂಧ ವೈ.ಎನ್.ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.ತನಿಖೆ ಕೈಗೆತ್ತಿಕೊಂಡ ಮಧುಗಿರಿ ಡಿಎಸ್ಪಿ ಕಲ್ಲೇಶಪ್ಪಆದೇಶದ ಮೇರೆಗೆ ಸ್ಥಳೀಯ ಪಿಎಸ್ಐ ರಾಘವೇಂದ್ರ ಪ್ರಕಾಶ್ ವರದಕ್ಷಿಣೆ ಕಾಯ್ದೆಯಡಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
► Follow us on – Facebook / Twitter / Google+